`ಮಾಯೆ ಅಂಡ್ ಕಂಪನಿ’ ಚಿತ್ರಕ್ಕೆ ಸೆನ್ಸರ್ ಅಸ್ತು

“ಮಾಯೆ ಅಂಡ್ ಕಂಪನಿ” ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದ್ದು  ಅತಿ ಶೀಘ್ರದಲ್ಲೇ ಬೆಳ್ಳಿತೆರೆಗೆ ಬರಲಿದೆ. ಜೊತೆಗೆ ಚಿತ್ರದ ಟ್ರೈಲರ್, ಲಿರಿಕಲ್ ಸಾಂಗ್ ಬಿಡುಗಡೆ ಆಗಲಿದೆ. ಎಂ ಎನ್ ರವೀಂದ್ರರಾವ್ ನಿರ್ಮಾಣ ಮಾಡಿದ್ದಾರೆ.

ಸೋಶಿಯಲ್ ಕ್ರೈಂ ಕಥೆ ಹೊಂದಿರುವ ಚಿತ್ರಕ್ಕೆ ಬಿ  ಸಂದೀಪ್ ಕುಮಾರ್ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅರ್ಜುನ್ ಕಿಶೋರ್ ಚಂದ್ರ, ನವೀನ್, ಯಶಸ್ವಿನಿ ಮತ್ತಿತರು ನಟಿಸಿದ್ದು, ಸಹ ನಿರ್ಮಾಪಕರಾಗಿ ಜಿ ಮೋಹನ್ ಕುಮಾರ್, ಎಸ್ ನರಸಿಂಹರಾಜು ಕೈಜೋಡಿಸಿದ್ದಾರೆ. ಸಂಗೀತ ಸಾಹಿತ್ಯ ಡಾಕ್ಟರ್ ಹೆಚ್‍ಎಸ್ ವೆಂಕಟೇಶಮೂರ್ತಿ ಗಾಯನ ವಿದ್ವಾನ್. ಶಂಕರ್ ಶಾನ್ಬೋಗ್ ಹಾಗೂ ಇಂಚರ ಪ್ರವೀಣ್ ಕುಮಾರ್  ಸಂಗೀತ ನಿರ್ದೇಶನ ನೀಡಿದ್ದಾರೆ.