ಮಾಯಾ ಜಗತ್ತಿನ ಮೋಡಿ ಮಂಜು ಮರಳು

ಚಿತ್ರರಂಗದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಎಷ್ಟರ ಮಟ್ಟಿದೆ ಇದೆ ಎನ್ನುವುದನ್ನು ನೋಡಿತ್ತಾ ಬರುತ್ತಿದ್ದೇವೆ. ಇದೀಗ ಅದರ ಸಾಲಿಗೆ ಮತ್ತೊಬ್ಬ ಯುವ ಪ್ರತಿಭೆ ಅಂಚೆ ಇಲಾಖೆಯಲ್ಲಿ ಇದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಸಿನಿಮಾದಲ್ಲಿ ತಮ್ಮನ್ನು ತೊಡಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ನಿರ್ದೇಶನ ಮಾಡಿದ ಸರ್ಕಾರ್ ಚಿತ್ರದ ಬಳಿಕ ನಿರ್ದೇಶಕ ಮಂಜು ಪ್ರೀತಂ ಅವರು ‘ರಾಮದೂತ’ ಮತ್ತು ‘ರಾವಣಾಸುರ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈಗಾಗಲೇ ಈ ಎರಡು ಚಿತ್ರಗಳು ಒಂದು ಹಂತದ ಶೂಟಿಂಗ್ ಮುಗಿದಿದೆ. ಈ ನಡುವೆ ‘ಲವ್ ವಾರ್ ಮತ್ತು ‘ಎಲ್ಲಿಜಾರಿತೋ ಮನಸು’ ಚಿತ್ರಗಳನ್ನು ಆರಂಭಿಸಿ ಹಿಂದೆ ಮುಂದೆ ಚಿತ್ರೀಕರಣ ಪೂರ್ಣಗೊಳಸಿಲು ಮುಂದಾಗಿದ್ದರು. ಸದ್ಯ ಕೊರೊನಾ ಸೋಂಕಿನಿಂದ ಸದ್ಯಕ್ಕೆ ಆ ಯೋಜನೆ ಅಲ್ಲಿಗೆ ನಿಂತಿದೆ. ಈ ನಡುವೆ ಲಾಕ್ಡೌನ್‌ಅವಧಿಯ ಸಮಯವನ್ನು ವ್ಯರ್ಥ ಮಾಡದೆ, ಉಪೇಂದ್ರ ಹಾಗೂ ಗಣೇಶ್‌ಅವರಿU ಹೊಂದಿಕೊಳ್ಳುವ ಕಥೆ ಸಿದ್ದಪಡಿಸಿಕೊಂಡಿದ್ದಾರೆ.
ನಟರಾದ ಉಪೇಂದ್ರ ಮತ್ತು ಗಣೇಶ್ ಅವರೇ ಸ್ಪೂರ್ತಿ ಅವರ ಸಹಕಾರ ಮತ್ತು ಪ್ರೋತ್ಸಾಹವನ್ನು ಎಂದಿಗೂ ಮರೆಯುವುದಿಲ್ಲ. ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಗಳಿಸುವ ಉದ್ದೇಶವೂ ಇದೆ ಎನ್ನುತ್ತಾರೆ ನಿರ್ದೇಶಕ ಮಂಜುಪ್ರೀತಂ.