ಮಾಯಾವಿ ಬೆನ್ನತ್ತಿದ ಶಿವಾಜಿ ವಿಭಿನ್ನ ಅವತಾರದಲ್ಲಿ ರಮೇಶ್..

* ಚಿ.ಗೋ ರಮೇಶ್

ಸೂಕ್ಷ್ಮ ಸಂವೇದನೆಯ ನಟ,ನಿರ್ದೇಶಕ ರಮೇಶ್ ಅರವಿಂದ್ , ಹೊಸತನದ ಪಾತ್ರದಲ್ಲಿ ಕಾಣಿಸಿಕೊಂಡಿರುವ ” ಶಿವಾಜಿ ಸೂರತ್ಕಲ್- 2″ ಮುಂದಿನವಾರ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಶಿವಾಜಿ ಸೂರತ್ಕಲ್ ಭಾಗ ಒಂದರ ಭರ್ಜರಿ ಯಶಸ್ಸಿನ ನಂತರ ನಿರ್ಮಾಪಕ ಅನೂಪ್ ಗೌಡ ಮೊದಲ ಭಾಗಕ್ಕಿಂತ ಎರಡನೇ ಭಾಗವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.  ವಿಭಿನ್ನ ಅವತಾರದಲ್ಲಿ ರಮೇಶ್ ಅರವಿಂದ್ ಮಾಯಾವಿಯ ಬೆನ್ನು ಹತ್ತಿದ್ದಾರೆ.

ಚಿತ್ರದ ಟ್ರೈಲರ್ ಬಿಡುಗಡೆಯ ವೇಳೆ ಮಾತಿಗಿಳಿದ ನಟ ರಮೇಶ್ ಅರವಿಂದ್, ಹೋಟೆಲ್ ಗೆ ಬಂದಾಗ ಮೆನು ಕಾರ್ಡ್ ಇರುವಂತೆ ಚಿತ್ರಮಂದಿರಕ್ಕೆ ಬರುವ ಮಂದಿಗೆ ಟ್ರೈಲರ್ ಮೆನು ಕಾರ್ಡ್ ಇದ್ದಂತೆ.

ಭಾಗ ಒಂದಕ್ಕಿಂತ ಎರಡು ಚೆನ್ನಾಗಿ ಮೂಡಿ ಬಂದಿದೆ. ಎರಡು ರೋಲ್,  ಡಿಟಕ್ಟೀವ್ ಪಾತ್ರ. ಮಾನಸಿಕ ತೊಂದರೆ  ಖಿನ್ನತೆ ನಡುವೆ ,ಮಾತ್ರೆ ತೆಗೆದುಕೊಂಡು  ಮಾಯಾವಿ ಯಾರು ಎಂದು ಹುಡುಕುವ ಪಾತ್ರ. ಭಾಗ ಒಂದರಲ್ಲಿ ಹತ್ತಾರು ಮಂದಿ ಸೇರಿ ಒಬ್ಬರನ್ನು‌ ಕೊಲೆ ಮಾಡಿದ್ದರು. ಭಾಗ ಎರಡರಲ್ಲಿ ಒಬ್ಬ ,ಹತ್ತಾರು ಮಂದಿ ಕೊಲೆ ಮಾಡ್ತಾರೆ. ಆ ಮಾಯಾವಿ ಯಾರು ಎನ್ನುವುದೇ ಚಿತ್ರದ ರೋಚಕ. ಸಣ್ಣ ಸಣ್ಣ ಕಥೆಗಳ‌ ನಡುವೆ ಆಸಕ್ತಿಕ ಘಟನೆಗಳು ಕುತೂಹಲ ಹುಟ್ಟಿಸಲಿವೆ ಎಂದರು.

ನಿರ್ಮಾಪಕ ಅನೂಪ್, ನಿರ್ದೇಶಕ ಆಕಾಶ್ ಶ್ರೀವತ್ಸ, ಸೇರಿದಂತೆ ಇಡೀ‌ತಂಡಕ್ಕೆ ಮತ್ತಷ್ಟು ಅವಕಾಶ ಸಿಗಲಿ ಎನ್ನುವ ಮೂಲಕ ಇತರೆ ಕಲಾವಿದರು ಬೆಳೆಯಲಿ ಎನ್ನುವ ದೊಡ್ಡತನ ಪ್ರರ್ಶಿಸಿದರು.

ನಿರ್ದೇಶಕ ಆಕಾಶ್ ಶ್ರೀವತ್ಸ, ಮಾಹಿತಿ ನೀಡಿ  ಲಾಕ್ ಡೌನ್ ಸಮಯದಲ್ಲಿ ರಮೇಶ್ ಸಾರ್ ಜೊತೆ ವಾಟ್ಸ್ ಅಪ್ ಚಾಟಿಂಗ್ ನಲ್ಲಿ ಸಿದ್ದ ಮಾಡಿಕೊಂಡ ಕಥೆ. ಕೊಲೆ ಯಾರು ಮಾಡಿದ್ದಾರೆ ಎನ್ನುವುದು ಕುತೂಹಲ, ಪತ್ತೆದಾರಿ  ಜೊತೆಗೆ ಎಮೋಷನ್ ಕೂಡ ಇದೆ. ಚಿತ್ರವನ್ನು ಒಟಿಟಿ ಅಥವಾ ಟಿವಿಯಲ್ಲಿ ನೋಡಿದರೆ ಅರ್ಥವಾಗುವುದಿಲ್ಲ. ಚಿತ್ರಮಂದಿರದಲ್ಲಿ ನೋಡಬೇಕು ಎಂದರು.

ನಟಿ ರಾಧಿಕಾ ಚೇತನ್, ಭಾಗ ಒಂದರಲ್ಲಿ ಸತ್ತಿದ್ದ ಜನನಿ ಭಾಗ ಎರಡರಲ್ಲಿ ಹೇಗೆ ಬಂದಳು ಎನ್ನುವುದೇ ಕುತೂಹಲ ಎಂದರೆ, ಮತ್ತೊಬ್ಬ ನಟಿ ಮೇಘನಾ ಗಾಂವಕರ್, ಡಿಸಿಪಿ ಪಾತ್ರ, ರಮೇಶ್ ಸರ್ ಬಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.

ಹಾಡೊಂದಲ್ಲಿ ಕಾಣಿಸಿಕೊಂಡಿರುವ ನಟಿ ಸಂಗೀತ ಕಾಣಿಸಿಕೊಂಡಿದ್ದಾರೆ. ಕಲಾವಿದ ರಾಘು ರಮಣಪ್ಪ, ಮಾಯಾವಿ ಯಾರು ಎನ್ನುವುದು ಕುತೂಹಲ, ಶಿವಾಜಿ 1 ನೋಡಿದ್ರೆ 2 ನಲ್ಲಿ ವಿಶೇಷ ಅನುಭವ ಕೊಡಲಿದೆ ಎಂದರೆ ವಿನಾಯಕ‌ಜೋಷಿ, ವಿದ್ಯಾಮೂರ್ತಿ, ಬೇಬಿ ಆರಾದ್ಯ ಮಾಹಿತಿ ಹಂಚಿಕೊಂಡರು.ಗುರುಪ್ರಸಾದ್ ಮತ್ತು ದರ್ಶನ್ ಅಂಬಟ್,  ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ

ಟೀಮ್ ವರ್ಕ್

ಶಿವಾಜಿ ಸೂರತ್ಕಲ್ –  ಟೀಮ್ ವರ್ಕ್ , ಪಾಸಿಟೀವ್ ಜನ  ಸೇರಿದರೆ ಎಲ್ಲವನ್ನೂ ಸಾಧಿಸಬಹುದು. ಎರಡೂವರೆದಲ್ಲಿ ಒಂದು ವರ್ಷ ಕಥೆಯ ಮೇಲೆ ಕೆಲಸ , ರಮೇಶ್  ಸರ್  ನಿರ್ದೇಶಕರ ಕೆಲಸವನ್ನು ಪ್ರೇಕ್ಷಕರು ಇಷ್ಟಪಡ್ತಾರೆ. ಈ ಚಿತ್ರ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ .

– ಅನೂಪ್ ಗೌಡ, ನಿರ್ಮಾಪಕ