
• ಚಿ.ಗೋ ರಮೇಶ್
ಸೂಕ್ಷ್ಮಸಂವೇದನೆಯ ನಟ,ನಿರ್ದೇಶಕ ರಮೇಶ್ ಅವರಿಂದ್ ಇದೀಗ “ ಶಿವಾಜಿ ಸೂರತ್ಕಲ್ ಭಾಗ -2ರ’ ಮೂಲಕ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವ ನೀಡಲು ಸಜ್ಜಾಗಿದ್ದಾರೆ.
ಅನೂಪ್ ಗೌಡ ನಿರ್ಮಾಣ ಮಾಡಿರುವ ಚಿತ್ರಕ್ಕೆ ಅಕಾಶ್‍ಶ್ರೀವತ್ಸ ಆಕ್ಷನ್‍ಕಟ್ ಹೇಳಿದ್ದಾರೆ. ಶಿವಾಜಿ ಸೂರತ್ಕಲ್ ಮೊದಲ ಭಾಗ ಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿ ಮತ್ತಷ್ಟು ನಿರೀಕ್ಷೆ ಮತ್ತು ಗೆಲುವಿನ ವಿಶ್ವಾಸದೊಂದಿಗೆ ತಂಡ ಇನ್ನಷ್ಟು ಕುತೂಹಲಗಳನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದೆ.
ಶಿವಾಜಿ ಸೂರತ್ಕಲ್-2 ನಟ ರಮೇಶ್ ಅರವಿಂದ್ ಚಿತ್ರಯಾನದಲ್ಲಿ ಕುತೂಹಲ ಕೆರಳಿಸಿದ ಚಿತ್ರ. ಮೊದಲ ಭಾಗದಂತೆ ಇಲ್ಲಿಯೂ ಕೂಡ ಕೊಲೆಯ ಜಾಡು ಹಿಡಿದು ಹೊರಡುವ ಥಿಲ್ಲಿಂಗ್ ಅನುಭವವನ್ನು ಚಿತ್ರದ ಮೂಲಕ ಕಟ್ಟಿಕೊಡಲು ತಂಡ ಮುಂದಾಗಿದೆ.
ಶಿವಾಜಿ ಸೂರತ್ಕಲ್ ಭಾಗ-2 ಚಿತ್ರ ನಾಳೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ಶಿವಾಜಿ ತನಗೆ ಇರುವ ಆರೋಗ್ಯ ಸಮಸ್ಯೆಯ ನಡುವೆ ಕೊಲೆಗಾರರನ್ನು ಹೇಗೆ ಪತ್ತೆ ಹಚ್ಚುತ್ತಾನೆ ಅಥವಾ ತನ್ನೊಳಗೆ ಕಾಡುವ ಖಿನ್ನತೆ ಆತನನ್ನು ಹಾಗೆ ಮಾಡಿಸುತ್ತದಾ? ಎನ್ನುವ ಕುತೂಹಲದೊಂದಿಗೆ ಚಿತ್ರ ತೆರೆ ಮೇಲೆ ಕಟ್ಟಿಕೊಡಲಾಗಿದೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಆಕಾಶ್ ಶ್ರೀವತ್ಸ, ಚಿತ್ರದಲ್ಲಿ ಅಪ್ಪ-ಮಗ,ಅಪ್ಪ-ಮಗಳು,ಗಂಡ-ಹೆಂಡತಿ ಸೆಂಟಿಮೆಂಟ್,ಎಮೋಷನ್ ಚಿತ್ರದಲ್ಲಿದೆ. ಚಿತ್ರದಲ್ಲಿ ರಮೇಶ್ ಸಾರ್ ಹೊಸ ರೀತಿಯಲ್ಲಿ ಕಾಣಸುತ್ತಿದ್ದಾರೆ.
ಚಿತ್ರ ನೋಡುವ ಮಂದಿಗೆ ರಮೇಶ್ ಅರವಿಂದ್ ಅವರದು ಎರಡು ಶೇಡ್ ಇರುವ ಪಾತ್ರವೇ ಅಥವಾ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಯೇ ಎನ್ನುವ ಕುತೂಹಲ ಇದೆ. ಚಿತ್ರದಲ್ಲಿ ಮಾಯಾವಿ ಯಾರು ಎನ್ನುವುದನ್ನು ಪತ್ತೆ ಹಚ್ಚುವ ಕೆಲಸ. ಅದನ್ನು ಚಿತ್ರದಲ್ಲಿ ನೋಡಬೇಕು.
ಚಿತ್ರ ನೋಡಿ ಹೊರ ಬರುವ ಪ್ರೇಕ್ಷಕ ವ್ಹಾ.. ಅದ್ಬುತ ಪತ್ತೆದಾರಿ ಸಿನಿಮಾ ನೋಡಿದ್ದೇವೆ ಎನ್ನುವ ಉದ್ಗಾರದೊಂದಿಗೆ ಹೊರ ಬರುತ್ತಾರೆ ಎನ್ನು ಭರವಸೆ ನೀಡಬಲ್ಲೆ. ಇತ್ತೀಚೆಗೆ ಚಿತ್ರ ನೋಡಿದ ಆಪ್ತರೂ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಚಿತ್ರ ನೋಡಿ ನಿರ್ಮಾಪಕ ಅನೂಪ್ ಗೌಡ ಅವರು ತುಂಬಾನೇ ಖುಷಿಯಾಗಿದ್ದಾರೆ. ಆರಂಭದಿಂದಲೂ ಅವರಿಗೆ ಚಿತ್ರದ ಬಗ್ಗೆ ಭರವಸೆ ಇತ್ತು.ಅದು ಇನ್ನಷ್ಟು ಭರವಸೆಯನ್ನು ಹೆಚ್ಚಿಸಿದೆ.ನಾಳೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಕನ್ನಡದಲ್ಲಿಯೇ ಚಿತ್ರ ಬಿಡುಗಡೆಯಾಗಲಿದ್ದು ಇದೇ ವೇಳೆ ಅಮೇರಿಕಾ, ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ.ಪ್ರೇಕ್ಷಕರ ಪ್ರತಿಕ್ರಿಯೆ ನೋಡು ಎದುರು ನೋಡುತ್ತಿದ್ದೇವೆ ಎನ್ನುವ ಮಾಹಿತಿ ಹಂಚಿಕೊಂಡರು.
ಪ್ರಮುಖ ಪಾತ್ರ
ಶಿವಾಜಿ ಸೂರತ್ಕಲ್ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಜೊತೆಗೆ ನಟಿ ಮೇಘನಾ ಗಾಂವಕರ್, ರಾಧಿಕಾ ಚೇತನ್, ಬಾಲನಟಿ ಆರಾದ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಟಿ ಸಂಗೀತ ಹಾಡೊಂದರಲ್ಲಿ ಮೋಡಿ ಮಾಡಲಿದ್ಧಾರೆ. ಮೊದಲ ಭಾಗದಲ್ಲಿ ಕೊಲೆಯಾಗಿರುವ ರಾಧಿಕಾ ಚೇತನ್ ಪಾತ್ರ, ಈ ಭಾಗದಲ್ಲಿ ಮುಂದುವರಿದಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಚಿತ್ರದ ಆರಂಭದಲ್ಲಿಯೇ ಅದಕ್ಕೆ ಉತ್ತರ ಸಿಗಲಿದ್ದು ಅದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.
– ಆಕಾಶ್ ಶ್ರೀವತ್ಸ, ನಿರ್ದೇಶಕ