ಮಾಯಾಲೋಕವನ್ನ ಸೃಷ್ಟಿಸಿದ ಹಕ್ಕಿ ಕಥೆ ನಾಟಕ ಪ್ರದರ್ಶನ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.10: ರಮೇಶ್ ಗೌಡ ಪಾಟೀಲ್ ಕಲಾ ಟ್ರಸ್ಟ್ (ರಿ) ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಾಮಾನ್ಯ ಯೋಜನೆಯಡಿಯಲ್ಲಿ “ಬಣದ ನಾಟಕ ದಿಬ್ಬಣ” ಎನ್ನುವ ಕಾರ್ಯಕ್ರಮವನ್ನು ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಡೀನ್, ಸಹ ಪ್ರಾಧ್ಯಾಪಕರು ಆದ ಡಾ. ಅನಂತ್ ಎಲ್.ಝಂಡೇಕರ್ ಉತ್ತಮವಾದಂತ ಯೋಚನೆಗಳನ್ನು ವಿಚಾರಗಳನ್ನ ಕೊಡುವುದು ನಾಟಕಗಳು ಮತ್ತು ನಾಟಕಕಾರರು ಜೀವನದ ಮೌಲ್ಯ ಸಂಸ್ಕೃತಿಯನ್ನು ಕಲಿಸುತ್ತದೆ ನಾವು ಒಳ್ಳೆಯದನ್ನ ಒಳ್ಳೆಯ ಕಲೆಯನ್ನ ನೋಡಬೇಕಾದರೆ ಬಳ್ಳಾರಿಗೆ ಬರಬೇಕು ಕಲೆಯನ್ನ ಜೀವಂತವಾಗಿ ಪ್ರದರ್ಶಿಸುತ್ತಾ ಬೆಳೆದು ಬಂದಿದೆ ಈ ಟ್ರಸ್ಟ್ ಬಳ್ಳಾರಿ ನಗರದಲ್ಲಿ ರಾಘವ ಕಲಾಮಂದಿರವು ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಇದು ಖುಷಿಯ ವಿಚಾರ ಎಂದು ನುಡಿದರು
ಪ್ರೇಕ್ಷಕರು ಹೆಚ್ಚಿನ ಮಟ್ಟದಲ್ಲಿ ಬಂದು ನಾಟಕವನ್ನು ವೀಕ್ಷಿಸಿದಾಗ ಕಾರ್ಯಕ್ರಮಕ್ಕೆ ಯಶಸ್ಸು ಸಿಗುತ್ತದೆ ಪ್ರಸ್ತುತ ಸಂದರ್ಭದಲ್ಲಿ ಪ್ರೇಕ್ಷಕರು ರಂಗಮಂದಿರಗಳ ಕಡೆ ಬರುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಕೆ.ಚನ್ನಪ್ಪ ನವರು ಹೇಳಿದರು
ಎಲ್ಲಾ ಪತ್ರಿಕೆಗಳಲ್ಲಿ ಪ್ರತಿದಿನ ನಾಟಕ ನೃತ್ಯ ಸಂಗೀತದ ಕಾರ್ಯಕ್ರಮಗಳೇ ಕಾಣುತ್ತಿದೆ  ವರ್ಷಗಟ್ಟಲೆ ಮಾಡಬೇಕಾದ ಕಾರ್ಯಕ್ರಮಗಳನ್ನು ಒಂದೇ ತಿಂಗಳಲ್ಲಿ ಮಾಡುತ್ತಿರುವುದು ಬೇಸರದ ವಿಚಾರ ವರ್ಷದಲ್ಲಿ ಮೂರು ನಾಲ್ಕು ತಿಂಗಳಾದರೂ ಎಲ್ಲಾ ಕಲಾ ಸಂಸ್ಥೆಗಳು ಕಲೆಗಳನ್ನು ಪ್ರದರ್ಶಿಸಬೇಕು ಹೀಗೆ ಆದರೆ ಪ್ರೇಕ್ಷಕರು ಕಲೆಯನ್ನ ಆಸ್ವಾದಿಸುತ್ತಾರೆ  ರಂಗಾಯಣಗಳು ಅತ್ಯುತ್ತಮವಾದಂತಹ ನಾಟಕಗಳನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಶಿವಮೊಗ್ಗ ರಂಗಾಯಣದ ಹಕ್ಕಿ ಕಥೆ ನಾಟಕ ಅದ್ಭುತವಾದಂತಹ ಸಂದೇಶವುಳ್ಳ ಮತ್ತು ಎಲ್ಲಾ ಭಾಗದ ಪ್ರೇಕ್ಷಕರನ್ನು ಕಟ್ಟಿ ಹಾಕುವಂತಹ ನಾಟಕವಾಗಿದೆ
ರಂಗಾಯಣ ಮತ್ತು ರಂಗ ಸಮಾಜದ ಸದಸ್ಯರಾದ ಪ್ರಭುದೇವ ಕಪ್ಪಗಲ್ಲು ಹೇಳಿದರು  ವೇದಿಕೆ ಮೇಲೆ ಪಿ.ಧನಂಜಯ ಕೆ. ಕೋಟೇಶ್ವರರಾವ್, ರಮೇಶ್ ಗೌಡ ಪಾಟೀಲ್ ಉಪಸ್ಥಿತರಿದ್ದರು. ನಂತರ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ನಾಟಕ ವಿಭಾಗದ ಉಪನ್ಯಾಸಕರಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರಿಗೆ ರಂಗ ಚತುರ  ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ನಂತರ ಶ್ರೀ ದೊಡ್ಡಬಸಪ್ಪ ಗವಾಯಿ,ಆದೋನಿ ವೀಣಾ ಮತ್ತು ತಂಡದವರು ಸುಗಮ ಸಂಗೀತ ಹಾಗೂ ಶಿವಮೊಗ್ಗ ರಂಗಾಯಣ ಇವರಿಂದ “ಹಕ್ಕಿ ಕಥೆ” ಎನ್ನುವಂತ ಮಕ್ಕಳ ಪಪ್ಪೆಟ್ ನಾಟಕವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ನಿರೂಪಣೆ ವಿಷ್ಣು ಹಡಪದ ಪ್ರಾರ್ಥನೆ ದೊಡ್ಡಬಸಪ್ಪ ಗವಾಯಿ ಸ್ವಾಗತ ಕೆ.ಕೋಟೇಶ್ವರರಾವ್ ವಂದನಾರ್ಪಣೆ ವಿ.ರಾಮ ಚಂದ್ರ ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ನಾಡೋಜ ಬೆಳಗಲ್ಲು ವೀರಣ್ಣ,ಟಿ ಕೊಟ್ರಪ್ಪ, ಕೆ ಕೃಷ್ಣ, ಶೇಷ ರೆಡ್ಡಿ, ನೇತಿ ರಘುರಾಮ, ರಮಣಪ್ಪ ಭಜಂತ್ರಿ ಎಂ ರಾಮಾಂಜನೇಯಲು,ಅನೇಕ ಕಲಾಭಿಮಾನಿಗಳು ಮಕ್ಕಳು ಪಾಲ್ಗೊಂಡು ಯಶಸ್ವಿಗೊಳಿಸಿದರು.