ಕಲಬುರಗಿ, ಅ 29: ತಂತ್ರಜ್ಞಾನ ಬೆಳೆದಂತೆಲ್ಲ ಕಂಪ್ಯೂಟರ, ಮೊಬೈಲ್ ಐಪ್ಯಾಡಗಳು ಟೈಪರೈಟರ್ ಜಾಗವನ್ನು ಆಕ್ರಮಿಸಿಬಿಟ್ಟಿವೆ. ಒಂದು ಕಾಲದಲ್ಲಿ ಟೈಪ್ ರೈಟರ್ ಬಳಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಸರಕಾರಿ ಕಛೇರಿಗಳಿಗೆ ಖಾಸಗಿ ಸಂಸ್ಥೆಗಳಿಗೆ ಯಾವುದೇ ಪತ್ರ ನೀಡಬೇಕಾದರೆ ಟೈಪ್ ಮಾಡಿದ ಪ್ರತಿಯನ್ನೇ ನೀಡುವಂತಹ ಕಾಲವಿತ್ತು.
ಆದರೆ ಈಗ ಟೈಪ್ ರೈಟರ್ ಮೂಲಕ ಟೈಪ ಮಾಡಿದ ಪತ್ರಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿಲ್ಲ ಎನ್ನುವುದಕ್ಕಿಂತಲೂ ವೇಗವಾಗಿ ಹಾಗೂ ಪೆÇೀಣಿಸಿದ ರೀತಿ ಅಕ್ಷರಗಳು ಕಾಣಿಸುವುದರಿಂದ ಬಹುತೇಕ ಜನರು ಕಂಪ್ಯೂಟರನತ್ತ ಮುಖ ಮಾಡಿದ್ದಾರೆ. ದಶಕದ ಹಿಂದಿನವರೆಗೂ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಟೈಪಿಂಗ ತರಬೇತಿ ನೀಡಲು ತರಬೇತಿ ಕೇಂದ್ರಗಳಿದ್ದವು.
ಕಂಪ್ಯೂಟರ್ ಬಂದ ಕೆಲವೇ ವರ್ಷಗಳಲ್ಲಿ ಟೈಪಿಂಗ್ ಇನ್‍ಸ್ಟಿಟ್ಯೂಟಗಳು ಬಾಗಿಲು ಮುಚ್ಚಬೇಕಾಯಿತು. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿಯಾದರೂ ಇವು ಕಾಣ ಸಿಗುತ್ತವೆನೋ ಎಂದು ಭಾವಿಸಿದವರಿಗೆ ಅಲ್ಲಿಯೂ ಸರಕಾರ ಪ್ರಾರಂಭಿಸಿದ ಕಂಪ್ಯೂಟರ್ ತರಬೇತಿ ಕೇಂದ್ರಗಳು ತಲೆ ಎತ್ತಿ ಟೈಪಿಂಗ ತರಬೇತಿಗಳು ಹೇಳಹೆಸರಿಲ್ಲದಂತೆ ಕಣ್ಮರೆಯಾಗಿ ಬಿಟ್ಟಿವೆ. ಹೀಗಾಗಿ ಇದ್ದ ಟೈಪ್ ರೈಟರಗಳು ಶೋಕೇಸ್ ನ ವಸ್ತುವಾಗಿ ಮಾರ್ಪಟ್ಟಿವೆ. ಟೈಪ್‍ರೈಟರ್ ಬಗ್ಗೆ ಒಲವಿರುವವರು ತಮ್ಮ ಮನೆಯಲ್ಲಿ ಜೋಪಾನವಾಗಿಟ್ಟುಕೊಂಡಿದ್ದಾರೆ.
ಎರಡು ದಶಕಗಳ ಹಿಂದೆ ಜಿಲ್ಲಾಧಿಕಾರಿ ಕಛೇರಿ, ನ್ಯಾಯಾಲಯಗಳು, ತಹಶೀಲ್ದಾರ ಕಛೇರಿ ಬಳಿ ಹೋದರೆ ಟೈಪ್ ರೈಟರ್‍ಗಳ ಸದ್ದು ಮಾರ್ದನಿಗೊಳ್ಳುತ್ತಿತ್ತು. ಈಗ ಅದೇ ಜಾಗದಲ್ಲಿ ಬೆರಳೆಣಕೆಯಷ್ಟು ಮಂದಿ ಟೈಪ್ ರೈಟರ್ ಗಳನ್ನು ಇಟ್ಟುಕೊಂಡಿದ್ದು ತಹಶೀಲ್ದಾರ ಕಛೇರಿ, ಉಪ ನೋಂದಣಾಧಿಕಾರಿ ಕಛೇರಿ, ಕೋರ್ಟಗಳ ಬಳಿ ಹೊರಭಾಗದಲ್ಲಿ ಕುಳಿತು ಗ್ರಾಹಕರಿಗಾಗಿ ಎದುರುನೋಡುತ್ತಿರುವ ದೃಶ್ಯ ಕಾಣಬಹುದು.
ಕಂಪ್ಯೂಟರ್ ಯುಗದಲ್ಲಿ ಟೈಪ್ ರೈಟರ್ ಗಳನ್ನು ನಂಬಿಕೊಳ್ಳುವ ಮಂದಿ ಕಡಿಮೆಯಾಗಿದ್ದಾರೆ. ಆದರೆ ಕೆಲವೊಮ್ಮೆ ತುರ್ತಾಗಿ ಪ್ರಮಾಣಪತ್ರ ಬೇಕಾದವರು ಇದೇ ಟೈಪರೈಟರಗಳನ್ನು ನಂಬಿಕೊಳ್ಳಬೇಕಾಗುತ್ತದೆ ಇದರಿಂದ ತಂತ್ರಜ್ಞಾನದ ಬೆಳವಣಗೆ ಕಾಲದಲ್ಲೂ ಅಲ್ಪ ಸ್ವಲ್ಪ ಮಾತ್ರ ಟೈಪ್ ರೈಟರ್ ಬಳಕೆಯಾಗುತ್ತಿದೆ .
ಕಣ್ಮರೆಯಾಗುತ್ತಿರುವ ಟೈಪ್ ರೈಟರಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ತಿಳಿಸಲು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವಲ್ಡ್ ಕಲ್ಚರನಲ್ಲಿ ಶತಮಾನದಷ್ಟು ಹಳೆಯದಾದ ವಿವಿಧ ಮಾದರಿಯ ಟೈಪ್ ರೈಟರ್‍ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.