ಮಾಯನ್ಮಾರ್ ನಲ್ಲಿ ೧೧೧ ಮಾನವ ಕಳ್ಳಸಾಗಾಣೆ ಪ್ರಕರಣ

ಯಾನ್ ಗಾನ್,ಜ.೫- ಕಳೆದ ವರ್ಷ ಮಾಯನ್ಮಾರ್ ನಲ್ಲಿ ೧೧೧ ಮಾನವ ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿವೆ.

೨೦೨೦ರಲ್ಲಿ ೩೭ ಹೆಣ್ಣು ಮಕ್ಕಳೂ ಸೇರಿ ೧೬೭ ಮಂದಿ ಈ ಪ್ರಕರಣದಲ್ಲಿ ಬಲಿಪಶುವಾಗಿದ್ದಾರೆ. ಒಟ್ಟಾರೆ ೩೩೯ ಮಾನವ ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿದ್ದು ಅದರಲ್ಲಿ ೧೧೧ ಪ್ರಕರಣಗಳು ದಾಖಲಾಗಿವೆ.

ಶಾನ್ ರಾಜ್ಯದಲ್ಲಿ ೩೭ ಪ್ರಕರಣ,ಯಾನ್ ಗಾಂಗ್ ನಲ್ಲಿ ೩೦ ಪ್ರಕರಣ ದಾಖಲಾಗಿವೆ ಇನ್ನುಳಿದಂತೆ ಸಚಿನ್ ರಾಜ್ಯದಲ್ಲಿ ೧೦ ಪ್ರಕರಣ ವರದಿಯಾಗಿದೆ.

೨೦೧೯ ರಲ್ಲಿ ೩೫೮ ಪ್ರಕರಣಗಳು ದಾಖಲಾಗಿದ್ದವು ಈ ಪೈಕಿ ೨೯೭ ಮಹಿಳೆಯರು ಕಳ್ಳಸಾಗಣೆ ಪ್ರಕರಣ ದಾಖಲಾಗಿತ್ತು.

ಮಾಯನ್ಮಾರ್ ನಲ್ಲಿ ವರ್ಷದಿಂದ ವರ್ಷಕ್ಕೆ ಮಾನವ ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಿರುವುದು ಅಲ್ಲಿನ ಸರ್ಕಾರವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.

ಮಾನವ ಕಳ್ಳಸಾಗಣೆ ಪ್ರಕರಣವನ್ನು ಹತ್ತಿಕ್ಕಲು ಅಲ್ಲಿನ ಸರಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಇದರ ನಡುವೆಯೂ ಕಳ್ಳಸಾಗಣೆ ಪ್ರಕರಣ ನಡೆಯುತ್ತಿವೆ