ಮಾಯನಗರಿಗೆ ಮರಳಿ ಬಂದ ಸಂಗೀತ ಭಟ್

ಬಣ್ಣದ ಜಗತ್ತಿನ ಮಾಯೆಯೇ ಅಂತಹುದು.ಬಿಟ್ಟನೆಂದರೂ ಬಿಡದು ಈ ಮಾಯೆ. ಚಿತ್ರರಂಗದ ಸಹವಾಸವೇ ಬೇಡ ಎಂದು ದೂರ ಸರಿದಿದ್ದ ನಟಿ ಸಂಗೀತ ಭಟ್ ಮತ್ತೆ ಬಣ್ಣ ಹಚ್ಚಿದ್ದಾರೆ. ಅದುವೇ ವಿಭಿನ್ನ ಕಥೆ ಇರುವ “ ಕ್ಲಾಂತ” ಚಿತ್ರದ ಮೂಲಕ. ಒಂದು ರೀತಿ ಸಂಗೀತ ಭಟ್ ಅವರಿಗೆ ಸೆಕೆಂಡ್ ಇನ್ಸಿಂಗ್. ಈ ಇನ್ಸಿಂಗ್ಸ್‍ನಲ್ಲಿ ಉತ್ತಮ ಪ್ರದರ್ಶನ ತೋರಿ ಮೆಚ್ಚುಗೆ ಗಳಿಸಬೇಕು ಎನ್ನುವ ಕಾತುರ, ಕನವರಿಕೆ ಅವರಲ್ಲಿದೆ.

ವಿವಿಧ ಕಾರಣದಿಂದ ಚಿತ್ರರಂಗದಿಂದ ದೂರ ಉಳಿಸಿದ್ದ ಸಂಗೀತ ಭಟ್ ಅವರಿಗೆ ಮರಳಿ ಚಿತ್ರರಂಗ ಪ್ರವೇಶಿಸಬೇಕು ಎಂದು ಮನಸ್ಸು ಮಾಡಿದಾಗಲೇ ಸಿಕ್ಕ ಚಿತ್ರ ಇದು.ಹೀಗಾಗಿ ಅವರಿಗೆ ವಿಶೇಷವಾದ ಚಿತ್ರ ಕೂಡ.

ಚಿತ್ರ ಒಪ್ಪಿಕೊಂಡು ಚಿತ್ರೀಕರಣಕ್ಕೆ ಹೊರಡುವ ಸಮಯದಲ್ಲಿ ಆರೋಗ್ಯ ಹದಗೆಟ್ಟು ಚಿತ್ರ ಕೈಬಿಡುವ ಸನ್ನಿವೇಶ ಎದುರಾಗಿತ್ತು. ಚಿತ್ರರಂಗಕ್ಕೆ ವಾಪಸ್ಸು ಬರುತ್ತಿರುವ  ಚಿತ್ರ. ಕೈ ಬಿಡಬಾರದು ಎಂದು ಒಪ್ಪಿಕೊಂಡು ನಟಿಸಿದೆ ಎನ್ನುವ ವಿವರ ಹಂಚಿಕೊಂಡರು.

ಮೂರ್ನಾಲ್ಕು ವರ್ಷದ ಬಳಿಕ ಚಿತ್ರರಂಗಕ್ಕೆ ಬಂದ ಹಿನ್ನೆಲೆಯಲ್ಲಿ ಹೊಸಬರ ತಂಡದ ಜೊತೆ ನಾನು ಹೊಸಬಳಾಗಿದ್ದೇನೆ, ಕಲಿತಿರುವುದನ್ನು ಬಿಟ್ಟು ಈಗ ಹೊಸದಾಗಿ ಕಲಿಯಬೇಕಾಗಿದೆ. ಇದು ಸವಾಲಿನ ಕೆಲಸ. ಜೊತೆಗೆ ಚಿತ್ರದಲ್ಲಿ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೇನೆ. ಒಂದಷ್ಟು ಸಮಸ್ಯೆಯಾದರೂ ಎಲ್ಲಿಯೂ ಚಿತ್ರೀಕರಣಕ್ಕೆ ತೊಂದರೆ ಆಗದಂತೆ ಒಪ್ಪಿಕೊಂಡ ಕೆಲಸ ಮುಗಿಯಿತು ಎಂದರು.

ಚಿತ್ರರಂಗದಿಂದ ದೂರ ಇದ್ದುದರಿಂದ ತುಸು ದಪ್ಪನಾಗಿದ್ದೆ.ಪಾತ್ರಕ್ಕಾಗಿ ತೂಕ ಇಳಿಸಿಕೊಳ್ಳಲು ಕಠಿಣ ಡಯಟ್ ಪಾಲನೆ ಮಾಡಬೇಕಾಯಿತು.ಅದರಲ್ಲಿ ಯಶಸ್ಸು ಗಳಿಸಿದೆ. ಚಿತ್ರ ಕಾಂತ್ಲಾ ಚಿತ್ರದಲ್ಲಿ ಆಗಷ್ಟೇ ಕೆಲಸಕ್ಕೆ ಸೇರಿದ ಹುಡುಗಿಯ ಪಾತ್ರ. ವಿಕೇಂಡ್ ನಲ್ಲಿ ಎಂಜಾಯ್ ಮಾಡುವ ಆಸೆ.ಹೀಗಾಗಿ  ನಾಯಕನ ಜೊತೆ ಹೊರ ಹೋದಾದ ಅಲ್ಲಿ ಸಿಕ್ಕಿಕೊಂಡು ಸಮಸ್ಯೆ ಎದುರಿಸುವ ಪಾತ್ರ ಎನ್ನುವ ಮಾಹಿತಿ ಹಂಚಿಕೊಂಡರು

ಬಹುತೇಕ ಹೊಸಬರೇ ಇರುವುದರಿಂದ ಎಲ್ಲರೂ ಕಷ್ಟಪಟ್ಟು ಚಿತ್ರ ಮಾಡಿದ್ದೇವೆ. ಚಿತ್ರವನ್ನು ಮಡಿಲಿಗೆ ಹಾಕಿದ್ದೇವೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡರು.

ಸಂಕಷ್ಠದಲ್ಲಿ ಸಹಾಯ

ಚಿತ್ರರಂಗದಲ್ಲಿ ಎದುರಾದ ಏರಿಳಿತ ಕಂಡು ಸಂಕಷ್ಟದ ಸಮಯದಲ್ಲಿದ್ದಾಗ ನೈತಿಕ ಬಲ ನೀಡುವ ಜೊತೆಗೆ ಬೆನ್ನೆಲಬಾಗಿ ನಿಂತವರು ಪತಿ ಸುದರ್ಶನ್ ರಂಗಪ್ರಸಾದ್. ಜೊತೆಗೆ ಕುಟುಂಬದ ಸಹಾಯ ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಜೀವನದ ಸಕ್ಸಸ್, ಫೆಲ್ಯೂರ್ ನಲ್ಲಿಯ ಚಿತ್ರರಂಗದಲ್ಲಿ ಎದುರಾದ ಕಷ್ಟದ ದಿನಗಳಲ್ಲಿಯೂ ಕೂಡ. ಪತಿ,ಕುಟುಂಬ, ಮತ್ತು ಮಾದ್ಯಮದ ಸಹಕಾರದಿಂದ ಇಲ್ಲಿಯ ತನಕ ಬಂದಿದ್ದೇನೆ ಎಂದು ಮತ್ತೆ ಭಾವುಕರಾದರು ಸಂಗೀತ ಭಟ್.