
ದಾವಣಗೆರೆ.ಏ.೧೧: ಮಾಯಕೊಂಡ ಮೀಸಲು ಕ್ಷೇತ್ರದ ಎಡಗೈ (ಮಾದಿಗ) ಸಮುದಾಯಕ್ಕೆ ಬಿಜೆಪಿ ಟಿಕೇಟ್ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯ ಸಂಚಾಲಕ ಹೆಗ್ಗೆರೆ ರಂಗಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸುಮಾರು ೩೫,೦೦೦ ಕ್ಕೂ ಹೆಚ್ಚು ಮಾದಿಗ ಸಮುದಾಯದ ಮತಗಳಿದ್ದು, ಜಿಲ್ಲೆಯಲ್ಲಿ. ೨ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಎಡಗೈ (ಮಾದಿಗ) ಸಮುದಾಯವಿದೆ. ಈ ಕ್ಷೇತ್ರದಲ್ಲಿ ಲಿಂಗಣ್ಣನವರನ್ನು ಬಿಟ್ಟು, ಅನೇಕ ಬಾರಿ ಪರಿಶಿಷ್ಟ ಜಾತಿಯ ಸ್ಪೃಶ್ಯ ಸಮುದಾಯದವರೇ ಶಾಸಕರಾಗಿದ್ದರು. ಈ ಬಾರಿ ಮಾದಿಗ ಸಮುದಾಯದವರಿಗೆ ನೀಡಲಿ ಎಂದರು.ಬೊಮ್ಮಾಯಿ ಸರ್ಕಾರ ಒಳ ಮೀಸಲಾತಿ ವರ್ಗೀಕರಣ ಮಾಡಿ ಪರಿಶಿಷ್ಟರ ಎಲ್ಲಾ ಸಮುದಾಯಗಳಿಗೆ ನ್ಯಾಯ ನೀಡಿ ಸಂತೃಪ್ತಗೊಳಿಸಿದೆ. ಅದೇ ರೀತಿ ಮಾದಿಗ ಸಮುದಾಯಕ್ಕೆ ಟಿಕೇಟ್ ನೀಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಂತೆ ಸಂಘಟನೆ ಆಗ್ರಹಿಸುತ್ತದೆ ಎಂದರು.ಜಿಲ್ಲಾಧ್ಯಕ್ಷ ಹೂವಿನ ಮಡು ಅಂಜಿನಪ್ಪ ಮಾತನಾಡಿ, ಮಾಯಕೊಂಡ ಮೀಸಲು ಕ್ಷೇತ್ರದ ಮಾದಿಗ ಸಮುದಾಯಕ್ಕೆ ಬಿಜೆಪಿ ಟಿಕೇಟ್ ನೀಡದಿದ್ದರೆ ಮುಂದಿನ ಎಂ.ಪಿ. ಚುನಾವಣೆಯನ್ನು ಬಹಿಷ್ಕರಿಸಲಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಗುಮ್ಮನೂರು ರಾಮಚಂದ್ರಪ್ಪ, ಅಳಗವಾಡಿ ರವಿ ಬಾಬು, ಅಳಗವಾಡಿ ನಿಂಗರಾಜು, ಬಸವರಾಜ್, ಗುಮ್ಮನೂರು ಬಸವರಾಜ್, ಆನಗೋಡು ಪ್ರಶಾಂತ್ ಇನ್ನಿತರರಿದ್ದರು.