ಮಾಯಕೊಂಡ ಜೆಡಿಎಸ್ ಅಭ್ಯರ್ಥಿ ಹೆಚ್ ಆನಂದಪ್ಪ ಬಿರುಸಿನ ಪ್ರಚಾರ

ದಾವಣಗೆರೆ. ಏ.೨೮; ಮಾಯಕೊಂಡ ಕ್ಷೇತ್ರದ ಜೆಡಿಎಸ್  ಅಭ್ಯರ್ಥಿ ಹೆಚ್ .ಆನಂದಪ್ಪ ವಿವಿಧ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಿದರು.ಈ ವೇಳೆ ಮಾತನಾಡಿದ ಅವರು ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸಮಗ್ರ ಅಭಿವೃದ್ಧಿ ಸಾಧ್ಯ.ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಜನರ ಸಂಕಷ್ಟ ಪರಿಹರಿಸಲು ಸಾಧ್ಯ ಎಂದರು.ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಜೆಡಿಎಸ್ ಗೆಲುವಿಗೆ ಶ್ರೀರಕ್ಷೆ ಅದಕ್ಕಾಗಿ ಜನರು ಈ ಬಾರಿ ಜೆಡಿಎಸ್ ಪಕ್ಷದ ಗೆಲುವಿಗೆ ಸಹಕರಿಸಬೇಕು ಹಾಗೂ ಉತ್ತಮ‌  ಆಡಳಿತಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು‌  ಎಂದರು.ಈ ವೇಳೆ ಜೆಡಿಎಸ್ ಹಿರಿಯ ಮುಖಂಡರುಗಳು ಪ್ರಚಾರ ಕಾರ್ಯಕ್ಕೆ ಸಾಥ್ ನೀಡಿದರು.ಇದೇ ವೇಳೆ ಹಿರಿಯ ಮುಖಂಡರಾದ ಹೂವಿನಮಡು ಚಂದ್ರಪ್ಪ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಮೊದಲು ಜೆಡಿಎಸ್ ಪಕ್ಷದಲ್ಲೇ ಇದ್ದ ಚಂದ್ರಪ್ಪ ಅವರು ಕಾರಣಾಂತರಗಳಿಂದ ಕಾಂಗ್ರೆಸ್ ನಲ್ಲಿದ್ದರು ಇದೀಗ ಹೆಚ್ ಚಂದ್ರಪ್ಪ ಹಾಗೂ‌  ಮಾಜಿ‌ ಸಿಎಂ ಕುಮಾರಸ್ವಾಮಿ ಅವರ ಜನಪರ ಕಾರ್ಯ ಮೆಚ್ಚಿ ಮರಳಿ ಮಾತೃಪಕ್ಷವಾದ ಜೆಡಿಎಸ್ ಗೆ ಸೇರ್ಪಡೆಯಾದರು.ಈ ವೇಳೆ ಹೂವಿನಮಡು ಮಂಜಣ್ಣ ಹಾಗೂ ಹೂವಿನಮಡು ಚಂದ್ರಪ್ಪ ಅವರ ಬೆಂಬಲಿಗರು ಉಪಸ್ಥಿತರಿದ್ದರು.