
ದಾವಣಗೆರೆ.ಏ.೨೧: ತಮ್ಮ ಅಪಾರ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ತೆರಳಿ ಮಾಯಕೊಂಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದಪ್ಪ ನಾಮಪತ್ರ ಸಲ್ಲಿಸಿದರು.ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭಿಸಿ, ಜಯದೇವ ವೃತ್ತ, ಲಾಯರ್ ರಸ್ತೆ, ಪಿಬಿ ರಸ್ತೆ ಮೂಲಕ ತೆರಳಿ ತಹಶೀಲ್ದಾರ್ ಕಚೇರಿಯಲ್ಲಿರುವ ಮಾಯಕೊಂಡ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ದುರ್ಗಶ್ರೀ ಅವರಿಗೆ ನಾಮಪತ್ರ ಸಲ್ಲಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದಪ್ಪ , ರೈತರು, ಜನರು ಎರೆಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಈ ಬಾರಿ ಕುಮಾರಸ್ವಾಮಿ ನೇತೃತ್ವದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಆಶೀರ್ವದಿಸಲಿದ್ದಾರೆ ಎಂದರು.ಮಾಯಕೊಂಡದಲ್ಲಿ ಪಕ್ಷೇತರ ಅಭ್ಯರ್ಥಿಗಳು ಎಷ್ಟೇ ಜನ ಸ್ಪರ್ಧಿಸಿದರು 25 ಸಾವಿರ ಮತಗಳ ಹಂತದಲ್ಲಿ ನಾನು ಗೆಲ್ಲಲಿದ್ದೇನೆ. ಈ ಹಿಂದೆ ನಾನು ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಈಗಮಾತೃ ಪಕ್ಷಕ್ಕೆ ಮರಳಿದ್ದು, ಮಾಯಕೊಂಡದಲ್ಲಿ 25 ಸಾವಿರ ಮತಗಳ ಹಂತರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈಗಾಗಲೇ ಬಿಜೆಪಿ ಅಭ್ಯರ್ಥಿಯನ್ನು ಮಾಯಕೊಂಡದ ಕ್ಷೇತ್ರ ಗ್ರಾಮದ ಜನರು ಊರಿನೊಳೊಗೆ ಬಿಟ್ಟುಕೊಳ್ಳುತ್ತಿಲ್ಲ. ಕುರ್ಕಿ ಗ್ರಾಮದಲ್ಲಿ ಬಿಜೆಪಿ ಮಾಯಕೊಂಡ ಅಭ್ಯರ್ಥಿಯನ್ನು ಊರಿನೊಳಗೆ ಬಿಟ್ಟುಕೊಳ್ಳದೆ ವಾಪಾಸ್ ಕಳಿಸಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಮಾಯಕೊಂಡದಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದಪ್ಪ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಶಪಥ ಮಾಡಿದ್ದಾರೆ ಎಂದರು.ಮಾಯಕೊಂಡದಲ್ಲಿ 10 ರಿಂದ 12 ಸಾವಿರ ಜನ ಜೆಡಿಎಸ್ ಕಾರ್ಯಕರ್ತರಿಂದ್ದಾರೆ, ಆನಂದಪ್ಪನವರು 24 ಸಾವಿರ ಮತಗಳನ್ನು ಪಡೆಯಲಿದ್ದಾರೆ. ಹಾಗಾಗಿ ಈ ಬಾರಿ ಮಾಯಕೊಂಡದಲ್ಲಿ ಆನಂದಪ್ಪನವರು ಗೆಲ್ಲಲಿದ್ದು, ದಾವಣಗೆರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರಿಂದ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಗಳಿಸಲಿದೆ ಎಂದರು.