ಮಾಯಕೊಂಡ‌ ಅಭ್ಯರ್ಥಿ ಹೆಚ್.ಆನಂದಪ್ಪ ನೇತೃತ್ವದಲ್ಲಿ ಜೆಡಿಎಸ್ ಗೆ ಸೇರ್ಪಡೆ

ದಾವಣಗೆರೆ.ಏ.೩೦;  ನಗರದ ಜೆಡಿಎಸ್  ಸಂಪರ್ಕ ಕಚೇರಿಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಎಚ್ ಆನಂದಪ್ಪ ಇವರ ಸಮ್ಮುಖದಲ್ಲಿ ಬಿಜೆಪಿ ಮುಖಂಡರು ಜೆಡಿಎಸ್ ಗೆ ಸೇರ್ಪಡೆಯಾದರು.ಈ ವೇಳೆ ಮಾತನಾಡಿದ ಹೆಚ್ ಆನಂದಪ್ಪ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷದ ಕಾರ್ಯವೈಖರಿಗೆ ಮೆಚ್ವುಗೆ ವ್ಯಕ್ತಪಡಿಸಿ ಇತರೆ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಸ್ವಯಂ ಇಚ್ಛೆಯಿಂದ ಸೇರ್ಪಡೆಯಾಗುತ್ತಿದ್ದಾರೆ ಎಂದರು.ಮಾಜಿ ಪ್ರಧಾನಿ ಹೆಚ್.ಡಿ‌.ದೇವೇಗೌಡರು ಹಾಗೂ ಮಾಜಿ ಸಿ.ಎಂ ಕುಮಾರಸ್ವಾಮಿಯವರ ಅನೇಕ ಜನಪರ ಯೋಜನೆ ಜಾರಿಯಾಗಲು ಜನರು ಈ ಬಾರಿ ಜೆಡಿಎಸ್ ಪಕ್ಷ ಬೆಂಬಲಿಸಬೇಕು ಎಂದರು.ಇದೇ ವೇಳೆ ಈಚಘಟ್ಟ ತಾಂಡದವರು ಕಾಂಗ್ರೆಸ್ ತೊರೆದು ಜೆಡಿಎಸ್ ಗೆ  ಸೇರ್ಪಡೆಯಾದರು.ಅಪಾರ ಸಂಖ್ಯೆಯಲ್ಲಿ‌ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.