ಮಾಯಕೊಂಡದಲ್ಲಿ  ಬೂತ್ ಅಧ್ಯಕ್ಷರ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಾಟ

ದಾವಣಗೆರೆ.ಜ.೧೩ : ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೂತ್ ಅಧ್ಯಕ್ಷರ ಮನೆಗಳ ಮೇಲೆ ಬಿಜೆಪಿ ಪಕ್ಷದ ಬಾವುಟ ಹಾರಿಸುವ ಮುಖೇನಾ ಬೂತ್ ವಿಜಯ ಅಭಿಯಾನನ್ನು ಯಶಸ್ವಿಯಾಗಿ ನಡೆಸಲಾಯಿತು.ಈ ಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮಗಳಾದ, ಚಿರಡೋಣಿ , ಕಣವೇಬೆಳಿಚಿ, ಹೊಸನಗರ, ಹೊಸಳ್ಳಿ, ರುದ್ರೇಶಪುರ    (ಸೇವಾನಗರ ) ನರಗನಹಳ್ಳಿ, ಮಾಯಕೊಂಡ ಈ ಭಾಗಗಳಲ್ಲಿ ಬೂತ್ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಈ ಅಭಿಯಾನ ನಡೆಸಿದರು.ಈ ಸಂದರ್ಭದಲ್ಲಿ ಮಾಯಕೊಂಡ ಮಂಡಲ ಅಧ್ಯಕ್ಷ ಎಂ. ದೇವೇಂದ್ರಪ್ಪ, ಮಾಯಕೊಂಡ ಮಂಡಲ ಪ್ರಧಾನ ಕಾರ್ಯದರ್ಶಿ ಮಾಬುಲೇಶ್, ಹೆಬ್ಬಾಳ್ ಮಹೇಂದ್ರಪ್ಪ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣಜಿ ಗುಡ್ಡೇಶ್, ನವಿಲಿಯಾಳ್ ಕಲ್ಲೇಶ್, ಕಣವೇಬೆಳಿಚಿ ಅಜಯ ಇದ್ದರು.