ಮಾಮೂಲಿ ಬೇಡಿಕೆ ಆರೋಪ ಸತ್ಯಕ್ಕೆ ದೂರ

ರಾಯಚೂರು.ಜು.೧೩- ಎಂ.ಈರಣ್ಣ ವೃತ್ತದಲ್ಲಿ ತರಕಾರಿ ವ್ಯಾಪಾರಕ್ಕಾಗಿ ತರಕಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನಾನು ಮಾಮೂಲಿ ಕೇಳಿರುವುದಾಗಿ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಯಾವುದೆ ದೇವಸ್ಥಾನ ಅಥವಾ ದರ್ಗಾ ಸನ್ನಿಧಿಗೆ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನಾನು ಎಂ.ಈರಣ್ಣ ವೃತ್ತದಲ್ಲಿರುವ ತರಕಾರಿ ಮಾರುಕಟ್ಟೆ ಮಾರಾಟಗಾರರು ಮಾಮೂಲಿ ಕೇಳಿರುವುದು ಸಾಬೀತು ಮಾಡಿದರೆ, ನನ್ನ ವಿರುದ್ಧ ಈ ರೀತಿಯ ಸುಳ್ಳು ದೂರು ನೀಡುವುದರ ಹಿಂದೆ ನಗರಸಭೆ ಸದಸ್ಯರ ಪತಿರಾಯರ ಕೈವಾಡವಿದೆ. ಕಳೆದ ೧೩ ವರ್ಷಗಳಿಂದ ಎಂ.ಈರಣ್ಣ ವೃತ್ತದಲ್ಲಿ ಯಾವ ವ್ಯಾಪಾರ ಮಾಡಲಾಗುತ್ತಿತ್ತು ಎಂದು ಪ್ರಶ್ನಿಸಿದ ಅವರು, ಈ ರೀತಿ ಸುಳ್ಳು ಆರೋಪ ಮಾಡುವುದನ್ನು ತೀವ್ರವಾಗಿ ತರಕಾರಿ ಸಂಘದ ಅಧ್ಯಕ್ಷ ಮಹಾವೀರ ಅವರು ತಿಳಿಸಿದ್ದಾರೆ.