ಮಾಮಾ ಅವರ ಅಗಲಿಕೆಗೆ ಪತ್ರಕರ್ತರ ಸಂಘದಿಂದ ಸಂತಾಪ

ಬೀದರ:ಮೇ.3: ಫೋಟೊ ಗ್ರಾಫರ್ ಮಾಮಾ ಎಂದೇ ಹೆಸರು ವಾಸಿಯಾದ ಮಾಧ್ಯಮ ಲೋಕದ ಭಿಷ್ಮ ಮಾರೂತಿರಾವ ತಾಂದಳೆ ಅವರ ಅಗಲಿಕೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಕಂಬನಿ ಮಿಡಿದಿದೆ.

ಈ ಕುರಿತು ಪ್ರಕಟಣೆ ಹೊರಡಿಸಿದ ಸಂಘವು, ಎಂಟು ದಶಕದ ಅವರ ಸ್ವಾಭಿಮಾನ, ಪ್ರಾಮಾಣಿಕ, ಸೇವಾನಿಷ್ಟೆ, ಸರಳತೆ, ಸಜ್ಜನಿಕೆ ಇಡೀ ಜಿಲ್ಲೆಯ ಜನಮನಕ್ಕೆ ಪ್ರೀತಿ ಪಾತ್ರರಾಗಿದ್ದರು. ತಮ್ಮ ಐದು ದಶಕದ ಫೋಟೊಗ್ರಾಫಿ ಬದುಕು ಇಡೀ ದೇಶದ ಛಾಯಾಗ್ರಾಫಿ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಬಣ್ಣಿಸಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ದೇಶದೆಲ್ಲಡೆ ಹಾಗೂ ನಾಡಿನಾದ್ಯಂತ ಜರುಗಿದ ರಾಜ್ಯ ಸಮ್ಮೇಳನಗಳು, ರಾಷ್ಟ್ರ ಸಮ್ಮೇಳನಗಳು, ವಿಚಾರ ಸಂಕಿರಣಗಳು, ರಾಜ್ಯ ಮಟ್ಟದ ಸಾಮಾನ್ಯ ಸಭೆಗಳಲ್ಲಿ ನಮ್ಮೊಂದಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಕಳೆದ ಎರಡು ಮೂರು ವರ್ಷಗಳಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‍ನಲ್ಲಿ ಜರುಗಿದ ಸಮ್ಮೇಳನ, ಸುತ್ತುರು ಸಂಸ್ಥಾನದಲ್ಲಿ ಜರುಗಿದ ರಾಜ್ಯ ಸಮ್ಮೇಳನ, ಹಾಸನದಲ್ಲಿ, ಮಂಗಳೂರು ಹಾಗೂ ಇತ್ತಿಚೀಗೆ ಮಂಡ್ಯ ಜಿಲ್ಲೆಯ ಮದ್ದೂರ್‍ನಲ್ಲಿ ಜರುಗಿದ ರಾಜ್ಯ ಸಾಮಾನ್ಯ ಸಭೆಯಲ್ಲೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಇಡೀ ಪತ್ರಿಕಾ ಲೋಕಕ್ಕೆ ಮಾದರಿಯಾಗಿದ್ದರು.