ಮಾಫಿಯಾ ಲೋಕಕ್ಕೆ ಪ್ರಜ್ವಲ್ ಪ್ರವೇಶ

* ಚಿ.ಗೋ ರಮೇಶ್

ನಟ ಪ್ರಜ್ವಲ್ ದೇವರಾಜ್ “ಮಾಫಿಯಾ” ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ಅವರ ಹೊಸ ಚಿತ್ರದ ಹೆಸರು ಮಾಫಿಯಾ. ಲೋಹಿತ್ ಆಕ್ಷನ್ ಕಟ್ ಹೇಳುತ್ತಿದ್ದು ದುನಿಯಾ ವಿಜಯ್, ಪ್ರಿಯಾಂಕಾ ಉಪೇಂದ್ರ, ಕೆ.ಪಿ ಶ್ರೀಕಾಂತ್ ಸೇರಿದಂತೆ ಅನೇಕರು ಆಗಮಿಸಿ ಶುಭ ಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಲೋಹಿತ್,‌ಇದೊಂದು ಕಂಟೆಂಟ್ ಓರಿಯಂಟೆಡ್  ಚಿತ್ರದಲ್ಲಿ ದೇವರಾಜ್, ಒರಟ ಪ್ರಶಾಂತ್, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ  ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ‌ಆನಂತರ ಹೈದರಾಬಾದ್ ನ ರಾಮೋಜಿ‌ ಫಿಲಂ ಸಿಟಿಯಲ್ಲಿ ಚಿತ್ರೀಕರಣ. ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ‌ಎರಡು ಹಾಡುಗಳು ಸಿದ್ದಾವಾಗಿದೆ. ತರುಣ್ ಚಿತ್ರದ ಛಾಯಾಗ್ರಹಕರು ಹಾರೈಕೆ ಇರಲಿ ಎಂದರು.

ನಟ ಪ್ರಜ್ವಲ್,  ಚಿತ್ರದಲ್ಲಿ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಅನಾಥ ಹುಡುಗನಿಗೆ ಗೆಳೆಯನ ಮೇಲೆ ಹೆಚ್ಚು ಪ್ರೀತಿ. ಗೆಳೆಯ ಕೂಡ ಇನ್ಸ್ ಪೆಕ್ಟರ್ ಆಗಿರುರುತ್ತಾನೆ. ಆತನನ್ನು ನೋಡಿ ತಇನ್ಸ್ ಪೆಕ್ಟರ್ ಆಗಬೇಕೆಂದುಕೊಳ್ಳುತ್ತಾನೆ  ಎಂದು ಹೇಳಿದರು.

ನಟಿ ಅದಿತಿ ಪ್ರಭುದೇವ,ತನಿಖಾ ಪತ್ರಕರ್ತೆಯ ಪಾತ್ರ ಮಾಡುತ್ತಿದ್ದೇನೆ.ಇದಕ್ಕಾಗಿ ತಯಾರಿ ನಡೆಸಿದ್ದೇನೆ ಎಂದರು. ಸಂಭಾಷಣಾಕಾರ ಮಾಸ್ತಿ ಮಾತನಾಡಿ” ಮಾಫಿಯಾ” ಅಂದರೆ ಬರೀ ಮಚ್ಚು, ಲಾಂಗು ಅಲ್ಲ. ಅದನ್ನು ಬೇರೆ ರೀತಿಯಲ್ಲೂ ಹೇಳಬಹುದು ಎಂಬುದನ್ನು ಲೋಹಿತ್ ಚಿತ್ರದಲ್ಲಿ ತೋರಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ದೇವರಾಜ್ ಅಭಿಮಾನಿ.  ಚಿತ್ರದಲ್ಲಿ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್  ಅಭಿನಯಿಸುತ್ತಿದ್ದಾರೆ. ಸಂಭಾಷಣೆ ಬರೆಯುತ್ತಿರುವುದು ಸಂತಸ ತಂದಿದೆ ಎಂದರು.

ನಟ ಪ್ರಶಾಂತ್, ಬಹಳ ದಿನಗಳ ನಂತರ  ಚಿತ್ರದಲ್ಲಿ ನಟಿಸುತ್ತಿದ್ದೇನೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷ ಎಂದರು. ಸಾಹಸ ನಿರ್ದೇಶಕ ಡಿಫರಂಟ್ ಡ್ಯಾನಿ ಅವರ 666 ಚಿತ್ರ  ಇದು.ನಿರ್ಮಾಪಕ ಕುಮಾರ್ ಬಿ ಬಂಡವಾಳ ಹಾಕುತ್ತಿದ್ದಾರೆ.

ಗಣ್ಯರ ಹಾರೈಕೆ

ಮಾಫಿಯಾ ಚಿತ್ರಕ್ಕೆ ನಟ ದುನಿಯಾ ವಿಜಯ್, ನಿರ್ಮಾಪಕ ಕೆ.ಪಿ ಶ್ರೀಕಾಂತ್ ,ನಟಿ ಪ್ರಿಯಾಂಕ ಉಪೇಂದ್ರ ಸೇರಿದಂತೆ ಅನೇಕರು ಶುಭಹಾರೈಸಿದ್ದಾರೆ.ಲೋಹಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ