
ಮಾನ್ವಿ,ಆ.೦೮- ಎರಡನೇ ಅವಧಿಯ ಮಾನವಿ ತಾಲ್ಲೂಕಿನ ಒಟ್ಟು ೧೭ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅಂತಿಮವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಗಷ್ಟ್ ೦೩ ರಂದು ಉಟಕನೂರು ಗ್ರಾ.ಪಂ. ಅಧ್ಯಕ್ಷರಾಗಿ ಈರಮ್ಮ ಗಂಡ ಅಮರಪ್ಪ, ಉಪಾಧ್ಯಕ್ಷ ಬಸಮ್ಮ ಪಂಪಾಪತಿ ಆಯ್ಕೆಯಾಗಿದ್ದಾರೆ, ಸಾದಾಪೂರು ಗ್ರಾ ಪಂ ಅಧ್ಯಕ್ಷರಾಗಿ ನರಸಮ್ಮ, ಉಪಾಧ್ಯಕ್ಷ ಹನುಮೇಶ ಗೌಡ ಇವರು ಆಯ್ಕೆಯಾಗಿದ್ದಾರೆ. ಹಿರೇಕೊಟ್ನೇಕಲ್ ಗ್ರಾ ಪಂ ಅಧ್ಯಕ್ಷರಾಗಿ ಲಕ್ಷ್ಮೀ ಗಂಡ ಅಮರೇಶ, ಉಪಾಧ್ಯಕ್ಷ ಲಕ್ಷ್ಮೀ ಗಂಡ ಶ್ರೀನಿವಾಸ ಆಯ್ಕೆಯಾಗಿದ್ದಾರೆ.
ಆಗಷ್ಟ್ ೦೪ ರಂದು ಅರೋಲಿ ಗ್ರಾ ಪಂ ಅಧ್ಯಕ್ಷರಾಗಿ ವೀರಾರೆಡ್ಡಿ ಉಪಾಧ್ಯಕ್ಷರಾಗಿ ಮಲ್ಲಮ್ಮ ಗೂಗಲ್ ಆಯ್ಕೆಯಾಗಿದ್ದಾರೆ, ಬ್ಯಾಗವಾಟ ಗ್ರಾ ಪಂ ಅಧ್ಯಕ್ಷರಾಗಿ ಅಮರಮ್ಮ ಮಾರೆಪ್ಪ ಸಾಧು ಹಾಗೂ ಉಪಾಧ್ಯಕ್ಷ ಬಸಮ್ಮ ದೇವಪ್ಪ ಇವರು ಆಯ್ಕೆಯಾಗಿದ್ದಾರೆ. ಗೋರ್ಕಲ್ ಗ್ರಾ ಪಂ ಅಧ್ಯಕ್ಷರಾಗಿ ಲಕ್ಷ್ಮೀ ಗಂಡ ನಾಗೇಶ ಉಪಾಧ್ಯಕ್ಷರಾಗಿ ಸಾಯಮ್ಮ ಗಂಡ ನರಸಪ್ಪ ಆಯ್ಕೆಯಾಗಿದ್ದಾರೆ, ಜಾನೇಕಲ್ ಗ್ರಾ ಪಂ ಅಧ್ಯಕ್ಷರಾಗಿ ಚನ್ನಬಸವ ಪೋ ಪಾಟೀಲ ಉಪಾಧ್ಯಕ್ಷರಾಗಿ ಮೌಲಮ್ಮ ಗಂಡ ಲಕ್ಷ್ಮಣ ಆಯ್ಕೆಯಾಗಿದ್ದಾರೆ. ಕುರ್ಡಿ ಗ್ರಾ ಪಂ ಅಧ್ಯಕ್ಷರಾಗಿ ರಮೇಶ ತಂದೆ ಬುಡ್ಡಪ್ಪ ಉಪಾಧ್ಯಕ್ಷರಾಗಿ ಕರೆಮ್ಮ ಇವರು ಆಯ್ಕೆಯಾಗಿದ್ದಾರೆ. ಮದ್ಲಾಪೂರು ಗ್ರಾ ಪಂ ಅಧ್ಯಕ್ಷರಾಗಿ ಹುಸೇನ್ ಬೀ ಕಾಸಿಂಸಾಬ್ ಉಪಾಧ್ಯಕ್ಷರಾಗಿ ಮಂಜುಳಾ ಹನುಮಂತ ಆಯ್ಕೆಯಾಗಿದ್ದಾರೆ, ಸಂಗಾಪೂರ ಗ್ರಾ ಪಂ ಅಧ್ಯಕ್ಷರಾಗಿ ಪ್ರತಿಭಾ ವಿರೂಪಾಕ್ಷಪ್ಪಗೌಡ ಉಪಾಧ್ಯಕ್ಷರಾಗಿ ಚನ್ನಮ್ಮ ಆಂಜನೇಯಲು ಆಯ್ಕೆಯಾಗಿದ್ದಾರೆ, ನೀರಮಾನವಿ ಗ್ರಾ ಪಂ ಅಧ್ಯಕ್ಷರಾಗಿ ಈರಮ್ಮ ಗಂಡ ಈರಣ್ಣ ಉಪಾಧ್ಯಕ್ಷರಾಗಿ ಹನುಮಂತ ತಂದೆ ವೆಂಕೋಬ ಅರಕೇರಿ ಆಯ್ಕೆಯಾಗಿದ್ದಾರೆ.
ಆಗಷ್ಟ್ ೦೫ ರಂದು ನಡೆದ ಚುನಾವಣೆಯಲ್ಲಿ ಸುಂಕೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪ್ರಭಾವತಿ ಗಂಡ ತಿಮ್ಮಯ್ಯ ಉಪಾಧ್ಯಕ್ಷರಾಗಿ ಮಹಾದೇವಿ ನರಸಪ್ಪ ಆಯ್ಕೆಯಾಗಿದ್ದಾರೆ. ಹಾಗೂ ಪೋತ್ನಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಲಕ್ಷ್ಮೀ ಗಂಡ ಈರಣ್ಣ ಉಪಾಧ್ಯಕ್ಷ ರಂಗಮ್ಮ ಗಂಡ ತಿರುಪತಿ ಹಾಗೂ ಚಿಕ್ಕೊಟ್ನೇಕಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಹಾದೇವಿ ನಾಯಕ ಗಂಡ ಬಾಲಯ್ಯನಾಯಕ ಉಪಾಧ್ಯಕ್ಷರಾಗಿ ಬಸವರಾಜ ಗೌಡ ಆಯ್ಕೆಯಾಗಿದ್ದಾರೆ.
ಆಗಷ್ಟ್ ೦೬ ರಂದು ಕಪಗಲ್ ಗ್ರಾ ಪಂ ಅಧ್ಯಕ್ಷರಾಗಿ ಸುನೀತಾ ಉಪಾಧ್ಯಕ್ಷರಾಗಿ ಪದ್ದಮ್ಮ ಆಯ್ಕೆಯಾಗಿದ್ದಾರೆ ಹಾಗೂ ನಕ್ಕುಂದಿ ಗ್ರಾ ಪಂ ಅಧ್ಯಕ್ಷರಾಗಿ ಶಾರದಮ್ಮ ಉಪಾಧ್ಯಕ್ಷರಾಗಿ ಸಾಬಮ್ಮ ಆಯ್ಕೆಯಾಗಿದ್ದಾರೆ.
ಆಗಷ್ಟ್ ೦೭ ರಂದು ನಡೆದ ಬೋಗವತಿ ಗ್ರಾ ಪಂ ಅಧ್ಯಕ್ಷರಾಗಿ ಆದೆಮ್ಮ ಗಂಡ ರಂಗಪ್ಪ ಉಪಾಧ್ಯಕ್ಷರಾಗಿ ಅಮರಮ್ಮ ಇವರು ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.