ಮಾನ್ವಿ ವಿದ್ಯಾರ್ಥಿಗಳು ರಾಜ್ಯ ೫,೬ ನೇ ಸ್ಥಾನ

ಮಾನ್ವಿ,ಮೇ.೦೮- ರಾಜ್ಯ ಫ್ರೌಡ ಶಿಕ್ಷಣ ಮಂಡಳಿಯಿಂದ ನಡೆದ ೨೦೨೨/೨೩ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು ಅಖಂಡ ಮಾನ್ವಿ ತಾಲೂಕಿನ ಒಟ್ಟು ೮೧ ಫ್ರೌಡ ಶಾಲೆಯ ಫಲಿತಾಂಶ ಬಂದಿದ್ದು ಸರಿ ಸುಮಾರು ೧೦-೧೫ ಶಾಲೆಗಳು ೧೦೦% ಫಲಿತಾಂಶ ಪಡೆದಿದ್ದು ಕಾಕತೀಯ ಶಾಲೆಯ ವಿದ್ಯಾರ್ಥಿಗಳಾದ ಅನನ್ಯ ಭಟ್ ೬೨೫/೬೨೧ (೯೯.೩೬) ಅಂಕ ಹಾಗೂ ಅಕ್ಷಿತ್ ರಾಠೋಡ್ ೬೨೫/೬೨೦ (೯೯.೨೦) ಅಂಕ ಪಡೆಯುವ ಮೂಲಕ ಮಾನ್ವಿ ತಾಲೂಕಿನ ವಿದ್ಯಾರ್ಥಿಗಳು ರಾಜ್ಯಕ್ಕೆ ಐದು ಹಾಗೂ ಆರನೇ ಸ್ಥಾನ ಪಡೆಯುವ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ತಾಲೂಕ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಸಂತೋಷವನ್ನು ವ್ಯಕ್ತಪಡಿಸಿದರು.
ನಂತರ ಮಾತಾನಾಡಿದ ಅವರು ಇನ್ನೂ ಹೆಚ್ಚಿನ ಮಾಹಿತಿಗಾಗಿ ಎಲ್ಲಾ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು ಸಂಜೆಯೊಳಗೆ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.