ಮಾನ್ವಿ ಬಿ.ಸಿ.ಎಂ ವಸತಿ ನಿಲಯಗಳಿಗೆ ಅಡುಗೆಯವರೇ ಮೇಲ್ವಿಚಾರಕರು

ಸಂಜೆವಾಣಿ ವರದಿ
ಚಂದ್ರಶೇಖರ ಮದ್ಲಾಪೂರ
ಮಾನ್ವಿ,ಮಾ.೧೧- ತಾಲೂಕಿನ ಸರ್ಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಅಡುಗೆ ಹಾಗೂ ಅಡುಗೆ ಸಹಾಯಕರೇ ವಸತಿ ನಿಲಯಗಳ ಮೇಲ್ವಿಚಾರಕರಾಗಿ ಮಾಡುವ ಕೆಲಸ ಮಾಡುತ್ತಿರುವ ದುರದೃಷ್ಟಕರ ಸಂಗತಿ ಮಾನವಿ ತಾಲೂಕಿನಲ್ಲಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ರಾಯಚೂರು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಗಳ ನಿರ್ಲಕ್ಷ್ಯ ಸಂಪೂರ್ಣವಾಗಿ ಎದ್ದು ಕಾಣುವಂತಾಗಿದೆ.
ಮಾನ್ವಿ ತಾಲೂಕಿನ ಬ್ಯಾಗವಾಟ, ಬಾಗಲವಾಡ, ಬಲ್ಲಟಿಗಿ, ಹಾಲಾಪೂರು, ಕವಿತಾಳ, ಮಾನವಿ, ಪೋತ್ನಾಳ್, ಸಿರವಾರ, ಬಾಲಕಿಯರ ಮಾನವಿ, ಮೆಟ್ರಿಕ್ ನಂತರ ಬಾಲಕರು ಮಾನವಿ, ಮೆಟ್ರಿಕ್ ನಂತರ ಬಾಲಕಿಯರು ಮಾನವಿ, ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಒಟ್ಟು ೧೧ ವಸತಿ ನಿಲಯಗಳಿದ್ದು ಇದರಲ್ಲಿ ೯ ಸರ್ಕಾರಿ ಸ್ವತಃ ಕಟ್ಟಡಗಳು ಹಾಗೂ ಮೂರು ಮಾತ್ರ ಬಾಡಿಗೆ ಕಟ್ಟಡಗಳಿವೆ, ಇದರಲ್ಲಿ ಒಟ್ಟು ೮೦೦ ರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೂ ಕೂಡ ಕೇವಲ ಖಾಯಂ ಮೇಲ್ವಿಚಾರಕರಾಗಿ ನೀಲಮ್ಮ, ಭಗಯ್ಯ, ರಜೀಯಾ ಸುಲ್ತಾನ್ ಎನ್ನುವಂತಹ ಮೂರು ಜನರು ಮಾತ್ರ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದು ಇನ್ನುಳಿದ ವಸತಿ ನಿಲಯಗಳಿಗೆ ಡಿ ದರ್ಜೆ ನೌಕರರನ್ನು ಅಥಾವ ಅಡುಗೆ ಮಾಡುವ ಮತ್ತು ಅಡುಗೆ ಸಹಾಯಕರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಿ ಮಕ್ಕಳ ಜೀವನದ ಜೊತೆಗೆ ಚಲ್ಲಾಟವಾಡುವಂತೆ ಕಾಣಿಸುತ್ತಿದೆ.
ಪ್ರಮುಖವಾಗಿ ಒಂದು ವಸತಿ ನಿಲಯವನ್ನು ನಿರ್ವಹಣೆ ಮಾಡಬೇಕಾದರೆ ಅದಕ್ಕೆ ಆಗಿರುವಂತ ಕಾನೂನು ಕಟ್ಟುಪಾಡುಗಳು, ತರಬೇತಿ, ಆರೋಗ್ಯ ವಿಷಯದಲ್ಲಿ ಮಾಹಿತಿ ಸೇರಿದಂತೆ ನೂರಾರು ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಾಣಿಕೆ ಇರುಬೇಕಾಗಿರುತ್ತದೆ ಆದರೆ ಯಾವ ದೃಷ್ಟಿಯಿಂದ ಅಥವಾ ಯಾರ ಒತ್ತಡಕ್ಕೆ ಮಣಿದು ಕಾರ್ಮಿಕರನ್ನು ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೋ ಎನ್ನುವ ತಿಳಿಯದಾಗಿದೆ.
ಕೂಡಲೇ ಸ್ಥಳೀಯ ಶಾಸಕ ವೆಂಕಟಪ್ಪ ನಾಯಕ ಇವರು ಇದರ ಕುರಿತು ಮಾಹಿತಿ ಪಡೆದುಕೊಂಡು ಕೂಡಲೇ ಅಧಿಕೃತ ಮೇಲ್ವಿಚಾರಕರನ್ನು ನೇಮಕ ಮಾಡುವಂತೆ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ವಿಸ್ತರಣಾಧಿಕಾರಿ ಗುಡ್ಡೆಪ್ಪ ಇವರಿಗೆ ಸೂಚಿಸಿದರೆ ಬಡ ವಿದ್ಯಾರ್ಥಿಗಳು ಬದುಕು ಹಸನವಾಗುವುದರಲ್ಲಿ ಎರಡನೇ ಮಾತಿಲ್ಲ.
ಮುಂದಿನ ಭಾಗದಲ್ಲಿ ಸಮಾಜ ಕಲ್ಯಾಣದ ಹನ್ನೊಂದು ಹಾಗೂ ಪರಿಶಿಷ್ಟ ಪಂಗಡದ ೫+೧ ಆರು ವಸತಿ ನಿಲಯಗಳ ಸಮಸ್ಯೆಗಳನ್ನು ಹಾಗೂ ಅಧಿಕಾರಿಗಳ ನಡುವಳಿಕೆಗಳ ಕುರಿತು ವಿಸ್ತಾರವಾದ ವರದಿ ಮಾಡಲಾಗುತ್ತದೆ.

ಬಾಕ್ಸ್ ಐಟಂ ೧
ಮಾನ್ವಿ,ಸಿರವಾರ,ಮಸ್ಕಿ ತಾಲೂಕಿನಲ್ಲಿ ಮೇಲ್ವಿಚಾರಕ ನೌಕರರ ಕೊರತೆ ಇರುವ ಕಾರಣದಿಂದಾಗಿ ಜಿಲ್ಲಾಡಳಿತ ಒಪ್ಪಿಗೆ ಪಡೆದು ಅಡುಗೆಯರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ ಇದರಲ್ಲಿ ಯಾವ ರಾಜಕೀಯ ಒತ್ತಡವು ಇಲ್ಲ.

ಗುಡ್ಡೆಪ್ಪ ಜಿಲ್ಲಾ ವಿಸ್ತರಣಾಧಿಕಾರಿ ಹಿಂದುಳಿದ ವರ್ಗಗಳ ವಸತಿ ನಿಲಯ ರಾಯಚೂರು

ಬಾಕ್ಸ್ ಐಟಂ
ಹಿಂದುಳಿದ ವರ್ಗಗಳ ಜಿಲ್ಲಾ ಆಡಳಿತ ಅಧಿಕಾರಿಗಳು ಇವರನ್ನು ನೇಮಕ ಮಾಡಿದ್ದಾರೆ ಇದರ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ.
ನೀಲಮ್ಮ ಪ್ರಭಾರಿ ಅಧಿಕಾರಿ ಮಾನ್ವಿ

ಬಾಕ್ಸ್ ಐಟಂ ೩
ಡಿ ದರ್ಜೆಯ ನೌಕರರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡುವಂತಿಲ್ಲ ಯಾಕೆಂದರೆ ಅವರಿಗೆ ಮಕ್ಕಳ ರಕ್ಷಣೆ ಹಾಗೂ ಆಹಾರ ಪದ್ದತಿಗಳ ನಿಯಮಗಳು ಗೊತ್ತಿರುವುದಿಲ್ಲ ಇದೊಂದು ರಾಜಕೀಯ ಕುತಂತ್ರದಿಂದ ನೇಮಕ ಮಾಡಲಾಗಿದ್ದು ಇದರಲ್ಲಿ ಜಿಲ್ಲಾ ವಿಸ್ತರಣಾಧಿಕಾರಿಗಳ ಕೈವಾಡವಿದೆ.

ಸುಧಾಕರ ಅರೋಲಿ
ಸಾಮಾಜಿಕ ಕಾರ್ಯಕರ್ತ