ಮಾನ್ವಿ ಬಿಜೆಪಿ ಕಾರ್ಯಕರ್ತರಲ್ಲಿ ಭಿನ್ನಮತ ಸ್ಫೋಟವರಿಷ್ಠರ ನಿರ್ಣಯವೇ ಅಂತಿಮವೆಂದ ಶಿವರಾಜ ಪಾಟೀಲ

Oplus_0

ಸಂಜೆವಾಣಿ ವಾರ್ತೆ
ಮಾನ್ವಿ.ಏ.೧೩- ಲೋಕಸಭಾ ಚುನಾವಣೆಯ ಬಿಸಿ ರಾಯಚೂರು ಬಿಜೆಪಿ ಪಕ್ಷದ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಮಾನ್ವಿ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಭಿನ್ನಮತ ಸ್ಪೋಟವಾಗಿದ್ದು ಅದನ್ನು ತಣ್ಣಗಾಗಿಸುವುದಕ್ಕಾಗಿದೆ ರಾಯಚೂರು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಶಾಸಕ ಡಾ ಶಿವರಾಜ ಪಾಟೀಲ ಇವರ ಮುಂದೆಯೇ ಸಿರವಾರ ತಾಲೂಕಿನ ಕಾರ್ಯಕರ್ತರ ಭಿನ್ನಮತ ಸ್ಪೋಟವಾಗಿ ಹಾಲಿ ಸಂಸದರು ಯಾರನ್ನು ಲೆಕ್ಕಿಸದೆ ರಾಜಕೀಯ ಮಾಡುವ ವ್ಯಕ್ತಿಯಾಗಿದ್ದಾರೆ ಅದಕ್ಕಾಗಿ ನಮ್ಮ ನಾಯಕರಾದ ಬಿವಿ ನಾಯಕ ಇವರಿಗೆ ಟಿಕೆಟ್ ನೀಡಬೇಕು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸದ ಜಿಲ್ಲಾಧ್ಯಕ್ಷರು ಇದು ರಾಷ್ಟ್ರೀಯ ನಾಯಕರ ಆಯ್ಕೆ ಹಾಗೂ ನಿರ್ಣಯವಾಗಿದ್ದು ನಾವು-ನೀವುಗಳು ಪಕ್ಷವನ್ನು ಬಲಪಡಿಸಬೇಕು ಹಾಗೂ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕಾಗಿದೆ ಎಂದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸಂಜೆ ನಡೆದ ಮಾನ್ವಿ-ಸಿರವಾರ ತಾಲೂಕ ಬಿಜೆಪಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಜಿಲ್ಲಾಧ್ಯಕ್ಷ-ಶಾಸಕ ಡಾ ಶಿವರಾಜ ಪಾಟೀಲ ಮಾತಾನಾಡಿ ಜಗತ್ತಿನಲ್ಲೇ ಅತಿದೊಡ್ಡ ಪಕ್ಷವಾದ ಬಿಜೆಪಿಯಲ್ಲಿ ಭಿನ್ನಮತ ಉಂಟಾಗುವುದು ಸಹಜ ಅಭ್ಯರ್ಥಿಯ ಆಯ್ಕೆ ಸಂಪೂರ್ಣವಾಗಿ ರಾಷ್ಟ್ರೀಯ ನಾಯಕರದ್ದಾಗಿದೆ, ಕಾರ್ಯಕರ್ತರಾದ ನಾವುಗಳು ತಳಮಟ್ಟದ ಹಾಗೂ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಬೇಕಾಗಿದೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನೀಡಿರುವ ಹೆಚ್ಚಿನ ಮತಗಳಿಗಿಂತ ಈ ಬಾರಿ ಇನ್ನೂ ಹೆಚ್ಚಿನ ಮತ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಪ್ರಶ್ನೆ ಮಾಡಿದ ಮುಖಂಡರಾದ ಜಯರಾಜ ಬಾದರದಿನ್ನಿ, ಮೌಲಸಾಬ್ ಗಣದಿನ್ನಿ, ವೆಂಕಟೇಶ ದೇವತಗಲ್, ಭೀಮಣ್ಣ ಹರವಿ ಸೇರಿದಂತೆ ಪ್ರಶ್ನೆ ಮಾಡಿದ ಕಾರ್ಯಕರ್ತರಿಗೆ ಹೇಳಿದರು. ನಂತರ ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ ಇವರುಗಳು ಮಾತಾನಾಡಿದ ಪಕ್ಷ ಆಯ್ಕೆ ಮಾಡಿದ ಅಭ್ಯರ್ಥಿಗೆ ನಾವು ಬೆಂಬಲಿಸಬೇಕು ಹಾಗೂ ಮೋದಿಯ ಕೈಯನ್ನು ಬಲಪಡಿಸಲು ಕೆಲಸ ಮಾಡಬೇಕಾಗಿದೆ ಎಂದರು.

(ಬಾಕ್ಸ್ ಐಟಂ)
ಬಿ.ವಿ.ನಾಯಕ ಹೇಳಿಕೆ
ಕಾರ್ಯಕರ್ತರಿಗೆ ದಕ್ಕೆಯಾಗದಂತೆ ವರಿಷ್ಠರ ನಿಲುವು ಸಾಧ್ಯತೆ
ಚುನಾವಣೆಯಲ್ಲಿ ಸಾವಿರಾರು ಸವಾಲುಗಳನ್ನು ಮೆಟ್ಟಿ ತಳ ಮಟ್ಟದ ಕಾರ್ಯಕರ್ತರ ಮನೋಭಾವನೆಗೆ ದಕ್ಕೆಯಾಗದಂತೆ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ರಾಜಕೀಯ ಸಾಮರ್ಥ್ಯವನ್ನು ತೋರಿಸಬೇಕಾಗುತ್ತದೆ.
ತಳಮಟ್ಟದ ಕಾರ್ಯಕರ್ತರನ್ನು ಬೇಕಾಬಿಟ್ಟಿಯಾಗಿ ಗುಲಾಮರಂತೆ ನಡೆಸಿಕೊಂಡು ನೈತಿಕತೆ ಇಲ್ಲದೆ ಚುನಾವಣೆ ನಡೆಸುವುದು ಎಂದಿಗೂ ಅಸಾಧ್ಯವಾದ ಮಾತಾಗಿದೆ , ರಾಜಕೀಯಕ್ಕೆ ಬರುವುದು ಅಧಿಕಾರಕ್ಕಾಗಿ ಹಾಗೂ ಸ್ವಂತ ಏಳಿಗೆಗಾಗಿ ಎಲ್ಲ ಬದಲಾಗಿ ಬಡವರ ಕಷ್ಟಕ್ಕೆ ಸ್ಪಂದಿಸಬೇಕು ಮತ್ತು ಕಾರ್ಯಕರ್ತರ ಮನಸ್ಥಿತಿಯನ್ನು ಅರಿತುಕೊಂಡು ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಹಾಲಿ ಸಂಸದರಿಗೆ ಮಾತಿನ ಛಾಟಿ ಬೀಸಿದರು. ಬಿಜೆಪಿ ಪಕ್ಷದಿಂದ ನನಗೆ ಟಿಕೆಟ್ ಸಿಗುತ್ತದೆ ಎನ್ನುವ ದಾಟಿಯಲ್ಲಿ ಮಾತಾನಾಡಿದ ಅವರು ಕಾಯ್ದು ನೋಡಿ ಪಕ್ಷದ ವರಿಷ್ಠರ ಆಯ್ಕೆಯೇ ಅಂತಿಮವಾಗಿರುತ್ತದೆ ಎಂದರು.