ಮಾನ್ವಿ ಬಿಜೆಪಿಯಿಂದ ಮೂವರ ಹೆಸರು ಪೈನಲ್

ಏಪ್ರಿಲ್ ೦೮ ಅಂತಿಮ ಅಭ್ಯರ್ಥಿ ಘೋಷಣೆ ಸಾಧ್ಯತೆ
ಚಂದ್ರಶೇಖರ ಮದ್ಲಾಪೂರ
ಮಾನ್ವಿ,ಏ.೦೨- ರಾಯಚೂರು ಜಿಲ್ಲಾ ಬಿಜೆಪಿ ಸಮಿತಿಯ ಹಿರಿಯ ಸದಸ್ಯ ಮಾಹಿತಿಯಂತೆ ಮಾನ್ವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳಾಗಿ ಮಾಜಿ ಶಾಸಕ ಗಂಗಾಧರ ನಾಯಕ, ಅಯ್ಯಪ್ಪ ನಾಯಕ, ಮಾನಪ್ಪ ನಾಯಕ ಇವರ ಹೆಸರುಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷರ ಹಾಗೂ ಜಿಲ್ಲಾ ಬಿಜೆಪಿಯ ಕೋರ್ ಕಮಿಟಿಯ ಸಭೆ ಮಾಡಿ ಈಗಾಗಲೇ ಬಿಜೆಪಿ ಅಂತರಿಕ ಸಮೀಕ್ಷೆಯ ಅನುಗುಣವಾಗಿ ಪ್ರಬಲ ಆಕಾಂಕ್ಷಿಗಳಾಗಿ ಈ ಮೂರು ಜನರ ಹೆಸರು ಕೇಳಿ ಬಂದಿದ್ದು ಅವರ ಹೆಸರನ್ನು ರಾಜ್ಯ ಬಿಜೆಪಿ ಸಮಿತಿಗೆ ಸಲ್ಲಿಸಲಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಯಚೂರು ಜಿಲ್ಲಾ ಬಿಜೆಪಿಯ ಕೋರ್ ಕಮಿಟಿಯ ಹಿರಿಯ ಸದಸ್ಯ ಎನ್ ಶಂಕ್ರಪ್ಪ ಇವರು ಮಾಹಿತಿ ನೀಡಿದರು.
ಆದರೆ ಮಾನವಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳಲ್ಲಿ ಬಾರಿ ಗೊಂದಲವಿರುವ ಕಾರಣದಿಂದಾಗಿ ಬಿಜೆಪಿಯ ಕಾರ್ಯಕರ್ತರು ಬಹಳ ಆತಂಕ ವ್ಯಕ್ತಪಡಿಸುತ್ತಾ ನಮ್ಮ ಅಭ್ಯರ್ಥಿಗೆ ಟಿಕೆಟ್ ಪೈನಲ್ ಎಂದು ಹೇಳುತ್ತಿದ್ದಾರೆ. ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮಾನ್ವಿ ಬಿಜೆಪಿ ಅಭ್ಯರ್ಥಿ ನಾವೇ ಎನ್ನುವ ರೀತಿಯಲ್ಲಿ ಅನೇಕರು ಪ್ರಚಾರದಲ್ಲಿ ತೊಡಗಿ ಅಂತರಜಾಲದ ಮೂಲಕ ತಿಳಿಯಪಡಿಸುತ್ತಿದ್ದಾರೆ.
ಈಗಾಗಲೇ ರಾಯಚೂರು ಜಿಲ್ಲಾ ಬಿಜೆಪಿ ಸಮಿತಿಯಿಂದ ಸರದಿಯಂತೆ ಮಾಜಿ ಶಾಸಕ ಗಂಗಾಧರ ನಾಯಕ, ಅಯ್ಯಪ್ಪ ನಾಯಕ ಮ್ಯಾಕಲ್, ಮಾನಪ್ಪ ನಾಯಕ ಈ ಮೂರು ಆಕಾಂಕ್ಷಿಗಳ ಹೆಸರು ಅಂತಿಮ ಮಾಡಿದ್ದು ನಂತರ ರಾಜ್ಯ ಸಮಿತಿ ಈ ಮೂವರ ಹೆಸರಿನಲ್ಲಿ ಎರಡನ್ನು ಅಂತಿಮ ಮಾಡಿ ಕೇಂದ್ರ ಬಿಜೆಪಿ ಸಮಿತಿಗೆ ರವಾನಿಸುತ್ತಾರೆ ನಂತರ ರಾಷ್ಟ್ರೀಯ ಬಿಜೆಪಿ ಸಮಿತಿಯು ಮಾಡಿದ ಸರ್ವೆಯ ಅನುಗುಣವಾಗಿ ಒಬ್ಬರ ಹೆಸರನ್ನು ಅಂತಿಮಗೊಳಿಗೆ ಮಾರ್ಚ್ ೦೮ ರಂದು ಮಾನವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರನ್ನು ಪ್ರಕಟಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.