ಮಾನ್ವಿ ತಾಲೂಕ ಗ್ರಾ,ಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮಾನ್ವಿ,ಆ.೦೫ -ಎರಡನೇ ಅವಧಿಗಾಗಿ ನಡೆಯುತ್ತಿರುವ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಬಾರಿ ಪೈಪೋಟಿ ಕಂಡು ಬರುತ್ತಿದ್ದು ತಾಲ್ಲೂಕಿನ ಒಟ್ಟು ೧೭ ಗ್ರಾಮ ಪಂಚಾಯತಿಗಳಿದ್ದು ಈಗಾಗಲೇ ೧೧ ಗ್ರಾಮ ಪಂಚಾಯತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದ್ದು ಇನ್ನುಳಿದ ಗ್ರಾಮ ಪಂಚಾಯತಿಗಳಾದ, ಚಿಕ್ಕಕೊಟ್ನೆಕಲ್, ಪೋತ್ನಾಳ, ಸುಂಕೇಶ್ವರ, ಕಪಗಲ್, ನಕ್ಕುಂದಿ , ಬೋಗವತಿ ಗ್ರಾ ಪಂ ಅಧ್ಯಕ್ಷರ ಆಯ್ಕೆಯು ನಾಳೆ ಹಾಗೂ ನಾಡಿದ್ದು ನಡೆಯಲಿದೆ..
ಆಗಷ್ಟ್ ೦೩ ರಂದು ಉಟಕನೂರು ಗ್ರಾ ಪಂ ಅಧ್ಯಕ್ಷರಾಗಿ ಈರಮ್ಮ ಗಂಡ ಅಮರಪ್ಪ, ಉಪಾಧ್ಯಕ್ಷ ಬಸಮ್ಮ ಪಂಪಾಪತಿ ಆಯ್ಕೆಯಾಗಿದ್ದಾರೆ, ಸಾದಾಪೂರು ಗ್ರಾ ಪಂ ಅಧ್ಯಕ್ಷರಾಗಿ ನರಸಮ್ಮ, ಉಪಾಧ್ಯಕ್ಷ ಹನುಮೇಶ ಗೌಡ ಇವರು ಆಯ್ಕೆಯಾಗಿದ್ದಾರೆ. ಹಿರೇಕೊಟ್ನೇಕಲ್ ಗ್ರಾ ಪಂ ಅಧ್ಯಕ್ಷರಾಗಿ ಲಕ್ಷ್ಮೀ ಗಂಡ ಅಮರೇಶ, ಉಪಾಧ್ಯಕ್ಷ ಲಕ್ಷ್ಮೀ ಗಂಡ ಶ್ರೀನಿವಾಸ ಆಯ್ಕೆಯಾಗಿದ್ದಾರೆ. ಬೋಗವತಿ ಗ್ರಾಮ ಪಂಚಾಯತಿ ಅಧ್ಯಕ್ಷ ಆಯ್ಕೆ ಸಮಯದಲ್ಲಿ ಕೊರಂ ಕೊರತೆಯಿಂದ ಸೋಮವಾರ ಮುಂದೂಡಿಕೆ ಮಾಡಲಾಗಿದೆ.
ಆಗಷ್ಟ್ ೦೪ ರಂದು ಅರೋಲಿ ಗ್ರಾ ಪಂ ಅಧ್ಯಕ್ಷರಾಗಿ ವೀರಾರೆಡ್ಡಿ ಉಪಾಧ್ಯಕ್ಷರಾಗಿ ಮಲ್ಲಮ್ಮ ಗೂಗಲ್ ಆಯ್ಕೆಯಾಗಿದ್ದಾರೆ, ಬ್ಯಾಗವಾಟ ಗ್ರಾ ಪಂ ಅಧ್ಯಕ್ಷರಾಗಿ ಅಮರಮ್ಮ ಮಾರೆಪ್ಪ ಸಾಧು ಹಾಗೂ ಉಪಾಧ್ಯಕ್ಷ ಬಸಮ್ಮ ದೇವಪ್ಪ ಇವರು ಆಯ್ಕೆಯಾಗಿದ್ದಾರೆ. ಗೋರ್ಕಲ್ ಗ್ರಾ ಪಂ ಅಧ್ಯಕ್ಷರಾಗಿ ಲಕ್ಷ್ಮೀ ಗಂಡ ನಾಗೇಶ ಉಪಾಧ್ಯಕ್ಷರಾಗಿ ಸಾಯಮ್ಮ ಗಂಡ ನರಸಪ್ಪ ಆಯ್ಕೆಯಾಗಿದ್ದಾರೆ, ಜಾನೇಕಲ್ ಗ್ರಾ ಪಂ ಅಧ್ಯಕ್ಷರಾಗಿ ಚನ್ನಬಸವ ಪೋ ಪಾಟೀಲ ಉಪಾಧ್ಯಕ್ಷರಾಗಿ ಮೌಲಮ್ಮ ಗಂಡ ಲಕ್ಷ್ಮಣ ಆಯ್ಕೆಯಾಗಿದ್ದಾರೆ. ಕುರ್ಡಿ ಗ್ರಾ ಪಂ ಅಧ್ಯಕ್ಷರಾಗಿ ರಮೇಶ ತಂದೆ ಬುಡ್ಡಪ್ಪ ಉಪಾಧ್ಯಕ್ಷರಾಗಿ ಕರೆಮ್ಮ ಇವರು ಆಯ್ಕೆಯಾಗಿದ್ದಾರೆ. ಮದ್ಲಾಪೂರು ಗ್ರಾ ಪಂ ಅಧ್ಯಕ್ಷರಾಗಿ ಹುಸೇನ್ ಬೀ ಕಾಸಿಂಸಾಬ್ ಉಪಾಧ್ಯಕ್ಷರಾಗಿ ಮಂಜುಳಾ ಹನುಮಂತ ಆಯ್ಕೆಯಾಗಿದ್ದಾರೆ, ಸಂಗಾಪೂರ ಗ್ರಾ ಪಂ ಅಧ್ಯಕ್ಷರಾಗಿ ಪ್ರತಿಭಾ ವಿರೂಪಾಕ್ಷಪ್ಪಗೌಡ ಉಪಾಧ್ಯಕ್ಷರಾಗಿ ಚನ್ನಮ್ಮ ಆಂಜನೇಯಲು ಆಯ್ಕೆಯಾಗಿದ್ದಾರೆ, ನೀರಮಾನವಿ ಗ್ರಾ ಪಂ ಅಧ್ಯಕ್ಷರಾಗಿ ಈರಮ್ಮ ಗಂಡ ಈರಣ್ಣ ಉಪಾಧ್ಯಕ್ಷರಾಗಿ ಹನುಮಂತ ತಂದೆ ವೆಂಕೋಬ ಅರಕೇರಿ ಆಯ್ಕೆಯಾಗಿದ್ದಾರೆ ಇನ್ನುಳಿದಂತೆ ಆಗಷ್ಟ್ ೦೫ ರಂದು ಚಿಕ್ಕಕೊಟ್ನೆಕಲ್, ಪೋತ್ನಾಳ, ಸುಂಕೇಶ್ವರ ಹಾಗೂ ಆಗಷ್ಟ್ ೦೬ ರಂದು ಕಪಗಲ್, ನಕ್ಕುಂದಿ ಹಾಗೂ ಅಗಸ್ಟ ೦೭ ರಂದು ಬೋಗವತಿ ಗ್ರಾ ಪಂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.