ಮಾನ್ವಿ ಗ್ರಾ,ಪಂ ಅನುದಾನ ದುರ್ಬಳಕೆ ೨೦ ದಿನದೊಳಗೆ ಕ್ರಮದ ಭರವಸೆ

ಮಾನ್ವಿ,ಜು.೨೬ – ತಾಲ್ಲೂಕಿನ ಮದ್ಲಾಪೂರ, ಭೋಗಾವತಿ, ಹಿರೇ ಕೊಟ್ಟೆಕಲ್, ಪೋತ್ನಾಳ ಹಾಗೂ ಚಿಕ್ಕಕೊಟ್ಟೆಕಲ್ ಸೇರಿದಂತೆ ಅನೇಕ ಗ್ರಾಮ ಪಂಚಾಯತಿಗಳಿಗೆ ರಾಜ್ಯ ಆಯೋಗದಿಂದ ಬಿಡುಗಡೆಯಾದ ಅನುದಾನದಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ತನಿಖೆ ಹಾಗೂ ನರೇಗಾ, ಅಮೃತ ಸರೋವರ ಯೋಜನೆಗಳಡಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸುವಂತೆ ಹಾಗೂ ಗ್ರಾಮ ಪಂಚಾಯತಿಗಳ ಪಂ.ಅ.ಅಧಿಕಾರಿಗಳು, ಕಾರ್ಯದರ್ಶಿ, ಜೆ.ಇ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ಈ ಅನುದಾನವನ್ನು ಪಡೆದುಕೊಂಡಿರುವ ಏಜೆನ್ಸಿಗಳ ಪರವಾನಿಗೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ( ಸಮತಾವಾದ ) ಹೋರಾಟವನ್ನು ಮಾಡಿದರು..
ಪಟ್ಟಣದ ಶಾಸಕರ ಭವನ ಮುಂದೆ ಧರಣಿ ಸ್ಥಳಕ್ಕೆ ತಾಪಂ ಅಧಿಕಾರಿ ಸೈಯಾದ್ ಪಾಟೀಲ ಭೇಟಿ ನೀಡಿ ಇನ್ನೂ ೨೦ ದಿನದೊಳಗೆ ಗ್ರಾ ಪಂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇನೆ ಎಂದರು ನಂತರ ಅಧ್ಯಕ್ಷ ಸದಾನಂದ ಪನ್ನೂರು ಮಾತಾನಾಡಿ ಬರುವ ಮದ್ಲಾಪುರ, ಭೋಗಾವತಿ, ಹಿರೇಕೊಟ್ಟೆಕಲ್, ಪೋತ್ನಾಳ, ಚಿಕ್ಕಕೊಟ್ಟೆಕಲ್, ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಜೆ.ಇ ಮತ್ತು ಸಿಬ್ಬಂದಿಗಳು ೨೦೨೧-೨೨ನೇ ಸಾಲಿನಿಂದ ೨೦೨೨-೨೩ನೇ ಸಾಲಿನವರೆಗೆ ೧೫ನೇ ಹಣಕಾಸು ಆಯೋಗದ ಅನುದಾನದಡಿ ಬಿಡುಗಡೆಯಾದ ಲಕ್ಷಾಂತರ ರೂಪಾಯಿಗಳ ಅನುದಾನವನ್ನು ಅಧಿಕಾರಿಗಳು ಕಾಯ್ದೆ ಮೀರಿ, ಗ್ರಾಮ ಸಭೆಗಳನ್ನು ಮಾಡದೇ, ಕ್ರಿಯ ಯೋಜನೆಗಳನ್ನು ಮಾಡಿಕೊಂಡು ಕೆಲ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆಯದ ಮನ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿಗಳ ಸಾರ್ವಜನಿಕರ ಅನುದಾನವು ಬರೀ ದಾಖಲೆಗಳಿಗೆ ಸೀಮಿತವಾಗಿದ್ದು ಗ್ರಾಮಗಳ ಅಭಿವೃದ್ಧಿ ಶೂನ್ಯವಾಗಿವೆ. ಅಂಗನವಾಡಿ ಕೇಂದ್ರಗಳಿಗೆ ಸುಣ್ಣ-ಬಣ್ಣ, ಗೋಡೆ ಬರಹ, ಶಾಲೆಗಳಿಗೆ ನೆಲ ಹಾಸು, ಫ್ಯಾನಗಳ ಅಳವಡಿಕೆ, ವಿದ್ಯುತ್ ದುರಸ್ಥಿ, ಕುಡಿಯುವ ನೀರಿನ ಪೈಪ್ ಗಳ ಅಳವಡಿಕೆ ಸಾರ್ವಜನಿಕ ಕುಡಿಯುವ ನೀರಿನ ದುರಸ್ಥಿ, ಪೈಪ್ ಲೈನ್ ಗಳ ದುರಸ್ತಿ, ಬೀದಿ ದೀಪಗಳ ಅಳವಡಿಕೆ, ಪಾಗಿಂಗ್, ಇಂಟರ್‌ನೆಟ್ ಬ್ರೌಸಿಂಗಳ ಸೆಂಟಗಳಿಂದ ಕಂಪ್ಯೂಟರ್ ಖರೀದಿ, ನಿರ್ವಹಣೆ, ಗ್ರಾಮ ಪಂಚಾಯತಿಗಳಿಗೆ ದುರಸ್ಥಿ, ವಯರಿಂಗ್ ಫ್ಯಾನ್‌ಗಳ ಅಳವಡಿಕೆ, ಪರಿಕರಗಳ ಖರೀದಿ, ಸೋಲಾರ ರೂಪ್ ಟಾಪ್ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಸಾಗಾಣಿಕೆಗಾಗಿ ಆಟೋ ನಿರ್ವಹಣೆಗಾಗಿ ಕಾಯ್ದಿರಿಸಿದ ಬಾಬತ್ತು ಇತ್ಯಾದಿ ಕಾಮಗಾರಿಗಳ ಹೆಸರಿನಲ್ಲಿ ಅನುದಾನಗಳನ್ನು ಏಜೆನ್ಸಿಗಳ ಮಾಲೀಕರೊಂದಿಗೆ ಶಾಮೀಲಾಗಿ ದುರ್ಬಳಕೆ ಮಾಡಿರುತ್ತಾರೆ. ಮಾತ್ರವಲ್ಲದೆ ಪಂಚಾಯತಿಗೆ ಬರುವಂತಹ ಕುಡಿಯುವ ನೀರು, ಶಾಸನ ಬದ್ಧ ಅನುದಾನ, ಕರವಸೂಲಿ, ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಬಸವರಾಜ ಸುಕೇಂಶ್ವರ, ಹುಸೇನಪ್ಪ ಪನ್ನೂರು , ಕೆ ಎಂ ಲಾರೆನ್ಸ್, ಕುಮಾರ್ ಕತಾರಕಿ, ರವಿ ಜಗ್ಲಿ,ಭೀಮಣ್ಣ ಮದ್ಲಾಪೂರು, ಹನುಮಂತ ಸಾದಾಪೂರು, ರವಿ ಮದ್ಲಾಪೂರು, ಅಧಿಕಾರಿಗಳಾದ ತಾ.ಪಂ. ಅಧಿಕಾರಿ ಸೈಯಾದ್ ಪಾಟೀಲ್, ಎ ಡಿ ಹನುಮಂತಪ್ಪ,ಮ್ಯಾನೇಜರ್ ಬಸವರಾಜ, ಪೋಲಿಸ್ ಸಿಬ್ಬಂದಿಗಳು, ಇದ್ದರು.