ಮಾನ್ವಿ ಕ್ಷೇತ್ರ: ರಾಷ್ಟ್ರಿಯ ಪಕ್ಷಗಳ ಕಾರ್ಯಕರ್ತರ ಅಸಮಾಧಾನ

ಹಗ್ಗಜಗ್ಗಾಟದಲ್ಲಿ ಯಾರಿಗೆ ಲಾಭ ?ಯಾರಿಗೆ ನಷ್ಟ?
ರಾಯಚೂರು,ಏ.೦೮- ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಈಗಾಗಲೇ ಹಾಲಿ ಶಾಸಕರಾದ ರಾಜ ವೆಂಕಟಪ್ಪ ನಾಯಕ್ ಅವರನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಆದರೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದರಲ್ಲಿ ಒದ್ದಾಡ್ತಾ ಇದಾವೆ, ಇದರ ಬೆನ್ನಲ್ಲಿ ಗಾಳಿ ಸುದ್ದಿಗಳಿಗೆ ಎರಡು ಪಕ್ಷದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಾನ್ವಿ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಶಾಮ ಸುಂದರ ನಾಯಕ ಅವರಿಗೆ ಟಿಕೆಟ್ ನೀಡಿದೆ ಇದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಹಾಲಿ ಶಾಸಕರಾದ ರಾಜ ವೆಂಕಟಪ್ಪ ನಾಯಕ ಅವರಿಗೆ ಸ್ವಲ್ಪ ಹೊಡೆತ ಬೀಳಲಿದೆ, ಆದರೆ ರಾಷ್ಟ್ರಿಯ ಪಕ್ಷಗಳಲ್ಲಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ನೋಡಿದರೆ ಮತ್ತೊಮ್ಮೆ ಜೆಡಿಎಸ್ ಪಕ್ಷ ಗೆಲವು ಸಾಧಿಸಬಹುದು ಎನ್ನುವ ಲೆಕ್ಕಾಚಾರ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಬಿ ವಿ ನಾಯಕ ರಿಗೆ ನೀಡಿದ್ದಾರೆ ಎನ್ನುವ ಗುಮಾನಿ ಎದ್ದಿರುವ ಬೆನ್ನಲ್ಲೇ ಮಾಜಿ ಶಾಸಕರಾದ ಹಂಪಯ್ಯ ನಾಯಕ್ ಹಾಗೂ ಶರಣಯ್ಯ, ರಾಜವಸಂತ ನಾಯಕ್ ಇನ್ನಿತರ ಕಾಂಗ್ರೆಸ್ ಮುಖಂಡರು ತಲೆಬಿಸಿ ಮಾಡಿಕೊಂಡಿದ್ದಾರೆ,ಕಾಂಗ್ರೆಸ್ ಪಕ್ಷ ಬಿವಿ ನಾಯಕ್ ರಿಗೆ ಟಿಕೆಟ್ ಘೋಷಣೆ ಮಾಡಿದರೆ ಅವರು ಟಿಕೆಟ್ ನೀಡುವ ಪಕ್ಷಕ್ಕೆ ಹೋಗುವ ಮಾತು ಕೇಳಿಬರುತ್ತಿದೆ.
ಬಿಜೆಪಿ ಪಕ್ಷದಲ್ಲಿ ಸರಿಯಾದ ಅಭ್ಯರ್ಥಿಯಿಲ್ಲದೆ ಮೂಲೆ ಗುಂಪಾಗಿದ್ದರು ತನ್ನದೇ ಆದ ಓಟ್ ಬ್ಯಾಂಕ್ ಹೊಂದಿದ್ದರು ಪಕ್ಷಕ್ಕೆ ಸರಿಯಾದ ಅಭ್ಯರ್ಥಿ ಸಿಕ್ಕರೆ ಬಿಜೆಪಿ ಪಕ್ಷ ಮಾನ್ವಿ ಕ್ಷೇತ್ರದಲ್ಲಿ ಜಯ ಕಾಣುತ್ತದೆ, ಹಳೆ ಮುಖಗಳಿಗೆ ಟಿಕೆಟ್ ಸಿಕ್ಕರೆ ಸೋಲುವುದು ಖಂಡಿತ,ಬಿಜೆಪಿ ಟಿಕೆಟ್ ಯಾರಿಗೆ ನೀಡುತ್ತದೆ ಎನ್ನುವ ಕುತೂಹಲ ಮೂಡಿದೆ, ಬಿಜೆಪಿ ಪಕ್ಷದಲ್ಲಿ ಮಾಜಿ ಶಾಸಕ ಗಂಗಾಧರ್ ನಾಯಕ್,ಮಾನಪ್ಪ ನಾಯಕ, ಇಬ್ಬರು ಮಹಿಳಾ ಅಭ್ಯರ್ಥಿಗಳು ಬಿಜೆಪಿ ಪಕ್ಷದ ಟಿಕೆಟ್ ತರಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ,

ಬಾಕ್ಸ್
ಎನ್ ಎಸ್ ಬೋಸರಾಜ್ ಸೈಡ್ ಲೈನ್
ಮಾನ್ವಿ ಕ್ಷೇತ್ರ ಕಾಂಗ್ರೆಸ್ ಭದ್ರಬುನಾದಿ,ಕಾಂಗ್ರೆಸ್ ಪಕ್ಷದಲ್ಲಿ ಎಲ್ಲದಕ್ಕೂ ಕಿಂಗ್ ಪಿನ್ ಎನ್ ಎಸ್ ಬೋಸರಾಜ್, ಅವರು ತಮ್ಮದೇ ಆದ ಅಭಿಮಾನಿಗಳ ಬಲ ಹೊಂದಿದ್ದಾರೆ, ಇದುವರಿಗೂ ಕಾಂಗ್ರೆಸ್ ಪಕ್ಷದಲ್ಲಿ ಅವರ ಮಾತು ಅಂತಿಮವಾಗಿತ್ತು ಆದರೆ ಈ ಬಾರಿ ವಾತಾವರಣ ಬದಲಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ, ಟಿಕೆಟ್ ವಿಚಾರದಲ್ಲಿ ಈಗಾಗಲೇ ಹಲವಾರು ಗುಪ್ತ ಸಭೆಗಳು ಏರ್ಪಡಿಸಿ ಚರ್ಚೆಗಳಾಗಿವೆ.ಒಂದು ವೇಳೆ ಸ್ಥಳೀಯರಿಗೆ ಬಿಟ್ಟು (ವಲಸಿಗರಿಗೆ) ಬಿ ವಿ ನಾಯಕ್ ಅವರಿಗೆ ಟಿಕೆಟ್ ನೀಡಿದರೆ ಎನ್ ಎಸ್ ಬೋಸರಾಜ ಅವರ ಸಪೋರ್ಟ್ ಅವರ ಕಡೆಗೆ ಇದೆ ಎನ್ನಬಹುದು ಹಾಗಾದರೆ ಕ್ಷೇತ್ರದಲ್ಲಿ ಎನ್ ಎಸ್ ಬೋಸರಾಜ್ ಸೈಡ್ ಲೈನ್ ಆಗ್ತಾರೆ ಅವರ ಅಸ್ತಿತ್ವ ಕಳೆದುಕೊಳ್ಳುತ್ತಾರೆ,ಇವರ ಹಿಡಿತದಲ್ಲಿರುವ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ಮುಖಂಡರು ಬಿಜೆಪಿ ಪಕ್ಷಕ್ಕೆ ಹೋಗುವುದು ಗ್ಯಾರಂಟಿಯಾಗಿದೆ,ಇನೊಂದು ಕಡೆಗೆ ಕಾಂಗ್ರೆಸ್ ಮುಖಂಡರಾದ ಎಂ.ಈರಣ್ಣ ನವರ ಸೊಸೆ ಡಾ. ತನುಶ್ರೀ ಕೂಡ ಸ್ಪರ್ಧೆ ಮಾಡುವುದರಿಂದ ಮೂಲ ಕಾಂಗ್ರೆಸ್ ಮತಗಳಲ್ಲಿ ಒಡಕ್ಕಾಗಿರುವ ಕಹಿ ನೆನಪು ಹಿಂದಿನ ಚುನಾವಣೆಯಲ್ಲಿ ನಡೆದಿದೆ, ಈ ಬಾರಿಯೂ ಡಾ. ತನುಶ್ರೀ ಅವರು ಸ್ಪರ್ಧೆ ಮಾಡುವದರಿಂದ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಸೋಲುವುದು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.
ಹಗ್ಗಜಗ್ಗಾಟದಲ್ಲಿ ಯಾರಿಗೆ ಲಾಭ ?ಯಾರಿಗೆ ನಷ್ಟವಾಗಲಿದೆ ಎಂದು ಕ್ಷೇತ್ರದ ಜನ ತೀರ್ಮಾನ ಮಾಡಲಿದ್ದಾರೆ.

ಬಾಕ್ಸ್
ಬಿಜೆಪಿಗೆ ಪ್ಲಸ್ ಪಾಯಿಂಟ್
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಿಗೆ ಬಿಜೆಪಿ ಗಾಳ ಹಾಕಿದ್ದು ಅವರು ಬಲೆಗೆ ಬಿದ್ದರೆ ಬಿಜೆಪಿ ಪಕ್ಷ ಮಾನ್ವಿ ಕ್ಷೇತ್ರದಲ್ಲಿ ಸದೃಢವಾಗಲಿದೆ,ಬಿಜೆಪಿ ಪಕ್ಷದ ಟಿಕೆಟ್ ಹಂಪಯ್ಯ ನಾಯಕ್ ಅವರಿಗೆ ನೀಡುತ್ತೇವೆ ನೀವೂ ಬಿಜೆಪಿಕ್ಕೆ ಬನ್ನಿ ಎಂದು ಬುಲಾವ್ ಬಂದಿದೆ ಎನ್ನಲ್ಲಾಗಿದೆ ಇದೆ ಸತ್ಯವಾದರೆ ಖಂಡಿತ ಬಿಜೆಪಿ ಪಕ್ಷಕ್ಕೆ ಬಲ ಬರುತ್ತದೆ,
ಜೆಡಿಎಸ್ ಪಕ್ಷದ ಗೆಲುವಿಗೆ ಕಬ್ಬಿಣದ ಕಡಲೆಯಾಗಿರುವುದು- ಹಾಲಿ ಶಾಸಕರ ಸಹೋದರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶಾಮ ಸುಂದರ್ ನಾಯಕ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ ಆದ್ದರಿಂದ ಜೆಡಿಎಸ್ ಪಕ್ಷದ ಮೇಲೆ ನೆರವಾಗಿ ಹೊಡೆತ ಬೀಳಲಿದೆ ಇದರಿಂದ ಜೆಡಿಎಸ್ ಗೆಲುವಿಗೆ ಬ್ರೇಕ್ ಹಾಕುತ್ತಾರೆ ಎನ್ನಲಾಗಿದೆ.
ಹಾಲಿ ಶಾಸಕರ ವಿರೋಧ ಈಗಾಗಲೇ ಅವರದೇ ಪಕ್ಷದ ಕೆಲವು ಕಾರ್ಯಕರ್ತರಲ್ಲಿ ಒಡಕು ಮೂಡಿದೆ, ಸ್ಥಳೀಯರಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ರಸ್ತೆ ಇನ್ನಿತರ ಗುತ್ತಿಗೆ ಕಾರ್ಯಗಳು ನೀಡಿಲ್ಲ ಹಾಗೂ ಸರಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಆರೋಪವಾಗಿದೆ ಇದರಿಂದ ಯಾವ ಪಕ್ಷ ಮುನ್ನಡೆಯಲ್ಲಿ ಇರುತ್ತದೆ ಅಂತಹ ಪಕ್ಷಕ್ಕೆ ಹಲವು ಕಾರ್ಯಕರ್ತರು ಜಂಪ್ ಆಗುವುದು ಗ್ಯಾರಂಟಿ ಎನ್ನಲ್ಲಾಗಿದೆ,ಎಲ್ಲವೂ ಜೆಡಿಎಸ್ ಪಕ್ಷದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ..
ಬಿಜೆಪಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೇಲೆ ಅನೇಕ ಜೆಡಿಎಸ್ ಕಾರ್ಯಕರ್ತರ ನಿರ್ಧಾರವಿದೆ ಎಂದು ಕ್ಷೇತ್ರದಲ್ಲಿ ಸುದ್ದಿ ಹರಡಿದೆ.

ಬಾಕ್ಸ್
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಪ್ರಭಾವಿ ಮುಖಂಡರ ಜೊತೆಗೆ ನಿಕಟ ಸಂಬಂಧ ಹೊಂದಿರುವ ಎಂ ಈರಣ್ಣ ಅವರು ಸೊಸೆ ಡಾ. ತನುಶ್ರೀ ಅವರಿಗೆ ಎರಡು ಪಕ್ಷದ ಟಿಕೆಟ್ ಕೊಡಿಸುವ ಸಲುವಾಗಿ ತೀವ್ರ ಪೈಪೋಟಿ ಮಾಡುತ್ತಿದ್ದಾರೆ, ಎರಡರಲ್ಲಿ ಯಾವುದೇ ಪಕ್ಷದ ಟಿಕೆಟ್ ಸಿಕ್ಕರೂ ಅವರಿಗೆ ಗೆಲುವು ಸಿಗಲಿದೆ, ಒಂದು ವೇಳೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಹೋದರೆ ಸೋಲಬಹುದು, ಹಾಗೂ ಕಾಂಗ್ರೆಸ್ ಪಕ್ಷಕ್ಕೂ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎಂದು ಅಂದಾಜು ಮಾಡಲಾಗುತ್ತಿದೆ.