ಸಿರವಾರ,ಏ.೧೧- ಕಾಂಗ್ರೆಸ್ ಭದ್ರಕೊಟೆ ಎಂದು ಬಿಂಬಿತವಾಗಿದ ಮಾನ್ವಿ ಕ್ಷೇತ್ರದಲ್ಲಿ ೨೦೧೮ ರ ಚುನಾವಣೆಯಲ್ಲಿ ಅಧಿಕ ಮತಗಳನ್ನು ನೀಡಿ ಹೇಗೆ ಗೆಲುವು ಸಾದಿಸಿದೆವೋ ಅದೇ ರೀತಿ ಈ ಚುನಾವಣೆಯಲ್ಲಿ ಸಹ ಗೆಲುವಂತೆ ಎಲ್ಲಾರೂ ಕಾರ್ಯನಿರ್ವಹಿಸಬೇಕು ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಹೀರಾ ಗ್ರಾಮದ ಗ್ರಾ.ಪಂ ಮಾಜಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷದ ಶಾಲು ಹಾಕುವ ಮೂಲಕ ಸ್ವಾಗತಿಸಿ ಮಾತನಾಡಿದ ಅವರು ನಾನು ಶಾಸಕರೆಂಬ ಹಮ್ಮು ಗಿಮ್ಮು ಇಲ್ಲದೆ ಸರಳವಾಗಿ ನಿಮ್ನೊಂದಿಗೆ ಬೆರೆತು, ನಿಮ್ಮ ಕಷ್ಟ ದುಃಖದಲ್ಲಿ ಜೊತೆಗಿರುವೆ ೫ ವರ್ಷದ ಆಡಳಿತದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿರುವೆ. ನಮ್ಮ ನಾಯಕರು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಜಾರಿಗೆ ತರಲು ಉದೇಶಿಸಿರುವ ಪಂಚರತ್ನ ಯೋಜನೆಗಳನ್ನು ಮತದಾರರಿಗೆ ತಿಳಿಸಿ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಅಭ್ಯರ್ಥಿ(ನನ್ನ) ಗೆಲುವಿಗೆ ಶ್ರಮಿಸಿ ಎಂದರು.
ಹೀರಾ ಗ್ರಾ.ಪಂ ಮಾಜಿ ಸದಸ್ಯ ಭೀಮನಗೌಡ ಪೊ.ಪಾ, ಅಮರೇಶ ನಾಯಕ, ಮುದುಕಪ್ಪ ಛಲವಾದಿ,ಸಣ್ಣಬಸವರಾಜ ಗುಳಗಿನ,ಬಸವರಾಜ ಕರೆಗುಡ್ಡ, ಆದೇಪ್ಪ ಕಲ್ಲಂಗೇರಾ,ಕನಕಪ್ಪಗೌಡ,ವೆಂಕಟೇಶ ಯಾದವ್, ಖಾಜಾಸಾಬ ಹೊಸ್ಮನೆ , ಹನುಮಂತ್ರಾಯ,ಶಿವರಾಜ ಮ್ಯಾಗಳಮನೆ ಸೇರಿದಂತೆ ಇನೂ ೫೦ ಕ್ಕೂ ಅಧಿಕ ಜನರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ತಾಲೂಕ ಅದ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ, ಈಶಪ್ಪಹೂಗಾರ, ಕಾಶಿನಾಥ ಸರೋದೆ, ಚಂದ್ರಶೇಖರಯ್ಯಸ್ವಾಮಿ, ನಾಗರಾಜ ಭೊಗಾವತಿ, ರವಿಕುಮಾರ, ಸೂಗುರಯ್ಯಸ್ವಾಮಿ, ದಾನಪ್ಪ, ವಲಿಸಾಬ್, ಸತ್ತರಸಾಬ್, ಷರಿಪ್, ಶಾಂತಪ್ಪಪಿತಗಲ್ ಸೇರಿದಂತೆ ಇನ್ನಿತರರು ಇದ್ದರು.