ಮಾನ್ವಿ ಕ್ಷೇತ್ರಕ್ಕೆ ವೈ.ಶರಣಪ್ಪ ನಾಯಕ ಅರ್ಜಿ ಸಲ್ಲಿಕೆ

ಸಿರವಾರ.ನ.೧೫- ಮುಂಬರುವ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಇಚ್ಚಿಸಿರುವ ಅಭ್ಯರ್ಥಿಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅರ್ಜಿ ಆಹ್ವಾನ ಮಾಡಿರುವ ಹಿನ್ನೆಲೆಯಲ್ಲಿ ಮಾನ್ವಿ ವಿಧಾನಸಭಾ ಎಸ್.ಟಿ. ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಯುವ ಮುಖಂಡ ವೈ.ಶರಣಪ್ಪ ನಾಯಕ ಕೆ.ಗುಡದಿನ್ನಿ ಅವರು, ಎಐಸಿಸಿ ಪ್ರ.ಕಾರ್ಯದರ್ಶಿ ವೆನ್.ಎಸ್.ಬೋಸರಾಜು,ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೃಷ್ಣ ಬೈರೆಗೌಡ ಹಾಗೂ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ ಕೆಪಿಸಿಸಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ನರಸಿಂಹ ನಾಯಕ ಕರಡಿಗುಡ್ಡ, ತಾ. ಪಂ ಮಾಜಿ ಸದಸ್ಯ ದೇವೇಂದ್ರಪ್ಪ ಸಾಹುಕಾರ್ ಬೊಮ್ಮನಳ, ದೇವಣ್ಣ ನವಲಕಲ್ ಇನ್ನಿತರರು ಉಪಸ್ಥಿತರಿದ್ದರು.