
ಆಕಾಂಕ್ಷಿ- ಕಾರ್ಯಕರ್ತರು ತಾಳ್ಮೆಗೆ ಕೊನೆ ಏಂದು?
ಹನುಮೇಶ ಛಲವಾದಿ
ಸಿರವಾರ,ಏ.೧೨- ೨೦೨೩ ರ ಚುನಾವಣೆ ನಾಮಪತ್ರ ಸಲ್ಲಿಕೆಯು ನಾಳೆಯಿಂದ ಪ್ರಾರಂಭವಾಗುತ್ತಿದ್ದೂ, ಮಾನ್ವಿ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ – ಬಿಜೆಪಿ ಅಭ್ಯರ್ಥಿ ಆಯ್ಕೆಯು ಕಗ್ಗಂಟಾಗಿರುವುದರಿಂದ ಆಕಾಂಕ್ಷಿ ಹಾಗೂ ಕಾರ್ಯಕರ್ತರು ತಾಳ್ಮೆ ಕೆಡಿಸುತ್ತಿದ್ದರೆ, ಹಾಲಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರಿಗೆ ಈಗಾಗಲೇ ಜೆಡಿಎಸ್‌ನಿಂದ ಟಿಕೆಟ್ ಘೋಷಣೆಯಾಗಿರುವದರಿಂದ ಯಾವುದೇ ಗೊಂದಲವಿಲ್ಲದೆ ಆನೆ ನಡೆದಿದ್ದೆ ದಾರಿ ಎಂಬಂತೆ ನಿರಾತಂಕವಾಗಿ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ.
ಬಿಜೆಪಿಯಿಂದ ನಿನ್ನೆ ರಾತ್ರಿ ೧೮೯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರದಲ್ಲಿ ೬ ಘೋಷಣೆ ಮಾಡಲಾಗಿದ್ದೂ, ಮಾನ್ವಿ ಕ್ಷೇತ್ರವನ್ನು ಮಾತ್ರ ಘೋಷಣೆ ಮಾಡದೆ ತಡೆ ಹಿಡಿಯುವದನ್ನು ಗಮನಸಿದರೆ ಕ್ಷೇತ್ರದಲ್ಲಿ ಅಂತಹ ಸಾಮರ್ಥ್ಯದ ನಾಯಕರು ಇಲ್ಲವೆ ಎಂದು ಜನರು ಮಾತನಾಡಿಕೊಳುತ್ತಿದ್ದಾರೆ. ಮಾಜಿ ಶಾಸಕ ಗಂಗಾಧರ ನಾಯಕ ಈ ಬಾರಿ ನನಗೆ ಟಿಕೆಟ್ ನೀಡುವಂತೆ ರಾಜ್ಯ- ರಾಷ್ಟ್ರೀಯ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಬಾರಿ ಏಕಾಏಕಿ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸುವಷ್ಟರಲ್ಲಿ ಬಿ.ಪಾರಂ ರದ್ದಾಗಿ ಶರಣಯ್ಯ ನಾಯಕ ಗುಡದಿನ್ನಿ ಪಾಲಾಗಿದರೂ ಕ್ಷೇತ್ರದಲ್ಲಿಯೇ ಇದು ಜಾತ್ರೆ, ಸಾಮೂಹಿಕ ವಿವಾಹ, ವಿವಿಧ ಕ್ರೀಡಾಕೂಟಗಳಿಗೆ ಆರ್ಥಿಕ ನೇರವು ನೀಡುವ ಮೂಲಕ ಕ್ಷೇತ್ರದಲ್ಲಿ ತನ್ನದೇ ಆದ ಪಡೆಯನ್ನು ರಚಿಸಿರುವ ಮಾನಪ್ಪ ನಾಯಕ, ಅಯ್ಯಪ್ಪ ಮ್ಯಾಕಲ್, ಹೊಸ ಹೆಸರು ಸುಜಾತ ಪಾಟೀಲ್, ಬಳ್ಳಾರಿಯಿಂದ ಬೇರೆ ಕಡೆಯಿಂದ ಹೊಸಮುಖ ಆಕಾಂಕ್ಷಿಯಾಗಿದ್ದಾರೆ.ಮಾಜಿ ಶಾಸಕ ಜಿ.ಹಂಪಯ್ಯನಾಯಕ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತವಾದರೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆಂಬ ಗುಸುಗುಸು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಇಲ್ಲಿಯವರೆಗೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಷೇತ್ರದಲ್ಲಿ ಗೆದ್ದಿಲ್ಲ, ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತಗಳು ಬಂದಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಅಧಿಕ ಮತಗಳು ಪಕ್ಷದ ಅಭ್ಯರ್ಥಿಗೆ ಬರುತ್ತವೆ. ಅಭ್ಯರ್ಥಿ ಯಾರೇ ಆದರೂ ೩೦ ಸಾವಿರಕ್ಕಿಂತಲೂ ಅಧಿಕ ಮತಗಳು ಪಕ್ಷದ ಮತಗಳು ಇವೇ ಎಂಬುದು ಮುಖಂಡರ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಕಾಂಗ್ರೆಸ್‌ನಿಂದ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಜಿ.ಹಂಪಯ್ಯನಾಯಕ, ಶರಣಯ್ಯನಾಯಕ ಗುಡದಿನ್ನಿ, ಲಕ್ಷ್ಮೀದೇವಿ ನಾಯಕ, ರಾಜಾ ವಸಂತ ನಾಯಕ, ಡಾ.ತನುಶ್ರೀ ಸೇರಿ ೬ ಜನ ಆಕಾಂಕ್ಷಿಗಳಾಗಿದ್ದಾರೆ. ಹೊರಗಿನವರಾದ ಬಿ.ವಿ.ನಾಯಕರಿಗೆ ಬೇಡ ಕ್ಷೇತ್ರದವರಿಗೆ ಟಿಕೆಟ್ ನೀಡುವಂತೆ ಕ್ಷೇತ್ರದಲ್ಲಿ ಸಭೆಗಳನ್ನು ಆಯೋಜನೆ ಮಾಡುವ ಮೂಲಕ ಒತ್ತಾಯಿಸುತ್ತಿದ್ದಾರೆ.
ತನುಶ್ರೀಯವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಡೌಟ್, ೪ ಜನರಲ್ಲಿಯೇ ಒಬ್ಬರಿಗೆ ಟಿಕೆಟ್ ಕೊಡುತ್ತಾರೋ, ಏನಾದರೂ ಆಗಲಿ ಎಂದು ಬಿ.ವಿ ನಾಯಕರೆ ಸ್ಪರ್ಧೆ ಮಾಡುತ್ತಾರೊ ಎಂಬ ಗೊಂದಲಕ್ಕೆ ಕೆಲವು ದಿನಗಳಲ್ಲಿಯೇ ತೆರೆ ಬೀಳುತ್ತದೆ. ೧-೨ ಪಟ್ಟಿಯ ಟಿಕೆಟ್ ಘೋಷಣೆ ಪೂರ್ವದಲ್ಲಿ ನಾನು ಅಭ್ಯರ್ಥಿಯಾಗುತ್ತೆನೆಂದು ನಾಯಕರು ಕಾಂಗ್ರೇಸ್‌ನ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡಿ ಮತದಾರರನ್ನು ಸೇಳೆಯುತ್ತಿದ್ದರು. ಎರಡು ಪಟ್ಟಿಯಲ್ಲಿ ಯಾರನ್ನೂ ಘೋಷಣೆ ಮಾಡದೆ ಇರುವದರಿಂದ ಆದರೂ ದೃತ್ತಿಗೆಡ್ಡದೆ ಕ್ಷೇತ್ರದಲ್ಲಿ ಜರುಗುವ ಶುಭ ಕಾರ್ಯಗಳಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ಎಎಪಿ ಪಕ್ಷ ಸ್ಪರ್ದೇ ಮಾಡುತ್ತಿದ್ದೂ, ಮಾನ್ವಿ ಕ್ಷೇತ್ರಕ್ಕೆ ರಾಜಾ ಶ್ಯಾಮಸುಂದರ ನಾಯಕ ಅಭ್ಯರ್ಥಿಯಾಗಿದ್ದಾರೆ.
ಇನ್ನೂ ಜೆಡಿಎಸ್ ವಿಚಾರಕ್ಕೆ ಬಂದರೆ ಕಳೆದ ಮೂರು ಚುನಾವಣೆಯಲ್ಲಿ ಅಭ್ಯರ್ಥಿಯಾಗಿ, ೨೦೧೮ ರ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿ ಜೆಡಿಎಸ್ ವಶಕ್ಕೆ ಪಡೆದ ರಾಜಾ ವೆಂಕಟಪ್ಪ ನಾಯಕ ರೆ ೨೦೨೩ ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವದರಿಂದ ಈಗಾಗಲೇ ಕ್ಷೇತ್ರದ ಬಹುತೇಕ ಕಡೆ ತೆರಳಿ ಎರಡು ಬಾರಿ ಸೋತರೂ ಛಲ ಬಿಡದೆ ೨೦೧೮ ರಲ್ಲಿ ಸ್ಪರ್ದೇ ಮಾಡಿದಾಗ ಅಧಿಕ ಮತಗಳ ಅಂತರದಿಂದ ಗೆಲಿಸಿದಿರಿ, ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದ ಅಭ್ಯರ್ಥಿ ಮರು ಆಯ್ಕೆಯಾದಂತಹ ಉದಾಹರಣೆ ಇದೇ ನನಗೂ ಸಹ ಆಶೀರ್ವಾದ ಮಾಡಿ ಮರು ಆಯ್ಕೆ ಮಾಡಿ.
ನಮ್ಮದೇ ಪಕ್ಷದ ಸರ್ಕಾರ ಇಲ್ಲದೆ ಇದ್ದರೂ ಆದಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವೆ ಅವುಗಳನ್ನು, ಹಾಗೂ ಪಂಚರತ್ನ ಯೋಜನೆಯ ಬಗ್ಗೆ ತಿಳಿಸುತ್ತಾ, ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಜಾತ್ರೆ, ಮದುವೆ, ಸಾಮೂಹಿಕ ವಿವಾಹ, ಇಪ್ತಿಯಾರ ಕೂಟಗಳಲ್ಲಿ ಭಾಗವಹಿಸುವ ಮೂಲಕ ಮತದಾರರಿಗೆ ಹತ್ತಿರವಾಗುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿ ಘೋಷಣೆ ಮಾಡದೆ ಇರುವದರಿಂದ ಮುಖಂಡರು ಕಾರ್ಯಕರ್ತರುಗೊಂದಲ ಉಂಟಾಗಿದ್ದೂ ಶೀಘ್ರ ಘೋಷಣೆ ಮಾಡಿ ತೆರೆ ಎಳೆಯಬೇಕಾಗಿದೆ.