ಮಾನ್ವಿ ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ

ಮಾನ್ವಿ,ಮಾ.೩೦- ಪಟ್ಟಣದ ಶಾರದಾ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದಿ. ರಾಜಾ ಅಂಬಣ್ಣ ನಾಯಕ, ದಿ. ಆರ್ ವೆಂಕಮ್ಮ, ದಿ. ಬಾಶುಮಿಯ್ಯಾ ಸಾಹುಕಾರ, ದಿ. ಅಮರಗುಂಡಯ್ಯ ಹಿರೇಮಠ ಇವರುಗಳ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ನಂತರ ಕಾರ್ಯಕ್ರಮ ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಪ್ರಾಚಾರ್ಯ ತಿಮ್ಮಯ್ಯ ಶೆಟ್ಟಿ ಇಲ್ಲೂರು ಕನ್ನಡ ಬೆಳೆದು ಬಂದಿರುವ ಹಾದಿ ಹಾಗೂ ನಾವು ಉಳಿಸಿಕೊಂಡು ಹೋಗುವ ಅನಿವಾರ್ಯದ ಕುರಿತು ಮಾಹಿತಿ ನೀಡಿದರು ನಂತರ ಉಪನ್ಯಾಸಕರಾದ ರವಿಶರ್ಮ ಜಾನೇಕಲ್ ಮಾತಾನಾಡಿ ದೇಶದ ಪ್ರಗತಿಯಲ್ಲಿ ಯುವಕರ ಪಾತ್ರ, ವಿರೂಪಾಕ್ಷಯ್ಯ ಸ್ವಾಲಿಮಠ ಮಾತಾನಾಡಿ ಶಿಕ್ಷಣ ಮತ್ತು ಸ್ವಾತಂತ್ರ್ಯ, ಯಲ್ಲಪ್ಪ ಹಿರೇಬಾದರದಿನ್ನಿ ಮಾತಾನಾಡಿ ಕೋಮು ಸೌಹಾರ್ದತೆ, ಡಾ ಬಸವರಾಜ ಕರಡಿಗುಡ್ಡ ಮಾತಾನಾಡಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಹಿಂದುಳಿವಿಕೆಯ ಸಮಸ್ಯೆ ಮತ್ತು ಪರಿಹಾರದ ಕುರಿತಾಗಿ ಉಪನ್ಯಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ ಕಿಶೋರಕುಮಾರ, ಕಸಾಪ ಅಧ್ಯಕ್ಷ ರವಿಕುಮಾರ ಪಾಟೀಲ, ಡಾ. ಬಿ. ಐಂದವಿ ಮಧುಸೂದನ್, ಬಸವರಾಜ ಕನ್ನಾರಿ, ಲಕ್ಷ್ಮಣ್ ಕಪಗಲ್, ಬಸವರಾಜ ಕಂಪ್ಯೂಟರ್, ಗುರುರಾಜ ಕುಲಕರ್ಣಿ, ಶಾಂತಯ್ಯ ಸ್ವಾಮಿ, ಸಂತೋಷ ಹೂಗಾರ, ಸೇರಿದಂತೆ ಶಿಕ್ಷಣ ಸಂಸ್ಥೆಯ ಡಿ ಎಡ್ ವಿದ್ಯಾರ್ಥಿಗಳು ಇದ್ದರು.