ಮಾನ್ವಿಯಲ್ಲಿ ವಿವಿಧ ಪಕ್ಷ, ಪಕ್ಷೇತರ ಸೇರಿ ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಮಾನ್ವಿ ಎ ೧೮ :- ಪರಿಶಿಷ್ಟ ಪಂಗಡ ಮೀಸಲಾತಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷೇತರ, ಅಭ್ಯರ್ಥಿಗಳು ಸೇರಿದಂತೆ ಒಟ್ಟು ೯ ನಾಮಪತ್ರವನ್ನು ಚುನಾವಣೆ ಅಧಿಕಾರಿ ಪ್ರಕಾಶ ಅವರಿಗೆ ನಾಮಪತ್ರ ಸಲ್ಲಿಸಲಾಗಿದೆ..
ಮಂಗಳವಾರದ ಅಂತ್ಯಕ್ಕೆ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಜೆ ಡಿ ಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ, ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಜಿ ಹಂಪಯ್ಯ ನಾಯಕ, ಬಿಜೆಪಿಯಿಂದ ಒಟ್ಟು ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು ಮಾಜಿ ಶಾಸಕ ಗಂಗಾಧರ ನಾಯಕ, ಮಾನಪ್ಪ ನಾಯಕ, ಕೋಟ್ರೇಶಪ್ಪ ಕೋರಿ, ಕೆ ಆರ್ ಎಸ್ ಪಕ್ಷದಿಂದ ಬಸವಪ್ರಭು ಮಾನ್ವಿ, ಬಿಎಸ್ ಪಿ ಯಿಂದ ಮುದುಕಪ್ಪ ನಾಯಕ, ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಡಾ ತನುಶ್ರೀ ಎಂ ಪ್ರವೀಣಕುಮಾರ ( ಎಂ ಈರಣ್ಣ ) ವಿಶೇಷ ಎಂದರೆ ಇವರು ಕಳೆದ ಚುನಾವಣೆ ದ್ವೀತಿಯ ಸ್ಥಾನವನ್ನು ಪಡೆದಿದ್ದರು, ನಂತರ ಮಾಜಿ ಶಾಸಕ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಹಂಪಯ್ಯ ನಾಯಕ ಸುಪುತ್ರ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಗಂಗಣ್ಣ ಸಾಹುಕಾರ ನಾಮಪತ್ರ ಸಲ್ಲಿಸುವುದರ ಮೂಲಕ ತಂದೆಯ ವಿರುದ್ಧ ಸ್ಪರ್ಧೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ..
ಪೋಲಿಸ್ ಬಿಗಿ ಬಂದೋಬಸ್ತಿನಲ್ಲಿ ನಾಮಪತ್ರ ಸಲ್ಲಿಸಲಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದ ಮಾತುಗಳನ್ನು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಹೇಳುತ್ತಿದ್ದಾರೆ..