ಮಾನ್ವಿಯಲ್ಲಿ ಬಿಜೆಪಿ ಜಿಲ್ಲಾಮೋರ್ಚ್ ರೈತ ಸಮಾವೇಶ

ಮಾನ್ವಿ,ಏ.೦೩- ಜಿಲ್ಲೆಯ ಕ್ಷೇತ್ರದಲ್ಲಿ ವಿವಿಧ ಬಿಜೆಪಿ ಮೋರ್ಚ್ ಸಮಾವೇಶದಂತೆ ತಾಲೂಕಿನಲ್ಲಿ ಬಿಜೆಪಿ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಯ ಉದ್ದೇಶದಿಂದ ರೈತರಿಗೆ ಅನುಕೂಲ ಆಗುವ ವಿಷಯ ಮಂಡನೆಯ ಉದ್ದೇಶದಿಂದ ಇದೇ ಎಪ್ರಿಲ್ ೦೫ ರಂದು ಜಿಲ್ಲಾ ಮಟ್ಟದ ಬಿಜೆಪಿ ರೈತ ಮೋರ್ಚ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮೋರ್ಚ್ ಅಧ್ಯಕ್ಷ ಎಂ ಸಿದ್ದನಗೌಡ ನೆಲಹಾಳ ಹೇಳಿದರು..
ಪಟ್ಟಣದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಈ ಸಮಾವೇಶವನ್ನು ಚುನಾವಣೆ ನೀತಿ ಸಂಹಿತೆ ಬರುವ ಮುಂಚೆ ಮಾಡಬೇಕಾಗಿತ್ತು ಆದರೆ ಅನ್ಯ ಕಾರಣದಿಂದ ತಡವಾಯ್ತು ಆದರೂ ಕೂಡ ಚುನಾವಣೆ ನೀತಿ ಸಂಹಿತೆಯ ಅನ್ವಯದಂತೆ ಪಾಲಿಸಿ ಕಾರ್ಯಕ್ರಮವನ್ನು ಎಪ್ರಿಲ್ ೦೫ ಪಟ್ಟಣದ ಧ್ಯಾನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ಬೈರತಿ ಬಸವರಾಜ ಹಾಗೂ ಮಾಲೀಕಯ್ಯ ಗುತ್ತೆದಾರ ಸೇರಿದಂತೆ ಅನೇಕ ಬಿಜೆಪಿ ಪಕ್ಷದ ಗಣ್ಯರು, ಕೃಷಿಗೆ ಸಂಬಂಧಿಸಿದ ತಜ್ಞರು ಹಾಗೂ ರೈತ ಮೋರ್ಚ್ ಪದಾಧಿಕಾರಿಗಳು ಸೇರಿದಂತೆ ಮಹಿಳೆಯರು ಭಾಗವಹಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಮಲ್ಲಿಕಾರ್ಜುನ ಸಂಗಪೂರು, ತಿಮ್ಮರಡ್ಡಿ ಬೋಗವತಿ, ಉಮೇಶ ಸಜ್ಜನ್, ಮಹಾದೇವಪ್ಪ ಗೌಡ, ಉದಯಕುಮಾರ್,ರಂಗಪ್ಪ, ಮಲ್ಲಾಜಮ್ಮ ,ಲಕ್ಷ್ಮೀದೇವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.