ಮಾನ್ವಿಯಲ್ಲಿ ಬಿಜೆಪಿಯಿಂದ ಸಂಕಲ್ಪ ಯಾತ್ರೆಗೆ ಚಾಲನೆ

ಮಾನ್ವಿ.ಜ.೨೧- ರಾಯಚೂರು ಜಿಲ್ಲೆಯ ಬಿಜೆಪಿ ಕಾರ್ಯಕರ್ತರನ್ನ ಒಗ್ಗೂಡಿಸಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಕೇಂದ್ರ ಸರ್ಕಾರದ ಆದೇಶದಂತೆ ನಾವುಗಳು ಕೆಲಸ ಮಾಡುತ್ತಿದ್ದು ಎಲ್ಲರೂ ಒಗ್ಗೂಡಿಸಿ ಕೆಲಸ ಮಾಡಬೇಕಾಗುತ್ತದೆ ಎಂದು ಮಾಜಿ ಶಾಸಕ ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ ಹೇಳಿದರು..
ಪಟ್ಟಣದ ಮಲ್ಲಿಕಾರ್ಜುನ ಪಾಟೀಲ ಅವರ ನಿವಾಸದಲ್ಲಿ ಸಭೆ ಮಾಡಿ ಮಾನವಿ ಕ್ಷೇತ್ರದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಕಾರ್ಯಗಳು, ಯೋಜನೆಗಳನ್ನ ಜನರಿಗೆ ತಲುಪಿಸುವ ಸೂಚನೆ ಕೂಡ ನೀಡಲಿದ್ದಾರೆ. ಇನ್ನೂ ಜನ ಸಂಪರ್ಕ ಸಭೆಗೆ ಜಿಲ್ಲೆಯ ನಾಯಕರು ಕೂಡ ಈಗಾಗಲೇ ಸಿದ್ದತೆ ನಡೆಸಿದ್ದಾರೆ ಎಂದರು..
ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡ ಮೋರ್ಚ್ ರಾಜ್ಯ ಅಧ್ಯಕ್ಷ ಮಾಜಿ ಶಾಸಕ ತಿಪ್ಪರಾಜ ಹವ್ದಾದರ್,ಮಾಜಿ ಶಾಸಕಕರಾದ ಗಂಗಾಧರ ನಾಯಕ,ಬಸನಗೌಡ ಬ್ಯಾಗವಾಟ, ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಗಿರೆಯ್ಯ ಪಾಟೀಲ, ನಕ್ಕುಂದಿ ಮಲ್ಲನಗೌಡ,ಉಮೇಶ ಸಜ್ಜನ್,
ತಿಮ್ಮರಡ್ಡಿ ಬೋಗವತಿ, ಗೋಪಲನಾಯಕ, ಕುಮಾರಸ್ವಾಮಿ, ಅಯ್ಯಪ್ಪ ಮ್ಯಾಕಲ್, ವಿರೇಶ ಬೆಟ್ಟದೂರು, ವೀರನಗೌಡ ವಕೀಲರ,
ಹನುಮಂತರಾಯ ವಕೀಲರು, ಶರಣಯ್ಯ ಸ್ವಾಮಿ,ದೊಡ್ಡಣ್ಣ ಹೂಗಾರ, ಹೂಗಾರ,ಗುರುಗೌಡ ಕಣ್ಣೂರು, ವೆಂಕಿಯಾದವ್, ವೆಂಕಟೇಶ ಕೆ..ಸೇರಿದಂತೆ ಅನೇಕರು ಇದ್ದರು.