ಮಾನ್ವಿಗೆ ಸೈನಿಕ ತುಕಡಿ ಆಗಮನ: ಸ್ಥಳೀಯ ಅದ್ದೂರಿ ಸ್ವಾಗತ

ಮಾನ್ವಿ,ಏ.೧೭- ಮೇ ೧೦ ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡ ವಿಧಾನಸಭಾ ಕ್ಷೇತ್ರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳ ಬಿಗಿಭದ್ರತೆಗಾಗಿ ನಿರಂಜನ ಸಹೋ ಅಧಿಕಾರಿಯ ನೇತೃತ್ವದಲ್ಲಿ ೭೦ ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರ ತುಕಡಿಯು ಇಂದು ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪೋಲಿಸ್ ಅಧಿಕಾರಿಳಾದ ಪಿ.ಐ ವೀರಭದ್ರಯ್ಯ ಸ್ವಾಮಿ ಹಿರೇಮಠ ಹಾಗೂ ಪಿಎಸ್‌ಐ ರುದ್ರಪ್ಪ ಸೇರಿದಂತೆ ಪೋಲಿಸರು ಸಿಹಿ ಹಂಚುವ ಮೂಲಕ ಕ್ಷೇತ್ರಕ್ಕೆ ಸ್ವಾಗತಿಸಿದರು.