ಮಾನ್ಯತೆ ನೀಡದಿದ್ದರೆ, ಎಂಪಿ ಚುನಾವಣೆ ಬಹಿಷ್ಕಾರ ಎಚ್ಚರಿಕೆ

ಶಹಾಬಾದ:ಜು.15:ಬ್ಲಾಕ್ ಕಾಂಗ್ರೆಸ್ ಪಕ್ಷದ ಬಗ್ಗೆ ಜಿಲ್ಲಾ, ರಾಜ್ಯ ಕಾಂಗ್ರೆಸ್ ಮುಖಂಡರು ಹಿಂದಿನಂತೆ ನಿರ್ಲಕ್ಷಿಸಿದ್ದರೆ, ಮುಂದಿನ ಲೋಕ ಸಭಾ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ಸಭೆಯಲ್ಲಿ ಸಂದೇಶ ರವಾನಿಸಿದರು.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಕರೆದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ವರಿಷ್ಠರು ಶಹಾಬಾದ್ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತ ಬಂದಿದ್ದು, ಪಕ್ಷಕ್ಕಾಗಿ ನಿಷ್ಠಾವಂತರಾಗಿ ದುಡಿದವರನ್ನು ವ್ಯವಸ್ಥಿತವಾಗಿ ಕಡೆಗಳಿಸಲಾಗುತ್ತದೆ. ದೇಶದಲ್ಲಿ ಚುನಾವಣೆ ಪ್ರಕ್ರಿಯೇ ಪ್ರಾರಂಭವಾದ ದಿನದಿಂದಲೂ ಪ್ರತಿ ಲೋಕ ಸಭಾ, ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಮತವನ್ನು ನೀಡಲಾಗಿದೆ.ಪ್ರತಿ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಸ್ಥಳೀಯರಲ್ಲದವರಿಗೆ ಅವಕಾಶ ನೀಡಿದ್ದರಿಂದ ಅವರು ಈ ಭಾಗಕ್ಕೆ, ಇಲ್ಲಿಯ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ ಧೋರಣೆಯನ್ನು ಅನುಸರಿಸಿದ್ದಾರೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರವಾದ ನಂತರ ಇಲ್ಲಿಯ ಚುನಾಯಿತಿ ಪ್ರತಿನಿಧಿಗಳು ಕಮಲಾಪುರ, ಮಹಾಗಾಂವ ದತ್ತ ಹೆಚ್ಚಿನ ಆಸಕ್ತಿ ತೋರಿಸುದ್ದಿದ್ದು, ಅಭಿವೃದ್ದಿ ವಿಷಯದಲ್ಲೂ ಈ ಭಾಗವನ್ನು ನಿರ್ಲಕ್ಷಸಲಾಗುತ್ತದೆ. ಅದರೆ, ಇಲ್ಲಿಯ 40,50 ವರ್ಷದಿಂದ ಪಕ್ಷಕ್ಕಾಗಿ ದುಡಿದ ಮುಖಂಡರನ್ನು, ಕಾರ್ಯಕರ್ತರನ್ನು ಕೇವಲ ನಗರ ಸಭೆಗೆ ಮಾತ್ರ ಸೀಮಿತಗೊಳಿಸಿದ್ದು, ಪಕ್ಷ ಅವರನ್ನು ರಾಜ್ಯ ಮಟ್ಟದಲ್ಲಿ ಯಾವುದೆ ಸ್ಥಾನ ಮಾನ, ನಿಗಮ ಮಂಡಳಿಯಲ್ಲಿ ಸ್ಥಾನ ಮಾನ ಕೊಡದೆ, ಕಡೆಗಣಿಸಲಾಗುತ್ತಿದೆ ಎಂದು ಕಾರ್ಯಕರ್ತರು ಪಕ್ಷದ ವರಿಷ್ಠರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾ ಮುಖಂಡರ ಬಳಿ ನಾವು ಹೋಗದೆ ಅವರನ್ನು ಇಲ್ಲಿಗೆ ಕರೆಸಿ, ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸೋಣೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಪಕ್ಷದ ವರಿಷ್ಠರು ಸುಮಾರು 40 ವರ್ಷದಿಂದ ಪಕ್ಷಕ್ಕಾಗಿ ದುಡಿದ ಡಾ. ಎಂ.ಎ.ರಶೀದ ಅವರನ್ನು ವಿಧಾನ ಪರಿಷತ್‍ಗೆ ನಾಮನಿರ್ಧೇಶನ ಮಾಡಬೇಕು ಹಾಗೂ ಸ್ಥಳೀಯವಾಗಿ ಪಕ್ಷದ ದುಡಿದವರನ್ನು ಗುರುತಿಸಿ, ವಿವಿಧ ನಿಗಮ ಮಂಡಳಿಗೆ ನೇಮಿಸಬೇಕು, ಕೆಪಿಸಿಸಿ ಸದಸ್ಯರನ್ನಾಗಿ ನೇಮಿಸಬೇಕೆಂದು ಆಗ್ರಹಿಸಲಾಯಿತು. ಈ ಕುರಿತು ಪಕ್ಷ ವರಿಷ್ಠರು ನಿರ್ಲಕ್ಷಿಸಿದ್ದಲ್ಲಿ ಮುಂಬರುವ ಲೋಕ ಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ತಟಸ್ಥರಾಗಿ, ಚುನಾವಣೆ ಬಹಿಷ್ಕರಿಸುವದಾಗಿ ಎಚ್ಚರಿಸಿದರು.

ಸಭೆಯಲ್ಲಿ ಪಕ್ಷದ ಉಪಾಧ್ಯಕ್ಷರಾದ ವಿಜಯಕುಮಾರ ಮುಟ್ಟತ್ತಿ, ಅಜೀತಕುಮಾರ ಪೊಲೀಸ್ ಪಾಟೀಲ, ಮಹ್ಮದ ಉಬೇದುಲ್ಲಾ, ಇನಾಯತ್ ಖಾನ್ ಜಮಾದಾರ, ನಾಗರಾಜ ಸಿಂಘೆ, ಮೃತ್ಯುಂಜಯ ಸ್ವಾಮಿ ಹಿರೇಮಠ, ಡಾ.ಅಹ್ಮದ ಪಟೇಲ, ಕುಮಾರ ಚವ್ಹಾಣ, ಬಾಕರೋದ್ದೀನ್ ಸೇಠ, ಜಹೀರ ಮಾತನಾಡಿದರು. ನಿಂಗಣ್ಣ ದೇವಕರ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಯಾಕೂಬ್ ಮರ್ಚಂಟ, ಸೂರ್ಯಕಾಂತ ಕೋಬಾಳ, ವಿಶ್ವರಾಧ್ಯ ಬಿರಾಳ, ಮಾಣಿಕಗೌಡ ಪಾಟೀಲ, ನಾಗೇಂದ್ರ ನಾಟೀಕಾರ, ದಿಲೀಪ ನಾಯಕ, ಕೃಷ್ಣಪ್ಪ ಕರಣಿಕ, ಶಂಕರ ಕೋಟನೂರ, ವಿಜಯ ರಾಠೋಡ, ನಾಗೇಂದ್ರ ಕರಣಿಕ, ಸಾಹೇಬಗೌಡ ಬೊಗುಂಡಿ, ಸಲೀಮಾ ಬೇಗಂ, ಸಾಬೇರಾ ಬೇಗಂ, ಲಕ್ಷ್ಮೀಬಾಯಿ ಕುಸಾಳೆ, ಅವಿನಾಶ ಕಂಬಾನೂರ, ಶಿವರಾಜ ಕೋರೆ, ಕಿರಣ ಕೋರೆ, ಶರಣು ಪಗಲಾಪೂರ, ಬಾಬಾ ಖಾನ, ಅನ್ವರ ಪಾಶಾ, ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.