ಮಾನ್ಯಖೇಟ ಕೋಟೆ ಉತ್ತರಾದಿ ಮಠಕ್ಕೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಬೇಟಿ

ಸೇಡಂ, ಜು,17: ರಾಷ್ಟ್ರಕೂಟರ ವೈಭವ ನಾಡು ಮಾನ್ಯಖೇಟ ಕೋಟೆ ಹಾಗೂ ಶ್ರೀ ಜಯತೀರ್ಥರ ಮೂಲವೃಂದಾವನ ಉತ್ತರಾದಿ ಮಠಕ್ಕೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಇಂದು ಬೆಳಗ್ಗೆ ಬೇಟಿ ನೀಡಿದರು.

ಈ ವೇಳೆಯಲ್ಲಿ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ತಾಲೂಕಾ ಕಸಾಪ ತಾಲೂಕಾಧ್ಯಕ್ಷೆ ಸುಮಾ ಎಸ್ ಚಿಮ್ಮನಚೋಡಕರ್,ಉತ್ತರಾದಿ ಮಠದ ವ್ಯವಸ್ಥಾಪಕ ವೇಂಕಣ್ಣಾಚಾರ ಪೂಜಾರ,ಮುಕುಂದ ದೇಶಪಾಂಡೆ, ಕಲ್ಯಾಣಪ್ಪ ಪಾಟೀಲ್, ತಾಲೂಕಾ ಕಸಾಪ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ತಾಲೂಕು ನೌಕರರ ಅಧ್ಯಕ್ಷ ಶಿವಶಂಕರಯ್ಯ ಸ್ವಾಮಿ ಮಠಪತಿ, ರಾಜಶೇಖರ್ ಪುರಾಣಿ, ಗುರುನಾಥ್ ತಳಕಿನ, ಬಸವರಾಜ ದೇಶಮುಖ, , ಸಾಹಿತಿಗಳಾದ ಮುಡಬಿ ಗುಂಡೇರಾವ, ಸಿದ್ದಲಿಂಗಯ್ಯ ಸ್ವಾಮಿ, ರಾಜು ಕಟ್ಟಿ, ಲಕ್ಷ್ಮಣ್ ರಂಜೊಳ್, ದೊಡ್ಡಪ್ಪ, ಬಸವರಾಜ್ ಪಾಟೀಲ್, ರಮೇಶ್, ಸತೀಶ್ ನಂದೂರ್, ರಾಮು ಮಂಗಾ, ಅನೇಕರು ಇದ್ದರು.

ಪ್ರತಿ ವರ್ಷ ಮಾನ್ಯಖೇಟ ಉತ್ಸವ ಮಾಡುವುದರ ಜೊತೆಗೆ ಪ್ರವಾಸಿ ಸ್ಥಳವನ್ನಾಗಿ ಹಾಗೂ, ಮಳಖೇಡ ಬದಲಾಗಿ ರಾಷ್ಟ್ರಕೂಟರ ಹೆಸರು ಇಟ್ಟ ಮಾನ್ಯಖೇಟವಾಗಿ ಮರು ನಾಮಕರಣ ಮಾಡಲಾಗುವುದು.

ನಾಡೋಜ ಮಹೇಶ ಜೋಶಿ
ಕಸಾಪ ರಾಜ್ಯಾಧ್ಯಕ್ಷರು ಬೆಂಗಳೂರು