ಮಾನ್ಪಡೆ ಧ್ವನಿ ಇಲ್ಲದವರ ಧ್ವನಿಯಾಗಿದ್ದರು: ರೇವುನಾಯಕ ಬೆಳಮಗಿ

ಕಲಬುರಗಿ,ಅ.21-ಮಾರುತಿ ಮಾನಪಡೆ ಅವರು ನನ್ನ ರಾಜಕೀಯ ಗುರು ಆಗಿದ್ದರು. ಧ್ವನಿ ಇಲ್ಲದವರ ಧ್ವನಿಯಾಗಿ ನ್ಯಾಯ ಕೊಡಿಸುವ ನಾಯಕರಾಗಿದ್ದರು. ಕಲ್ಯಾಣ ಕರ್ನಾಟಕದ ಧೀಮಂತ ಹೋರಾಟಗಾರರಾಗಿದ್ದ ಅವರು ರಾಜಕೀಯ ಜೀವನದಲ್ಲಿ ನಮಗೆ ಎಚ್ಚರಿಕೆ ಯಾಗಿದ್ದರು ಎಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ಹೇಳಿದರು.
ಕಮಲಾಪುರ ತಾಲ್ಲೂಕಿನ ಅಂಬಲಗಾ ಗ್ರಾಮದಲ್ಲಿ ಹಮ್ಮಿಕೊಮಡಿದ್ದ ಮಾರುತಿ ಮಾನಪಡೆ ಅವರ 3ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನಪಡೆ ಅವರು ಎಂದು ತಪ್ಪು ಮಾಡಲು ಅವಕಾಶ ನೀಡುತ್ತಿರಲಿಲ್ಲ. ಅನೇಕ ಬಾರಿ ಪೆÇೀಲಿಸರ ಏಟು ತಿಂದರು ಹೋರಾಟ ಮಾತ್ರ ಬಿಟ್ಟಿರಲಿಲ್ಲ. ಕತ್ತಲೆಗೆ ಬೆಳಕು ಆದವರು ಮಾನಪಡೆ ಅವರು. ಮಾನಪಡೆ ಅವರ ಆದರ್ಶ ಜೀವಂತ ಇರಬೇಕು. ಅದೇ ರೀತಿಯಲ್ಲಿ ಅಂಬಲಗಾ ಗ್ರಾಮದಲ್ಲಿ ಅವರ ಮೂರ್ತಿ ನಿರ್ಮಾಣ ಆಗಬೇಕು ಎಂದು ಹೇಳಿದ್ದರು. ಮಾನಪಡೆ ಅವರಂತೆ ಅವರ ಮಗ ಸುನೀಲ ಮಾನಪಡೆ ಬೆಳೆಯಲಿ ಮತ್ತು ನಾವು ಎಲ್ಲಾ ಸೇರಿ ಬೇಳಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸಿ.ಬಿ.ಪಾಟೀಲ ಓಕಳಿ ಅವರು ಮಾತನಾಡುತ್ತ, ಮಾನ್ಪಡೆ ಅವರ ನಂತರ ರಾಜ್ಯದಲ್ಲಿ ಡೆಮಾಕ್ರಟಿಕ್ ಮೂವಮೆಂಟ್ ನಿಂತು ಹೋದಂತಾಗಿದೆ. ರಾಜ್ಯದಲ್ಲಿ ಬಡವರ ಪರ ಧ್ವನಿ ಇಲ್ಲದಂತೆ ಆಗಿದೆ.
ಬಡ ಕುಟುಂಬದ ಹಿನ್ನೆಲೆಯಲ್ಲಿ ಬಂದು, ತುಳಿತಕ್ಕೆ ಒಳಗಾಗಿ ಕಷ್ಷಪಟ್ಟು ಬೆಳೆದ ಗಟ್ಟಿ ನಾಯಕ ಮಾನಪಡೆ ಅಂದರೆ ಜನರ ಲೀಡರ್À ಜನರ ಒಳಿಗಿನಿಂದ ಬಂದ ನಾಯಕ ಎಂದು ಹೇಳಿದರು.
ಮಾನಪಡೆ ಅವರು 1980ರ ವಿಧಾನ ಸಭೆಯ ಚುನಾವಣೆಯಲ್ಲಿ ಸ್ವಲ್ಪ ಅಂತರದಲ್ಲಿ ಪರಾಭವಗೊಂಡರು. ನೂರಾರು ಕೋಟಿ ಖರ್ಚು ಮಾಡಿ ಚುನಾವಣೆ ಮಾಡುವ ಕಾಲದಲ್ಲಿ ಮಾನಪಡೆ ಅವರಂತಹ ಪ್ರಾಮಾಣಿಕ ನಾಯಕರು ಚುನಾವಣೆ ರಾಜಕೀಯದಲ್ಲಿ ಯಶ್ವಸಿ ಯಾಗುವುದು ಕಷ್ಟ. ಬದಲಾವಣೆಯನ್ನು ಬಯಸುವ ಅಂತಹ ನಾಯಕ ಕಳೆದುಕೊಂಡು ಇಡೀ ರಾಜ್ಯವೇ ಬಡವಾದಂತಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕÀ ಶರಣಗೌಡ ಪಾಟೀಲ ಅಷ್ಟಗಿ ಅವರು ಮಾತಾನಾಡುತ್ತ, ಮಾನ್ಪಡೆ ಅವರು ಹೋರಾಟದ ಬಲದಿಂದ ರಾಜ್ಯ ಮಟ್ಟದಲ್ಲಿ ಗುರುತ್ತಿಸಿಕೊಂಡರು, ಅಂಗನವಾಡಿ, ಪೌರಕಾರ್ಮಿಕ, ದಿನಗೂಲಿ ನೌಕರರ ಪರವಾಗಿ ಹೋರಾಟ ಜೊತೆಗೆ ರೈತರ ಹೋರಾಟಗಾರರು ಆಗಿದ್ದರು, ಜಿಲ್ಲೆಯಲ್ಲಿ ತೊಗರಿ ಬೆಂಬಲ ಬೆಲೆಗಾಗಿ ಹೋರಾಟ ನಡೆಸಿ ಬೋರ್ಡ್ ರಚನೆ ಮಾಡಿ ತೊಗರಿಗೆ ವಾಣಿಜ್ಯ ಬೆಳೆಯಾಗಿ ಘೋಷಿದರು, ಅನೇಕ ಬಾರಿ ಈ ಹೋರಾಟದಲ್ಲಿ ಪೊಲೀಸರ ಲಾಠಿ ಏಟು ತಿಂದಿದ್ದಾರೆ. ಹೋರಾಟವನ್ನು ದಡಕ್ಕೆ ಮುಟ್ಟುಸುವವರೆಗೆ ಬಿಡುತ್ತಿರುಲಿಲ್ಲ. ಅನ್ಯಾಯದ ವಿರುದ್ದ ಧ್ವನಿ ಎಂದರೆ ಅದು ಮಾನಪಡೆ. ಧ್ವನಿ ಇಲ್ಲದವರೆಗೆ ಧ್ವನಿ ಆದವರು ಮಾನಪಡೆ, ಮಾನಪಡೆ ಅವರ ಪುಣ್ಯಸ್ಮರಣೆ ಆಚಿರಿಸುವ ಮೂಲಕ ಮುಂದಿನ ಪೀಳಿಗೆಗೆ ಮಾನಪಡೆ ಹೋರಾಟದ ಬದುಕು ಮಾದರಿ ಆಗಲಿ ಎಂದರು.
ಗ್ರಾಮ ಪಂಚಾಯತ್ ನೌಕರರ ಸಂಘದ ಮುಖಂಡ ನಾಗರಾಜ ಭೀಮಳ್ಳಿ ಅವರು ಮಾತನಾಡುತ್ತ, ಗ್ರಾಮ ಪಂಚಾಯತ್ ನೌಕರರಿಗೆ ಸಮಾಜದಲ್ಲಿ ಗೌರವ ನೀಡುವ ಕೆಲಸ ಮಾನಪಡೆ ಅವರು ಮಾಡಿದ್ದಾರೆ. 60,000 ಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್ ನೌಕರರಿಗೆ ಬದುಕು ಕಟ್ಟಿ ಕೊಟ್ಟಿದ್ದಾರೆ. ಮಾನಪಡೆ ಅವರ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನ್ಯಾಯದ ವಿರುದ್ದ ಮತ್ತು ಹಕ್ಕು ಪಡೆಯಲು ಹೋರಾಟ ಮಾಡಬೇಕು ಎಂದು ಹೇಳಿದರು.
ಕಾರ್ಯದರ್ಶಿ ಶಿವಾನಂದ ಕವಲಗಾ ಮಾತನಾಡಿದರು. ಕಸಾಪ ತಾಲೂಕ ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡುತ್ತ, ಕಸಾಪ ವತಿಯಿಂದ ಮುಂದಿನ ದಿನಗಳಲ್ಲಿ ಉಪನ್ಯಾಸ ಮಾಲಿಕೆ ಎರ್ಪಡಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಾಸ್ತವಿಕವಾಗಿ ಮಾತನಾಡಿದ ಸಲಗರ ಪಂಚಾಯತ ಸಿಬ್ಬಂದಿ ಗುಂಡಪ್ಪಾ ಕೊಳ್ಳುರೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರಿಗೆ ಮಾರುತಿ ಮಾನಪಡೆ ಅವರ ಕುರಿತ ಕಿರು ಪುಸ್ತಕ ನೀಡಿದರು.
ರೇವಪ್ಪ ಚಿಲಿ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಮಾಚಿ, ಬಸವರಾಜ ಸರಡಗಿ , ನಾಗಪ್ಪ ನಾಗೂರೆ, ಕುಪ್ಪಣ್ಣ ದಂಡಿನ್, ಸುರೇಶ ಕೊಳ್ಳುರೆ, ರಾಬೀಯಾ ಬೇಗಂ, ನಾಗರಾಜ ಬಿಮಹಳ್ಳಿ, ಮಾಳಪ್ಪ ಪೂಜಾರಿ, ಬಿಮಣ್ಣ ಭೂತೆ, ಅನಂತ ಪಾಟೀಲ, ಸಂಗಮೇಶ ಕಲಬುರ್ಗಿ, ನಾಗಪ್ಪ ಕಟಬಾರ, ಹನುಮಂತ ಚವ್ಹಾಣ, ಭೀಮಶಾ ಬಾಲ್ಕಿ, ರಾಹುಲ ಮುದ್ದಡಗಾ, ಅನಿಲ ಕೊಳ್ಳುರೇ, ಚನ್ನಬಸಪ್ಪ ಮಾಳಗೆ, ಅಂಬರಾಯ ಲೇಂಗಟಿ, ಪಕೀರಸಾಬ ಬಾಗವಾನ , ಅಂಬಾದಾಸ ಕಟಾರೆ ಉಪಸ್ಥಿತರಿದ್ದರು. ದಿಲೀಪ ಪೂಜಾರಿ ನಿರೂಪಣೆ ಮಾಡಿದರು. ಸುಭಾಷಚಂದ್ರ ವಾಲಿ ವಂದಿಸಿದರು