ಮಾನ್ಪಡೆಯಿಲ್ಲದ ಚಳವಳಿ ಬಲ ಕುಸಿದಂತಾಗಿದೆ

ಶಹಪುರ:ಅ.28:ಅಸ್ಪೃಶ್ಯತೆ, ದಲಿತರ ಹಕ್ಕಿಗಾಗಿ, ಅಸಮಾನತೆ, ಶೋಷಣೆಯ ವಿರುದ್ಧ ಬಿಡುವಿಲ್ಲದ ಹೋರಾಟ ನಡೆಸುತ್ತಲೇ ನಮ್ಮನ್ನಗಲಿದ ಮಾರುತಿ ಮಾನ್ಪಡೆಯವರು ಜೀವನವೇ ನಮಗೆ ಆದರ್ಶ ವಾಗಿದೆ ಎಂದು ರೈತ ಮುಖಂಡ ಚೆನ್ನಪ್ಪ ಅನೆಗುಂದಿ ಹೇಳಿದರು.

ನಗರದ ಎಪಿಎಂಸಿ ಸಭಾಂಗಣದಲ್ಲಿ ಸಾಮೂಹಿಕ ಸಂಘಟನೆಗಳ ವತಿಯಿಂದ ಮಂಗಳವಾರ ಆಯೋಜಿಸಲಾದ ಅಗಲಿದ ಮಹಾನ್ ನಾಯಕ ಮಾರುತಿ ಮಾನ್ಪಡೆಯವರ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕದ ಹೋರಾಟದ ಧ್ವನಿಯಾಗಿದ್ದರು. ಅವರ ಸಂಘಟನಾ ಚತುರತೆ, ಹೋರಾಟದ ರೂಪರೇಷೆಗಳ ಬಗ್ಗೆ ತಿಳಿಸುವ ಒಬ್ಬ ಶಿಕ್ಷಕರಾಗಿದ್ದರು.

ಅವರ ಜೀವನದ ಅತ್ಯಂತ ಕಷ್ಟದಿಂದ ಕೂಡಿದ್ದಾದರೂ ಅದರ ಬಗ್ಗೆ ಕಿಂಚಿತ್ತು ಚಿಂತೆಯಿಲ್ಲದೆ, ಸದಾ ಶೋಷಣೆಗೊಳಗಾದವರ, ನೊಂದವರ ಬಗ್ಗೆ ಚಿಂತಿಸುತ್ತಲೇ ಜೀವನಪೂರ್ತಿ ಕಳೆದವರು.ಅವರಿಲ್ಲದೆ ಚಳುವಳಿಗೆ ಬಲ ಕುಸಿತವಾಗಿದೆ ಎಂದು ಭಾವುಕರಾಗಿ ನುಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲರಾದ ಇಬ್ರಾಹಿಂ ಸಾಬ್ ಮತ್ತು ಆರ್ ಎಂ ಹೊನ್ನ ರೆಡ್ಡಿ, ಮಾನ್ಪಡೆ ಯವರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಮಾನವೀಯ ಕಳಕಳಿಯುಳ್ಳ ಗುಣ ಅವರಲ್ಲಿತ್ತು. ಅವರು ಜನಮನದಲ್ಲಿ ಬೆರೆತುಹೋಗಿದ್ದಾರೆ. ಸತ್ಯದ ಹಾದಿಯಲ್ಲಿ ನಡೆದ ಒಬ್ಬ ಸಾಧಕನಾಗಿದ್ದು ಅವರ ದೇಹ ಮಾತ್ರ ನಮ್ಮಿಂದ ದೂರವಾಗಿದೆ. ಅವರ ವಿಚಾರ ದಾರೆಗಳು ನಡೆ-ನುಡಿ ನಮ್ಮೊಳಗೆ ಅಡಗಿವೆ ಎಂದು ನುಡಿದರು.

ಈ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಸಾಹಿತಿ ಶಿವಣ್ಣ ಇಜೇರಿ, ಜೈಲಾಲ್ ತೋಟದ ಮನಿ, ಮಲ್ಲಯ್ಯ ಪೆÇೀಲಂಪಲ್ಲಿ, ಎಸ್.ಎಂ ಸಾಗರ, ದಾವಲ್ ಸಾಬ್ ನದಾಫ್, ರಂಗಣ್ಣ ಹೈಯ್ಯಾಳ, ಎಲ್.ಐ.ಸಿ ನೌಕರ ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಬಸಲಿಂಗಮ್ಮ ನಟೇಕರ, ಅಕ್ಷರ ದಾಸೋಹ ಕರ ಸಂಘದ ಗೌರವ ಅಧ್ಯಕ್ಷ ಸುನಂದ ಹಿರೇಮಠ, ಯಮನಮ್ಮ ದೋರನಹಳ್ಳಿ, ಈರಮ್ಮ ಹೈಯ್ಯಾಳ ಕರ, ಸಿದ್ದಯ್ಯ ಹಿರೇಮಠ, ಮಲ್ಲಿಕಾರ್ಜುನ ಮಾನ್ಪಡೆ, ಇಂದಿರಾ, ಚಂದಮ್ಮ, ನಿಂಗಣ್ಣ ನಟೇಕರ್, ಶೋಕಿ ಸಾಬ್ ಕನ್ಯಾಕೋಳೂರು, ಶರಣಪ್ಪ, ಮಲಿರ್ಂಗಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.