ಮಾನಸ.ಎಂ ನಗರಸಭೆ ನೂತನ ಆಯುಕ್ತೆ

ಹುಣಸೂರ,ನ.09:- ನಗರಸಭೆಯಲ್ಲಿ ಖಾಲಿ ಇದ್ದ ಪೌರಾಯುಕ್ತ ಸ್ಥಾನಕ್ಕೆ ಮಾನಸ.ಎಂ (ಕೆ.ಎಂ.ಎ.ಎಸ್‍ಗ್ರೇಡ್ 1) ರನ್ನು ನೇಮಕ ಮಾಡಿ ನಗರಾಭಿವೃದ್ಧಿಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಪೌರಾಯುಕ್ತರಾಗಿದ್ದ ಖಲೀಲ್‍ಸಾಬ್‍ರವರು ಸೆ.28 ರಂದು ಬಡ್ತಿ ಹೊಂದಿ ವರ್ಗಾವಣೆಯಾಗಿ ತೆರವಾಗಿದ್ದ ಸ್ಥಾನಕ್ಕೆ ಶ್ರೀಮತಿ ಮಾನಸರವರು ಬಂದಿದ್ದು, ಈ ಹಿಂದೆ ಇವರು ಶ್ರೀರಂಗಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರದ ಅಧಿಸೂಚನೆಯಂತೆ ಹುಣಸೂರು ನಗರಸಭೆಗೆ ಪೌರಾಯುಕ್ತರಾಗಿ ಬಂದು ಅಧಿಕಾರ ವಹಿಸಿಕೊಂಡಿದ್ದಾರೆ.