ಮಾನಸಿಕ, ಶಾರೀರಿಕ ಮತ್ತು ಆರೋಗ್ಯವಂತರಾಗಲು ಕ್ರೀಡೆ ಅವಶ್ಯಕಃ ಶ್ರೀದೇವಿ ಉತ್ಲಾಸರ್

ವಿಜಯಪುರ, ಜು.26-ಮಾನಸಿಕ, ಶಾರೀರಿಕ ಮತ್ತು ಆರೋಗ್ಯವಂತರಾಗಲು ಕ್ರೀಡೆ ಅವಶ್ಯಕವಾಗಿದೆ ಎಂದು ಕಾಂಗ್ರೇಸ್ ಮುಖಂಡರಾದ ಶ್ರೀದೇವಿ ಉತ್ಲಾಸರ್ ಹೆಳಿದರು.
ಜಂಬಗಿ ಗ್ರಾಮದಲ್ಲಿ ಹಜರತ ಪೀರ ಬಡೇಸಾಬ ದರ್ಗಾ ಉರುಸ ನಿಮಿತ್ಯ ವಾಲಿಬಾಲ್ ಕ್ರೀಡೆ ಹಮ್ಮಿಕೊಂಡ ಸಂದರ್ಭದಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.
ಯಂತ್ರಜ್ಞಾನದ ದಿನದಲ್ಲಿ ಆಟೋಟಗಳು ಮರೆಯಾಗುತ್ತಿವೆ. ಯುವಕ/ಯುವತಿಯರು ಮೋಬೈಲಗಳಿಗೆ ಬಲಿಯಾಗಿ ತಮ್ಮ ಜೀವನ ಯಾಂತ್ರಿಕ ಬದುಕಿನೊಂದಿಗೆ ಜೋಡಿಸಿಕೊಂಡು ಸಾಗುತ್ತಿದ್ದಾರೆ. ಯುವಕರು ಮೊಬೈಲ ಬಿಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಕ್ರೀಡೆ ಆರೋಗ್ಯದೆಡೆಗೆ ಒಯ್ಯುತ್ತದೆ. ಇಂತಹ ಕ್ರೀಡೆಗೆ ಜಂಬಗಿ ಗ್ರಾಮದವರು ಆಯೋಜನೆ ಹಮ್ಮಿಕೊಂಡಿದ್ದು ನಿಜವಾಗಿಯೂ ನನಗೆ ಸಂತಸವನ್ನುಂಟು ಮಾಡಿದೆ. ಇಂತಹ ಕ್ರೀಡೆಗಳು ಮೇಲಿಂದ ಮೇಲೆ ಜರುಗಲಿ ಗ್ರಾಮಸ್ಥರು ಕ್ರೀಡೆಗೆ ಪೆÇ್ರೀತ್ಸಾಹಿಸುವುದು ನಿಜವಗಿಯೂ ಶ್ಲ್ಯಾಘನೀಯ ವೆಂದು ಯುವಕರಿಗೆ ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಶ್ರೀ ಗುರುಬಸಯ್ಯ ಹಿರೇಮಠ ಸಾನಿಧ್ಯವಹಿಸಿದ್ದರು.ಮಾಳಿ ಸಮಾದ ಅಧ್ಯಕ್ಷ ಮಹಾದೇವ ದುಂಡಪ್ಪ ಮಲಗಾರ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಭಾವಿಮನಿ, ಯುವ ಮುಖಂಡ ಜಬ್ಬರ ಮುಲ್ಲಾ, ನಾಗಠಾಣ ಯೂತ ಕಾಂಗ್ರೇಸ್ ಉಪಾಧ್ಯಕ್ಷ ಬಸವರಾಜ ಆಲಗೊಂಡ, ದಲಿತ ಮುಖಂಡ ಸಿದ್ದು ತೋಟದ, ಸಂಜು ನಾಯ್ಕೋಡಿ, ವಿಠ್ಠಲ ಪೂಜಾರಿ, ವಸಂತ ಕಂಬೋಗಿ ಮುಂತಾದವರು ಇದ್ದರು.