ಮಾನಸಿಕ ರೋಗಿಗಳನ್ನು ಪ್ರೀತಿ ಹಾಗೂ ಸಹಾನುಭೂತಿಯಿಂದ ಕಾಣಬೇಕು-ಮನೋವೈದ್ಯ ಡಾ.ಆರ್.ಮಂಜುನಾಥ


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೩೧: ಸಂಶೋಧನೆಗಳ ಪ್ರಕಾರ ದೇಶದಲ್ಲಿ ನೂರಕ್ಕೆ ಶೇ.13.4 ರಷ್ಟು ಜನರು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಸ್ಕಿಜೋಫ್ರೇನಿಯಾ ಶೇ.1 ರಷ್ಟು ಜನರಲ್ಲಿ ಕಂಡುಬಂದಿದೆ. ಮಾನಸಿಕ ಖಾಯಿಲೆಗಳನ್ನು ಸಹ ಸಂಪೂರ್ಣವಾಗಿ ಗುಣ ಪಡಿಸಬಹುದಾಗಿದೆ. ಮಾನಸಿಕ ರೋಗಿಗಳನ್ನು ಪ್ರೀತಿ ಹಾಗೂ ಸಹಾನುಭೂತಿಯಿಂದ ಕಾಣಬೇಕು ಎಂದು ಮನೋವೈದ್ಯ ಡಾ.ಆರ್.ಮಂಜುನಾಥ ಹೇಳಿದರು.ನಗರದ ಶ್ರೀ.ಕಬೀರಾನಂದ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಕಿಜೋಫ್ರೇನಿಯಾ ಎನ್ನುವುದು ತೀವ್ರತರವಾದ ಮಾನಸಿಕ ಕಾಯಿಲೆಯಾಗಿದೆ. ಇದರಲ್ಲಿ ರೋಗಿಯು ನೈಜ ಜಗತ್ತಿನ ಜೊತೆಗೆ ಸಂಪರ್ಕದಲ್ಲಿ ಇರುವುದಿಲ್ಲ. ಯೋಚನೆ ಮಾಡುವ ರೀತಿ, ಮಾತನಾಡುವ ರೀತಿಯಲ್ಲಿ ವ್ಯತ್ಯಾಸ ಕಂಡುಬುರತ್ತದೆ. ಸ್ಕಿಜೋಪ್ರೇನಿಯಾದಿಂದ ಬಳಲುವರು ದೈನಂದಿನ ಕಾರ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲರಾಗುತ್ತಾರೆ. ಸ್ಕಿಜೋಫ್ರೇನಿಯಾ ಕಾಯಿಲೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾದ ಚಿಕಿತ್ಸೆ ದೊರೆಯುತ್ತದೆ. ಉತ್ತಮ ಸಮಾಲೋಚನೆ ಮೂಲಕ ಸಂಪೂರ್ಣವಾಗಿ ಗುಣಮುಖರಾಗಬಹುದು. ನಂತರ ಸಾಮಾನ್ಯರಂತೆ ಜೀವಿಸಬಹುದು. ಈ ಕಾಯಿಲೆ ಇರುವ ವ್ಯಕ್ತಿಗಳನ್ನು ಸಮಾಜದಲ್ಲಿ ಕಳಂಕ ಮತ್ತು ತಾರತಮ್ಯದಿಂದ ಕಾಣಬಾರದು. ಇವರ ಬಗ್ಗೆ ಹೆಚ್ಚಿನ ಸಹಾನೂಭೂತಿ ತೋರಬೇಕು. ಇವರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡಬೇಕು.