ಮಾನಸಿಕ ಮತ್ತು ದೈಹಿಕ ಕಾರ್ಯಕ್ಷಮತೆ ಕಾಪಾಡಿಕೊಂಡು ಕಾರ್ಯನಿರ್ವಹಿಸಲು ಕರೆ

(ಸಂಜೆವಾಣಿ ವಾರ್ತೆ)
ವಿಜಯಪುರ :ಆ.19: ಇಂದಿನ ದಿನಮಾನಗಳಲ್ಲಿ ಪೆÇಲೀಸ್‍ರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಿ ಕೊಡುವಲ್ಲಿ ಹೆಚ್ಚಿನ ಶ್ರಮವಹಿಸಬೇಕು. ಭವಿಷ್ಯದಲ್ಲಿ ಪೆÇಲೀಸ್‍ರ ಮಕ್ಕಳು ಐ.ಎ.ಎಸ್., ಐಪಿಎಸ್ ಡಾಕ್ಟರ್ ಎಂಜಿನೀಯರ್‍ಗಳಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಶಂಕರ ಮಾರಿಹಾಳ ಹೇಳಿದರು.
ಇತ್ತೀಚೆಗೆ ನಗರದ ಡಿಎಆರ್ ಘಟಕದ ಆರಕ್ಷಕ ಸಿಬ್ಬಂದಿಗಳು 2008 ರಲ್ಲಿ ಪೆÇಲೀಸ್ ಇಲಾಖೆಗೆ ನೇಮಕಾತಿ ಹೊಂದಿ ಪ್ರಸ್ತುತ 2023 ನೇ ಸಾಲಿಗೆ 15 ನೇ ವರ್ಷದ ಸಂಭ್ರಮ ಆಚರಣೆ ಮತ್ತು ಸ್ನೇಹ ಸಮ್ಮಿಲನದ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ವಹಿಸಿ ಮಾತನಾಡಿದರು.
ಪೆÇಲೀಸ್ ಸಿಬ್ಬಂದಿಗಳು ದಿನದ 24 ಘಂಟೆಗಳ ಕಾಲ ಈ ಸಮಾಜದ ಸೇವೆಗೈಯವಂತಹ ಸಂದರ್ಭದಲ್ಲಿ ಕರ್ತವ್ಯದ ಒತ್ತಡಗಳ ಮಧ್ಯೆಯೂ ಎಲ್ಲರೂ ಒಂದೆಡೆ ಸೇರಿಕೊಂಡು ಹಬ್ಬದ ವಾತವರ ನಿರ್ಮಾಣ ಮಾಡಿರುವುದು ಶ್ಲಾಘನೀಯ ಸಂಗತಿಯಾಗಿದ್ದು, ಜಿಲ್ಲೆಯಲ್ಲಿ ಕಾಲ ಕಾಲಕ್ಕೆ ಇಂತಹ ಕಾರ್ಯಕ್ರಮಗಳು ಪೆÇಲೀಸ್ ವಲಯಗಳಲ್ಲಿ ನಿರಂತರವಾಗಿ ಜರುಗಬೇಕು ಎಂದರು.
ಪಾಶ್ಚತ್ಯ ರಾಷ್ಟ್ರಗಳು ಭಾರತೀಯ ಸಂಸ್ಕøತಿಯನ್ನು ಅಳವಡಿಸಿಕೊಳ್ಳುತ್ತಿದ್ದರೆ, ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಳವಳಕಾರಿ ಸಂಗತಿ. ಪಾಶ್ಚಾತ್ಯ ಸಂಸ್ಕೃತಿಗೆ ದಾಸರಾಗದೆ ನಮ್ಮ ದೇಶಿಯ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ಹೇಳುವುದರ ಜೊತೆಗೆ ಪೆÇಲೀಸ್‍ರು ಮಾನಸಿಕ ಮತ್ತು ದೈಹಿಕ ಕಾರ್ಯಕ್ಷಮತೆಯನ್ನು ಕಾಪಾಡಿಕೊಂಡು ಕಾರ್ಯ ನಿರ್ವಹಿಸಲು ಉತ್ತಮ ಆರೋಗ್ಯವನ್ನು ಉಳಿಸಿಕೊಂಡು ಹೋಗುವ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧೀಕ್ಷಕರು ಎನ್.ಬಿ.ಜಾಧವ, ಕಂಪನಿ ವಿಭಾಗ ಡಿಎಆರ್ ಆರಕ್ಷಕ ನಿರೀಕ್ಷಕ ಐ.ಎಸ್ ತೇಲಿ, ಪೊಲೀಸ್ ವಾಹನ ಸಾರಿಗೆ ವಿಭಾಗ ಡಿಎಆರ್ ಆರಕ್ಷಕ ನಿರೀಕ್ಷಕ ಎಸ್.ಆರ್. ವನಂಜಕರ, ಆರ್.ಎಸ್.ಐ ನಿವೃತ್ತ ಬಿ.ಎಸ್. ಬಿರಾದಾರ, ಆರ್.ಎಸ್.ಐ. ನಿವೃತ್ತ ಎಸ್.ಬಿ. ಉಣ್ಣಿಭಾವಿ ಸೇರಿದಂತೆ ಇನ್ನಿತರ ಡಿಎಆರ್ ಎಲ್ಲ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.