ಮಾನಸಿಕ ನೆಮ್ಮದಿಗೆ ಪ್ರತಿನಿತ್ಯ ಬೆಳಗಿನ ಜಾವದಲ್ಲಿ ದೇವರ ಸ್ಮರಣೆ ಅಗತ್ಯ

ಸಂಜೆವಾಣಿ ವಾರ್ತೆ
ಹುಮನಾಬಾದ್:ಫೆ.29: ಪ್ರತಿಯೊಬ್ಬರ ಮಾನಸಿಕ ನೆಮ್ಮದಿಗಾಗಿ ಪ್ರತಿನಿತ್ಯ ಬೆಳಗಿನ ಜಾವದಲ್ಲಿ ದೇವರ ಸ್ಮರಣೆ ಅಗತ್ಯವಾಗಿದೆ ಎಂದು ಇಟಗಾ : ಸಂಸ್ಥಾನದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಹೇಳಿದರು. ತಾಲೂಕಿನ ಚಿತ್ತಕೋಟಾ ಗ್ರಾಮದಲ್ಲಿ – ಸೋಮಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಬೆಳಗ್ಗೆ ದೇವಸ್ಥಾನದಲ್ಲಿ ಧಾರ್ಮಿಕ ವಿವಿಧ ವಿಧಾನದಂತೆ ಪೂಜಾ ಕಾರ್ಯಕ್ರಮಗಳು ಜರುಗಿದವು. ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಪಲ್ಲಕ್ಕಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಶಂಕರಲಿಂಗ ಮಹಾರಾಜರು, ಸೊಂತ ಮಠ. ಮಾತನಾಡಿದರು. ಧಾರ್ಮಿಕ ಪರಂಪರೆ ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣ ಮತ್ತು ಮೌಲ್ಯಾಧಾರಿತ ಶಿಕ್ಷಣ ಸಂದ ನೀಡಲು ಪಾಲಕರು ಹಾಗೂ ಹುರುಡಿ ಪೆÇೀಷಕರು ಮುಂದಾಗಬೇಕು. ಹೇಳಿದರು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜರುಗುದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಭಜನೆ, ಕೀರ್ತನೆ ಸೇರಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು. ಪಲ್ಲಕ್ಕಿ ಮೆರವಣಿಗೆ ರಥ ಮೈದಾನಕ್ಕೆ ತಲುಪಿದ ಬಳಿಕ ವಿಶೇಷ ಪೂಜೆ ಸಲ್ಲಿಸಿ ನೆರೆದ ಸಾವಿರಾರು ಭಕ್ತ ಮಧ್ಯೆ, ಅದ್ಧೂರಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ದಾರಿಯುದ್ದಕ್ಕೂ ಭಕ್ತಾಧಿ ಗಳು ರಥದ ಮೇಲೆ ಬೆಂಡು, ಬತೋಷಾ, ಖಾರೀಕ್, ಬಾದಮ್, ಬಾಳೆ ಹಣ್ಣು, ಕೊಬ್ಬರಿ ಸೇರಿ ನಾನಾಬಗೆಯ ತಿಂಡಿ ಪದಾರ್ಥಗಳನ್ನು ಎಸೆದು ಜಯಘೋಷ ಕೂಗಿ ಸಂಭ್ರಮಿಸಿದರು. ಈ ವೇಳೆ ಕಲ್ಲೂರ ಹಿರೇಮಠದ ಮೃತ್ಯುಂಜಯ ಶಿವಯೋಗಿ ಶಿವಾಚಾರ್ಯರು, ಡೊಂಗರಗಾಂವ ರೇವಣಸಿದ್ದೇಶ್ವರ ಮಠದ ಉದಯರಾಜ ಯೋಗೇಂದ್ರ ಪಾರೇಶವಾಡದ ಶಿವಾಚಾರ್ಯರು, ಶಂಭುಲಿಂಗೇಶ್ವರ ಶಿವಾಚಾರ್ಯರು ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಹಳ್ಳಿಖೇಡ (ಕೆ) ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಪಾಟೀಲ್, ಗ್ರಾಪಂ ಸದಸ್ಯರಾದ ವೀರಣ್ಣಾ ಪೂಜಾರಿ, ಶಾರಾದಾಬಾಯಿ ಪ್ರಭುರಾವ ಅಂಬೆ, ಕಾವೇರಿ ಮಲ್ಲಯ್ಯಾ ಸ್ವಾಮಿ ಸಿಂಧನಕೇರಿ ಇದ್ದರು.