ಮಾನಸಿಕ ನೆಮ್ಮದಿಗೆ ಪುರಾಣ ಅವಶ್ಯ


ಸಂಜೆವಾಣಿ ವಾರ್ತೆ
ಕುರುಗೋಡು:ಏ.03: ಪಟ್ಟಣದ ರಾಮಲಿಂಗೇಶ್ವರ ಶಿವಯೋಗಿ ಮಠದಲ್ಲಿ 35ನೇ ವರ್ಷದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಶನಿವಾರ ದಿಂದ ಪ್ರಾರಂಭಗೊಂಡಿದ್ದು, ಏಪ್ರಿಲ್ 10ರಂದು ವೀರಭದ್ರೇಶ್ವರ ಮೂರ್ತಿ ಮೆರವಣಿಗೆಯೊಂದಿಗೆ ಪುರಾಣ ಮುಕ್ತಾಯಗೊಳ್ಳಲಿದೆ.
ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಭೂಕೈಲಾಸ ಮೇಲುಗದ್ದುಗೆ ಹಿರೇಮಠ ಸಂಸ್ಥಾನ ಗುರುಶಾಂತವೀರ ಶಿವಾಚಾರ್ಯ ಶ್ರೀಗಳು,
ಮನುಷ್ಯ ತನ್ನ ಎಲ್ಲ ಅಗತ್ಯಗಳಲ್ಲಿ ಅಂತರ್ಜಾಲದ ಮೂಲಕ ಅಂಗೈಯಲ್ಲಿ ಪೂರೈಸಿಕೊಳ್ಳುತ್ತಿದ್ದಾರೆ. ಆದರೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ ಎಂದು ವ್ಯಕ್ತಪಡಿಸಿದರು.ನೆಮ್ಮದಿಗಾಗಿ ಪುರಾಣ, ಪುಣ್ಯಕಥೆಗಳ ಶ್ರವಣ ಅಗತ್ಯವಾಗಿದೆ ಎಂದರು.
ಮೇಲುಮಠದ ಷಡಾಕ್ಷರಿಸ್ವಾಮಿ ಪುರಾಣ ಪ್ರವಚನ ನೀಡಲಿದ್ದಾರೆ. ಕೊಂಚಿಗೇರಿಯ ನಾಗರಾಜಶಿವ ಸಂಗೀತ ಸೇವೆಸಲ್ಲಿಸಲಿದ್ದಾರೆ. ಸೋಮಶೇಖರಯ್ಯ ಸ್ವಾಮಿ ತಬಲ ಸಾಥ್ ನೀಡಲಿದ್ದಾರೆ.
ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಶ್ರೀ, ಹೂವಿನಹಡಗಲಿಯ ಗವಿಸಿದ್ದೇಶ್ವರ ಶ್ರೀ, ಮೈನಳ್ಳಿ ಸಿದ್ದೇಶ್ವರ ಶಿವಾಚಾರ್ಯ ಶ್ರೀ, ಕುರುಗೋಡು ವಿರಕ್ತ ಮಠದ ನಿರಂಜನ ಪ್ರಭುದೇವರು, ಸಿದ್ದರಾಂಪುರ ಮಠದ ಚಿದಾನಂದಯ್ಯ ತಾತನವರು, ಕಲ್ಲುಕಂಭ ರುದ್ರಮುನಿ ತಾತನವರು, ಕ್ಯಾದಿಗೆಹಾಳು ಗಂಗಾಧರ ತಾತನವರು, ಸುಂಕೇಶ್ವರ ಮಾರುತಿ ತಾತನವರು ಮತ್ತು ಎಚ್.ವೀರಾಪುರ ಜಡೇಶ ತಾತನವರು ಮತ್ತು ರಾಮನ ಗೌಡ ತಾತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.