ಮಾನಸಿಕ ನೆಮ್ಮದಿಗೆ ಕ್ರೀಡಾಕೂಟ ಸಹಕಾರಿ: ಪ್ರೊ. ಸಿದ್ದು ಪಿ. ಆಲಗೂರ

ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.15: ಶಿಕ್ಷಕರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ದೈಹಿಕ ಮತ್ತು ಮಾನಸಿಕ ವೃದ್ಧಿಯ ಜೊತೆ ಜೊತೆಗೆ ಎಲ್ಲರೊಂದಿಗೆ ವಿಶ್ವಾಸ, ಪ್ರೀತಿ, ಸ್ನೇಹ ವೃದ್ಧಿಗೂ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ವಿ.ಎಸ್.ಕೆ ವಿವಿ ಕುಲಪತಿಗಳಾದ ಪ್ರೊ. ಸಿದ್ದು ಪಿ. ಆಲಗೂರ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕ್ರೀಡಾ ಮೈದಾನ ಮುಖ್ಯ ಆವರಣದಲ್ಲಿ, ಹಮ್ಮಿಕೊಂಡಿದ್ದ ಆಜಾದಿ ಕಿ ಅಮೃತ್ ಮಹೋತ್ಸವ 2022 ಅಂಗವಾಗಿ ‘ವಿಶ್ವವಿದ್ಯಾಲಯದ ಸಿಬ್ಬಂದಿ ಕ್ರೀಡಾಕೂಟ-2022’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾತನಾಡುತ್ತಾ, ಕ್ರೀಡಾಕೂಟದಲ್ಲಿ ಸೋಲು-ಗೆಲವುಗಳು ಸಾಮಾನ್ಯ, ಅವುಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿರುತ್ತದೆ ಎಂದರು. 2022-23ನೇ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗಾಗಿ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುವುದು ಎಂದು ಹೇಳಿದರು.
ವಿಶ್ವವಿದ್ಯಾಲಯದ ಎಲ್ಲಾ ಸ್ನಾತಕೋತ್ತರ ಕೇಂದ್ರಗಳ ಕಲಾ, ವಿಜ್ಞಾನ, ವ್ಯವಹಾರ, ಸಮಾಜ ವಿಜ್ಞಾನ ನಿಕಾಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗಾಗಿ ಎರಡು ದಿನಗಳ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಕ್ರಿಕೆಟ್, ಚೆಸ್, ಬ್ಯಾಡ್ಮಿಂಟನ್ (ಸಿಂಗಲ್ಸ್ & ಡಬಲ್ಸ್), ಟೇಬಲ್ ಟೆನ್ನಿಸ್ (ಸಿಂಗಲ್ಸ್ & ಡಬಲ್ಸ್), ಮತ್ತು ಥ್ರೋಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್. ಸಿ. ಪಾಟೀಲ್, ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಓಲೇಕಾರ್, ವಿತ್ತಾಧಿಕಾರಿ ಡಾ. ಕೆ ಸಿ ಪ್ರಶಾಂತ್, ಡಾ. ಸಂಪತ್ ಕುಮಾರ ನೋಡಲ್ ಅಧಿಕಾರಿಗಳು, ಕ್ರೀಡಾ ವಿಭಾಗದ ಪ್ರಭಾರ ನಿರ್ದೇಶಕರಾದ ಡಾ. ಶಶಿಧರ್ ಕೆಲ್ಲೂರ್, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Attachments area