ಮಾನಸಿಕ ನೆಮ್ಮದಿಗೆ ಆಧ್ಯಾತ್ಮಿಕತೆ ಅಗತ್ಯ

ಕಲಬುರಗಿ.ಜ.8: ವಿವಿಧ ಕಾರಣಗಳಿಂದ ಮನಸ್ಸು ಆಗಾಗ್ಗೆ ಅಶಾಂತಿಯನ್ನು ಅನುಭವಿಸುತ್ತದೆ. ಇದಕ್ಕೆ ಬದಲಾವಣೆಯ ವಾತಾವರಣ ಬೇಕು. ಆಧ್ಯಾತ್ಮಿಕ, ನೈಸರ್ಗಿಕ ಸ್ಥಳಗಳ ಭೇಟಿಯಿಂದ ಅಲ್ಲಿನ ಸಂಸ್ಕøತಿ, ಪರಂಪರೆಯ ಜ್ಞಾನ ದೊರೆಯುವದರ ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಅವರು ಶಹಾಬಾದ ತಾಲೂಕಿನ ಸುಕ್ಷೇತ್ರ ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನಕ್ಕೆ ಜೇವರ್ಗಿಯ ಸರ್ಕಾರಿ ಪಿಯು ಕಾಲೇಜಿನ ಸಿಬ್ಬಂದಿಯು ಗುರುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ‘ಆಧ್ಯಾತ್ಮಿಕ ಕ್ಷೇತ್ರ ಭೇಟಿ ಕಾರ್ಯಕ್ರಮ’ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಹಿರಿಯ ಉಪನ್ಯಾಸಕ ರವೀಂದ್ರಕುಮಾರ ಬಟಗೇರಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸುಕ್ಷೇತ್ರಗಳಿವೆ. ಅದರಲ್ಲಿ ಮಾಲಗತ್ತಿಯ ಈ ಸ್ಥಳದಲ್ಲಿ ನೈಸರ್ಗಿಕ ತಾಣ, ತೀರ್ಥಕುಂಡ, ನಾಗ ದೇವತೆ ಸೇರಿದಂತೆ ಅನೇಕ ದೇವತೆಗಳಿದ್ದು, ಅನೇಕ ಭಕ್ತರು ಭೇಟಿ ನೀಡುವ ಪುಣ್ಯಕ್ಷೇತ್ರವಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುಜಾತಾ ದೇಶಪಾಂಡೆ, ಶರಣಮ್ಮ ಭಾವಿಕಟ್ಟಿ, ನಹಿಮಾ ನಾದಿನ್, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ., ಸಿಬ್ಬಂದಿಗಳಾದ ಪ್ರಕಾಶ ಪಾಟೀಲ, ನೇಸರ ಬೀಳಗಿ ಇದ್ದರು.