ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಪೂರಕ: ಡಾ. ರೇಷ್ಮಾ ಕೌರ್

ಬೀದರ:ಅ.19:ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಬರುತ್ತದೆ. ಜೊತೆಗೆ ಅವರಲ್ಲಿ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಶಾಲೆಯಲ್ಲಿ ಕ್ರೀಡೆ ದೇಶದ ಪ್ರಗತಿಯಲ್ಲಿ ಶಿಕ್ಷಣದ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಶಿಕ್ಷಕರು ಕಾಳಜಿ ತೋರಬೇಕು. ತಂತ್ರಜ್ಞಾನದಲ್ಲಿ ನಾವು ಸಾಕಷ್ಟು ಮುಂದುವರೆದಿದ್ದೇವೆ. ಅದರಂತೆ ಕ್ರೀಡಾರಂಗದಲ್ಲಿ ಕೂಡ ಅಷ್ಟೇ ಪ್ರಮಾಣದಲ್ಲಿ ಮುಂದೆ ಬರೋಣ ಎಂದು ಸಲಹೆ ಮಾಡಿದರು. ಯಾವುದೇ ದೇಶದ ಅಭಿವೃದ್ಧಿಯನ್ನು ಬಹುತೇಕವಾಗಿ ಆ ದೇಶದ ಆರ್ಥಿಕ ಬೆಳವಣಿಗೆಯ ಮೇಲೆಯೇ ನಿರ್ಧರಿಸಲಾಗುತ್ತದೆ. ಆದರೆ, ಶೈಕ್ಷಣಿಕ ರಂಗ, ಕ್ರೀಡಾರಂಗಗಳು ಕೂಡ ಅದಕ್ಕೆ ಪೂರಕವಾಗಿರುತ್ತವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರೀಡಾ ರಂಗದ ಬೆಳವಣಿಗೆಗೆ ಒತ್ತು ಕೊಡಬೇಕಿದೆ ಎಂದರು.

ಗುರು ನಾನಕ ಶಾಲೆ ಆಯೋಜಿಸಿದ 2023-24 ವಾರ್ಷಿಕ ಕ್ರೀಡಾಕೂಟದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಮುಖ್ಯ ಅತಿಥಿಯಾಗಿ ಪಲ್ಗೊಂಡು ಮಾತನಾಡಿದರು. ಅವರು ಮುಂದು ವರೆದು ಮಾತನಾಡುತ್ತ ಗುರುನಾನಕ ಶಾಲೆಯು ಶಿಸ್ತುಬದ್ಧವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತದೆ ಎಂಬುದಕ್ಕೆ ಇವತ್ತಿನ ಈ ಕಾರ್ಯಕ್ರಮ ಕೂಡ ಒಂದು ಸಾಕ್ಷಿಯಾಗಿದೆ. ಬೀದರ ಜಿಲ್ಲೆಯ ಕೀರ್ತಿಯು, ಶಾಲೆಯ ಕೀರ್ತಿಯು ವಿಶ್ವಮಟ್ಟದಲ್ಲಿ ಬೆಳಗುವ ದಿಶೆಯಲ್ಲಿ ತಾವೆಲ್ಲರೂ ಕ್ರೀಡೆಯಲ್ಲಿ ಆಸಕ್ತಿ ತೋರಬೇಕು. ಪ್ರತಿಯೊಬ್ಬರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ಮಾಡಿದರು.

ಇಂದಿನ ಮಕ್ಕಳು ಹೆಚ್ಚಾಗಿ ಕಂಪ್ಯೂಟರ್, ಇಂಟರನೆಟ್ ಬಳಸುವತ್ತಲೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮನೆಯಲ್ಲಿ ಕುಳಿತು ಮೊಬೈಲ್‍ನಲ್ಲಿ ಗೇಮ್ ಆಡಿದರೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆ ಸರಿಯಾಗಿ ಆಗುವುದಿಲ್ಲ. ಇದನ್ನು ಎಲ್ಲ ಪಾಲಕರು ಅರಿತು. ತಮ್ಮ ಮಕ್ಕಳಿಗೆ ಶಾಲೆಗಳಲ್ಲಿ ನಡೆಯುವ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಪ್ರೇರೇಪಿಸಬೇಕು ಎಂದು ಸಲಹೆ ಮಾಡಿದರು. ಮಕ್ಕಳು ಜಂಕ್ ಫೂಡ್ ತಿನ್ನಬಾರದು, ಹೆಚ್ಚಾಗಿ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದರು.

ಸಮಾರಂಭದಲ್ಲಿ ಶಾಲೆಯ ಪ್ರಾಚಾರ್ಯರಾದ ಶ್ರೀ ರಾಜುಜ ಎನ್., ಶ್ರೀ ಅಮಜದ ಅಲಿ, ಶ್ರೀಮತಿ ಆರೀಫ್ ಹಾದಿ, ಸಂಯೋಜಕರಾದ ಶ್ರೀ ಹನುಮಾನ ಮತ್ತು ಪೋಷಕರು ಉಪಸ್ಥಿತರಿದ್ದರು.