ಮಾನಸಿಕ, ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.03: ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿ ಇರಬೇಕಾದರೆ ಕ್ರೀಡೆಗಳು, ಆಟೋಟಗಳು ಅತ್ಯವಶ್ಯಕ ಎಂದು ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಏಳನೇ ತರಗತಿ ಹಾಗೂ ಎಂಟನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದ ವಿವಿಧ ಆಟೋಟಗಳನ್ನು ಪ್ರಾರಂಭಿಸಿ ಮಾತನಾಡಿದ ಅವರು ಈಗಾಗಲೇ ಪರೀಕ್ಷೆಗಳು ಮುಗಿದಿವೆ.ಬೇಸಿಗೆ ರಜೆಗಳು ಏಫ್ರಿಲ್11 ರಿಂದ ಆರಂಭವಾಗುತ್ತವೆ.ರಜಾ ದಿನಗಳಲ್ಲಿ ಕಣ್ಣಾಮುಚ್ಚಾಲೆ, ಹಗ್ಗ ಜಗ್ಗಾಟ, ಕುಂಟಬಿಲ್ಲೆ, ಲಗೋರಿ, ಕಬಡ್ಡಿ, ಕುಂಟಾಟ, ಮರಕೋತಿ, ಚದುರಂಗ, ಚೆಸ್, ಕಟ್ಟಿಮನೆ ಮುಂತಾದ ಆಟಗಳನ್ನು ಆಡುವುದರ ಜೊತೆ ಗ್ರಂಥಾಲಯ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ಶಾಲೆಯಲ್ಲಿ ಶಿಕ್ಷಕರು ಹೇಳಿದ ಬೇಸಿಗೆ ಮನೆ ಕೆಲಸವನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು. ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.