ಮಾನಸಿಕ ಖಿನ್ನತೆಯಿಂದ‌ ಮುಖ್ಯಪೇದೆ ಆತ್ಮಹತ್ಯೆ

ಬೆಂಗಳೂರು,ಏ.30-ಮಾನಸಿಕ ಖಿನ್ನತೆಯಿಂದ ಪೊಲೀಸ್ ಮುಖ್ಯಪೇದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಅಗಳಕುಪ್ಪೆಯಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್
ಉಮೇಶ್ (37) ಆತ್ಮಹತ್ಯೆಗೆ ಶರಣಾದವರು.
ಕಳೆದ ಐದು ತಿಂಗಳ ಹಿಂದೆ ತನ್ನ ನಾಲ್ಕೂವರೆ ವರ್ಷದ ಮಗಳು ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನೆಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಇವರು ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು. ಇದರಿಂದ ಮನನೊಂದು ತನ್ನ ಬೈಕ್‌ನಲ್ಲಿ ಜಮೀನಿನ ಬಳಿ ತೆರಳಿದ್ದಾರೆ.ಬೈಕ್ ನ್ನು ಜಮೀನಿನ ಬಳಿ ನಿಲ್ಲಿಸಿ ಅಲ್ಲಿದ್ದ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಡಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.