ಮಾನಸಿಕ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು,ಫೆ.೨೪- ನಗರದ ಮಡ್ಡಿಪೇಟೆಯ ನಿವಾಸಿ ರುಬೀನಾಬೇಗಂ ಅವರು ನಗರಸಭೆಯಿಂದ ಕಟ್ಟಡ ಪರವಾನಿಗೆ ಪಡೆದು ಸ್ವಂತ ಮನೆ ಕಟ್ಟಲು ಮುಂದಾದರೆ ಸ್ಥಳೀಯ ಜುನೈದ್, ಜುಬೇರ್, ಹುಸೇನ್ ಬಿ ಹಾಗೂ ಷಾಬುದ್ದೀನ್ ಎಂಬ ವ್ಯಕ್ತಿಗಳು ನನ್ನ ಮೇಲೆ ಬಲತ್ಕಾರ, ಮಾನಸಿಕ ಕಿರುಕುಳ ನೀಡುವದಲ್ಲದೇ ಹಣ ನೀಡುವಂತೆ ಪಿಡಿಸುತ್ತಿದ್ದಾರೆ.
ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರುಬೀನಾಬೇಗಂ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ನಗರಸಭೆಯ ಸಿಬ್ಬಂದಿ, ಪಿಎಸ್‌ಐ. ಮತ್ತು ವಕೀಲರು ಶಾಮೀಲಾಗಿ ನನ್ನನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರ ಕಿರುಕುಳ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಮಹಿಳೆ ರುಬೀನಾಬೇಗಂ ಅಳಲು ತೋಡಿಕೊಂಡರು.
ನನ್ನ ತಂದೆಯವರು ನನಗೆ ಮತ್ತು ನನ್ನ ತಂಗಿಯ ಹೆಸರಿನಲ್ಲಿ ಉಡುಗೊರೆಯಾಗಿ ನೀಡಿರುವ ಮಡ್ಡಿಪೇಟೆಯ ನಿವೇಶನದಲ್ಲಿ ನಗರಸಭೆಯಿಂದ ಕಟ್ಟಡ ಪರವಾನಿಗೆ ಪಡೆದುಕೊಂಡು ನನ್ನ ಎಲ್ಲಾ ದಾಖಲಾತಿಗಳನ್ನು ಕಾನೂನಾತ್ಮಕವಾಗಿ ಸರಿಯಾಗಿದ್ದು ಕಟ್ಟಡ ಕಟ್ಟಲು ಪ್ರಾರಂಭಿಸಿದ್ದು ಇರುತ್ತದೆ ಕಟ್ಟಡ ಪ್ರಾರಂಭದ ದಿನದಂದು ಸದರಿ ಜುನೈಟ್ ಮತ್ತು ಕುಟುಂಬದವರ ಸಮಕ್ಷಮದಲ್ಲಿಯೇ ಅವರ ಜಾಗಕ್ಕೆ ಧಕ್ಕೆಯಾಗದಂತೆ ಸೆಟ್ ಬ್ಯಾಕ್ ಬಿಟ್ಟು ನಮ್ಮ ನಿವೇಶನದ ಅಳತೆಯನ್ನು ಮಾಡಲಾಗಿ ಕೆಲಸ ಪ್ರಾರಂಭ ಮಾಡಲಾಯಿತು. ನಂತರ ಜುನೈದ್ ಮತ್ತು ಆತನ ಸಹೋದರರಿಬ್ಬರು ದುರುದ್ದೇಶದಿಂದ ಕಟ್ಟಡದ ಹತ್ತಿರ ಬಂದು ತಮ್ಮ ಮೊಬೈಲ್ ನಿಂದ ವೀಡಿಯೋ ಮಾಡಿಕೊಂಡು ಹೋಗಿದ್ದು ಇರುತ್ತದೆ.
ಆದರೆ ಒಂದೇ ಕುಟುಂಬದವರಾದ ಜುನೈದ್ ತಂದೆ ಪುಬುದ್ದೀನ್‌ಜುಬೇರ್ ತಂದೆ ಷಾಬುದ್ದೀನ್, ಹುಸೇನ್ ಗಂಡ ಷಾಬುದ್ದೀನ್ (ತಾಯಿ) ಮತ್ತು ಹಾಬುದ್ದೀನ್(ತಂದೆ) ಇವರೆಲ್ಲರೂ ಕೂಡಿಕೊಂಡು ನಮ್ಮಿಂದ ಹಣವನ್ನು ಕೇಳುವ ದುರುದ್ದೇಶದಿಂದ ನಗರಸಭೆಯ ಸಿಬ್ಬಂದಿಗಳಿಗೆ ಹಾಗೂ ಮಾರ್ಕೆಟ್ಯಾರ್ಡ್ ಪೊಲೀಸ್ ಠಾಣೆಯ ಪಿ.ಎಸ್.ಐ. ಹಾಗೂ ಪೊಲೀಸರಿಗೆ ಮತ್ತು ವಕೀಲನಿಗೆ ಲಂಚ ಕೊಟ್ಟು ಇವರೆಲ್ಲ ಅಕ್ರಮವಾಗಿ ಕೂಡಿಕೊಂಡು, ನಾನು ನನ್ನ ಮನೆ ಕಟ್ಟಲು ಪ್ರಾರಂಭಿಸಿದಾಗಿನಿಂದ ನಿಮ್ಮ ವಿರುದ್ಧ ದೂರು ನೀಡಿ ಕೆಲಸ ನಿಲ್ಲಿಸುವುದಾಗಿ ಹೇಳಿ ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಾ ಮಾನಸಿಕ ಹಿಂಸೆ ನೀಡಿ, ಹಣಕೊಡುವಂತೆ ಪೀಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿಯವರೆಗೆ ಯಾವ ಅಧಿಕಾರಿಗಳು ನನ್ನ ಕಟ್ಟಡದ ನಿವೇಶನದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡದೇ, ನನ್ನ ಕಾನೂನಾತ್ಮಕ ದಾಖಲೆಗಳನ್ನು ನೋಡದೇ ಕಟ್ಟಡ ಸರಿಯಾಗಿದೆಯೇ ಇಲ್ಲವೇ ಎಂದು ಪರಿಶೀಲಿಸದೇ ಸುಖಾ ಸುಮ್ಮನೆ ನನ್ನ ವಿರುದ್ಧ ಸುಳ್ಳು ದೂರು ನೀಡಿ ನನಗೆ ಮಾನಸಿಕವಾಗಿ ಹಿಂಸೆ ನೀಡಿ ಬ್ಯಾಕ್‌ಮೇಲ್ ಮಾಡುತ್ತಿದ್ದಾರೆ.
ಆದ್ದರಿಂದ ದಯಾಳುಗಳಾದ ತಾವುಗಳು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಇವರ ಕಿರುಕುಳ ತಾಳದೇ ನಾನು ಸದರಿ ಕಟ್ಟಡದ ಸ್ಥಳದಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೇ ಎಂದು ಮಹಿಳೆ ದೂರಿದರು.
ಈ ಸಂದರ್ಭದಲ್ಲಿ ರುಬೀನಾಬೇಗಂ ಸೇರಿದಂತೆ ಉಪಸ್ಥಿತರಿದ್ದರು.