ಮಾನಸಿಕ ಕಾಯಿಲೆ ತಡೆಗಟ್ಟುವ ಕಾರ್ಯಕ್ರಮ

ಗಂಗಾವತಿ ಜ.12: ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ಮಾನಸಿಕ ಕಾಯಿಲೆಗಳನ್ನು ತಡೆಗಟ್ಟುವ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಮಾತನಾಡಿ, ಮಾನಸಿಕ ಕಾಯಿಲೆಯನ್ನು ತಡೆಗಟ್ಟಬೇಕಾದರೆ ಮಾನಸಿಕ ಒತ್ತಡ ಇರಬಾರದು. ಆದ ಕಾರಣ ಮಾನಸಿಕ ಒತ್ತಡ ಇದ್ದರೆ ದೇಹದಲ್ಲಿ ಆರೋಗ್ಯ ಪರಿಣಾಮ ಬೀರುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾನಸಿಕ ತಜ್ಞ ಡಾ. ವಾದಿರಾಜ, ಗ್ರಹ ರಕ್ಷಕ ಮಹಮ್ಮದ್ ಖಾನ್, ಸಿಬ್ಬಂದಿಗಳಾದ ಯಮನೂರಪ್ಪ ಬಜೇಂತ್ರಿ, ಶಿವಾನಂದ , ಕೆ.ಆರ್.ರಾಜು ಇದ್ದರು.