ಮಾನಸಿಕ ಒತ್ತಡ ನಿವಾರಣೆಗೆ ಶಿಸ್ತು ಬಹಳ ಮುಖ್ಯ

ರಾಯಚೂರು, ಜ.೧೪-ಯಾವುದೇ ವ್ಯಕ್ತಿಯ ಮಾನಸಿಕ ಒತ್ತಡ ಕಡಿಮೆಯಾಗಬೇಕಾದರೆ ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ವಿಭಾಗದ ಮಾನಸಿಕ ತಜ್ಞ ವೈದ್ಯರಾದ ಡಾ.ವೈ ಪತ್ತಾರ್ ಹೇಳಿದರು.
ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲಾ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಜಿಲ್ಲಾ ಕೇಂದ್ರ ಸಿಬ್ಬಂದಿಗಳಿಗೆ ಕೋವಿಡ್- ೧೯ ರ ತುರ್ತು ಸ್ಥಿತಿಯಲ್ಲಿ ಮಾನಸಿಕ ಆರೋಗ್ಯ ಒತ್ತಡ ನಿರ್ವಹಣೆ, ಜೀವನ ಕೌಶಲ್ಯ,ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತು ಒಂದು ದಿನದ ತರಬೇತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತಾಡಿದರು.
ಸರ್ವೇ ಸಾಮಾನ್ಯವಾಗಿ ಈ ಸಮಾಜದಲ್ಲಿ ಶೇಕಡಾ ೨೦ ರಿಂದ ೨೫ ರಷ್ಟು ಜನರು ಮಾನಸಿಕ ಖಾಯಿಲೆಗಳಿಂದ ನರುಳಿತ್ತುರುತ್ತಾರೆ.ಇದನ್ನು ತಾತ್ಸಾರವಾಗಿ ಕಾಣಬಾರದು. ಒಂದು ವೇಳೆ ಇದನ್ನು ಹೀಗೆಯೇ ಬಿಟ್ಟರೆ ಶಾಶ್ವತವಾಗಿ ಮಾನಸಿಕ ರೋಗಿ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.ಎಂದರು.
ಹಾಗಾಗಿ ಮನುಷ್ಯ ತನ್ನ ಸುತ್ತಲಿನ ಪರಿಸರದೊಂದಿಗೆ ಅತ್ಯಂತ ಶಿಸ್ತುಬದ್ಧವಾಗಿರಬೇಕು.ಸಮಯ ಪಾಲನೆ ಇರಬೇಕು.ಭಯದ ವಾತಾವರಣದಲ್ಲಿ ಎಂದಿಗೂ ಜೀವಿಸಬಾರದು.ತೃಪ್ತ ಜೀವನ ಸಂತೋಷದಿಂದ ಎಲ್ಲರೊಂದಿಗೆ ಬೆರೆತು ಪ್ರೀತಿ,ಸ್ನೇಹ ಸಂಯಮ ಮುಖ್ಯ. ತಾಳ್ಮೆ,ಸಹನೆ,ಅಸೂಯೆ,ಸಂಶಯ ಪಡುವಂತಹ ಗುಣಗಳಿಂದ ದೂರ ಬದುಕಬೇಕು.ಆಗ ಮಾತ್ರ ಮನುಷ್ಯ ಈ ಮಾನಸಿಕ ಅಸ್ವಸ್ವಸ್ಥೆತೆಯಿಂದ ಪಾರಾಗಲು ಸಾಧ್ಯ ಎಂದು ಹೇಳಿದರು. ಈ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಕಾರಾಗೃಹದ ಅಧೀಕ್ಷರು ಬಿ.ಆರ್.ಅಂದಾನಿ ಉದ್ಘಾಟಿಸಿ ಮಾತಾಡಿ, ವ್ಯಕ್ತಿಯು ಯಾವುದೇ ಅನಗತ್ಯವಾಗಿ ಯಾವ ಒತ್ತಡಗಳಿಗೆ ಈಡಾಗಬಾರದು.ಸಿಕ್ಕ ಬದುಕನ್ನು ತುಂಬಾ ಸಹೃದಯದಿಂದ ಸ್ವೀಕರಿಸಿ ಮುನ್ನೆಡಯಬೇಕು.ಸರ್ಕಾರಿ ನೌಕರರಿಗೆ ಕೆಲಸದ ಅವಧಿಯಲ್ಲಿ ಎದುರಾಗುವ ಮಾನಸಿಕ ಒತ್ತಡಗಳ ನಿವಾರಣೆಗೆ ಇಂದಿನ ದಿನಗಳಲ್ಲಿ ಇಂತಹ ತರಬೇತಿಗಳ ಅಗತ್ವವಿದೆ ಎಂದರು. ಈ ಸಂದರ್ಭದಲ್ಲಿ ಕಾರಾಗೃಹದ ಜೈಲರ್ ಆದ ಬಸವರಾಜ್ ಪಾಟೀಲ್,ಬೋಧಕರಾದ ತಾಯರಾಜ್ ಮರ್ಚೆಟ್ಹಾಳ್,ಆರೋಗ್ಯ ಇಲಾಖೆಯ ಮಾನಸಿಕ ವಿಭಾಗದ ಸಿಬ್ಬಂದಿ ಅರುಣ ಮತ್ತು ಇತರರು ಭಾಗವಹಿಸಿದ್ದರು.